HomePage_Banner
HomePage_Banner
HomePage_Banner
HomePage_Banner

ಕಾರ್ಯದಕ್ಷತೆಯ ಫಲ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಫಲ | ಮಕ್ಕಳ ಮನಸ್ಸು ಗೆದ್ದ ಸರಕಾರ, ಶಿಕ್ಷಣ ಇಲಾಖೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ‘ಅಂತೂ ಎಸ್ಸೆಎಸ್ಸೆಲ್ಸಿ ಪರೀಕ್ಷೆ ಮುಗಿಯಿತು’ ಏಪ್ರಿಲ್ 9ನೇ ದಿನಾಂಕದಂದು ಬಿಡಬೇಕಾಗಿದ್ದ ನಿಟ್ಟುಸಿರನ್ನು ಜುಲೈ 3ರ ತನಕ ಬಿಗಿದಿಟ್ಟುಕೊಂಡದ್ದು, ಈ ವರೆಗೆ ಕಂಡರಿಯದ ಸವಾಲಾಗಿತ್ತು. ಮಕ್ಕಳಿಗೆ ಸಹಜವಾಗಿ ಪರೀಕ್ಷಾ ಭಯ ಆದರೆ ಈ ವರ್ಷ ಪರೀಕ್ಷೆ ನಡೆಯುತ್ತದೋ ಇಲ್ಲವೋ ಎಂಬ ಭಯವು ಸೇರಿಕೊಂಡಿತು. ತಾರಕಕ್ಕೇರುತ್ತಿರುವ ಕೊರೋನಾ ವೈರಸ್ ಅಟ್ಟಹಾಸ ಒಂದು ಕಡೆಯಾದರೆ, ಪರೀಕ್ಷೆಯನ್ನು ನಡೆಸುವುದು ಹೇಗೆ ಎಂಬ ಸವಾಲು ಇನ್ನೊಂದು ಕಡೆ. ಪರೀಕ್ಷೆಯೇ ನಡೆಸುವುದು ಬೇಡ ಎಂದು ನ್ಯಾಯಾಲಯದ ಮೊರೆ ಹೋಗಿಯೂ ಆಯಿತು. ದಿನಕ್ಕೊಂದು ವರದಿಗಳು, ಬೇರೆ ಬೇರೆ ರಾಜ್ಯಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಗೊಳಿಸಿದ್ದು, ಸಿಬಿಎಸ್ ಪರೀಕೆಗಳು ರದ್ದಾದುದು, ಮಕ್ಕಳ ಮನಸ್ಸನ್ನು ಹೈರಾಣಾಗಿಸಿತು. ಕೊನೆಗೂ ಸುಪ್ರಿಂ ಕೋರ್ಟ್‌ನಿಂದ ಸರ್ಕಾರಕ್ಕೆ ನೈತಿಕ ಬೆಂಬಲ, ಪರೀಕ್ಷೆ ನಡೆಸಲೇ ಬೇಕೆಂಬ ಪೋಷಕರ, ಅಧಿಕಾರಿಗಳ ಅಭಿಪ್ರಾಯವನ್ನು ಸವಾಲಾಗಿ ಸ್ವೀಕರಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿಸಲು ಕಾರ್ಯತಂತ್ರರೂಪಿಸಿತು. ಮೇಲಾಧಿಕಾರಿಗಳ ದಿಟ್ಟ ಕ್ರಮಗಳು ಪ್ರಶಂಸೆಗೆ ಕಾರಣವಾಯಿತು. ಆರೋಗ್ಯ ಇಲಖೆಯು, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಪಂಚಾಯತ್ ರಾಜ ಇಲಾಖೆಯನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸಾಕಷ್ಟು ಸಲಹೆಗಳನ್ನು ಪಡೆದು ಪೂರ್ವಭಾವಿ ಸಭೆ ನಡೆಸಿತು.

