ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಯಾಗಿ ಪುತ್ತೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿರುವ ನವೀನ್ ಭಂಡಾರಿ ಎಚ್. ಜು. 3ರಂದು ಅಧಿಕಾರ ಸ್ವೀಕರಿಸಿದರು.
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಅಧ್ಯಕ್ಷ, ಸದಸ್ಯರುಗಳ ಅಧಿಕಾರಿ ಅವಧಿ ಜೂ.30ಕ್ಕೆ ಪೂರ್ಣಗೊಂಡಿದ್ದು, ಉಪ್ಪಿನಂಗಡಿ ಮತ್ತು ೩೪-ನೆಕ್ಕಿಲಾಡಿ ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಯಾಗಿ ನವೀನ್ ಭಂಡಾರಿ ಅವರನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಕಗೊಳಿಸಿತ್ತು. ಅದರಂತೆ ಅವರು ಉಪ್ಪಿನಂಗಡಿಯ ಆಡಳಿತಾಧಿಕಾರಿ ಅಧಿಕಾರ ಸ್ವೀಕರಿಸಿದರು. ೩೪-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರವನ್ನು ಜು. ೪ರಂದು ಪಡೆಯುವುದಾಗಿ ತಿಳಿಸಿದರು. ನವೀನ್ ಭಂಡಾರಿ ಅವರು ಕಡಬ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸ್ವಚ್ಛತೆಗೆ ಆಧ್ಯತೆ:
ಪಂಚಾಯಿತಿ ಆಡಳಿತಾಧಿಕಾರಿ ಅಧಿಕಾರ ಸ್ವೀಕರಿಸಿದ ಬಳಿಕ “ಸುದ್ದಿ”ಯೊಂದಿಗೆ ಮಾತನಾಡಿದ ಅವರು ಪಂಚಾಯಿತಿ ವ್ಯಾಪ್ತಿ ಅದರಲ್ಲೂ ಪೇಟೆ ಸ್ವಚ್ಚತೆಗೆ ಆದ್ಯತೆ ನೀಡುವುದಾಗಿ ತಿಳಿಸಿದಾಗಿ ತಿಳಿಸಿದರು.