ಪರೀಕ್ಷಾ ಕೇಂದ್ರಗಳಲ್ಲಿ 20ಮಕ್ಕಳನ್ನು ಒಂದು ಕೋಣೆಯಲ್ಲಿ ಕೂರಿಸುವ ವ್ಯವಸ್ಥೆ ಮಾಡಲಾಯಿತು. ಪರೀಕ್ಷಾ ಕೇಂದ್ರಗಳನ್ನು ಸಾನಿಟೈಸರ್ ಮಾಡಲಾಯಿತು. ಸಾಕಷ್ಟು ಸಿಬ್ಬಂದಿಗಳನ್ನು ನೇಮಿಸಲಾಯಿತು. ಪ್ರತಿ ಸಂಸ್ಥೆಯವರಿಗೆ ಪೋಷಕರ ಸಭೆಯನ್ನು ಕರೆಯಲು ಸೂಚಿಸಿ ಕೈಗೊಳ್ಳುವ ಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ಪತ್ರವನ್ನು ನೀಡಿತು. ಯಾವ ಪರೀಕ್ಷಾ ಕೇಂದ್ರದಲ್ಲಿ ಯಾವ ಕೋಣೆಯಲ್ಲಿ ಪರೀಕ್ಷೆ ನಡೆಯುತ್ತದೆ ಎಂದು ತಿಳಿಸಲಾಯಿತು. ಮಕ್ಕಳ ಆರೋಗ್ಯದ ಬಗ್ಗೆ, ಮಾಸ್ಕ್ ಧರಿಸುವ ಬಗ್ಗೆ ಭಯ ಮುಕ್ತ ವಾತಾವರಣದಲ್ಲಿ ಪರೀಕ್ಷೆ ಬರೆಯುವ ಬಗ್ಗೆ ಮಾಹಿತಿಯನ್ನು ಪೋಷಕರಿಗೆ ತಿಳಿಸಲಾಯಿತು. ಅಲ್ಲದೆ ಪ್ರತಿ 20 ಮಗುವಿಗೆ ಒಬ್ಬ ನೋಡೆಲ್ ಶಿಕ್ಷಕರನ್ನು ನೇಮಿಸಿ ಪರೀಕ್ಷೆಗೆ ಹಾಜರಾಗಲು ಪ್ರೇರೆಪಿಸಲಾಯಿತು. ಮನೆಗೆ ಬಂದ ಮೇಲೂ ಖಾತ್ರಿ ಪಡೆಸಿಕೊಳ್ಳಲಾಯಿತು. ಅನಾರೋಗ್ಯ ಪೀಡಿತರ ಮಗುವಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಯಿತು. ಮಕ್ಕಳ ಸೇವೆಗೆ ಆಶಾ ಕಾರ್ಯಕರ್ತರನ್ನು, ಆರೋಗ್ಯ ಕಾರ್ಯಕರ್ತೆಯರನ್ನು, ಸ್ಕೌಟ್ ಗೈಡ್ಸ್ ಘಟಕವನ್ನು ಯತೇಚ್ಛವಾಗಿ ಬಳಸಿಕೊಳ್ಳಲಾಯಿತು. ಪರೀಕ್ಷೆಯು ಭಯ ಮುಕ್ತ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಇಲಾಖಾಧಿಕಾರಿಗಳು ನಡೆಸಿದ ಕಾರ್ಯ ಮಕ್ಕಳ, ಪೋಷಕರ ಮನಸ್ಸನ್ನು ಗೆಲ್ಲಿಸಿತು. ಎಸ್ಸೆಸ್ಸೆಲ್ಸಿ ಪರೀಕ್ಷೆ ಗಜಪ್ರಸಸವದಂತಾದರೂ ಸುಲಲಿತವಾಗಿ ನಡೆದಿರುವುದು ಶ್ಲಾಘನೀಯ. ಪೋಷಕ ವೃಂದ, ಸರಕಾರ, ಶಿಕ್ಷಣ ಇಲಾಖೆಗೆ ಖುಷಿಯಾಗಿದೆ.

 

✍🏻ತಾರಾನಾಥ ಸವಣೂರು, ಪ್ರಭಾರ ಮುಖ್ಯಗುರು
ಸ.ಹಿ.ಪ್ರಾ.ಶಾಲೆ ಜಿಡೆಕಲ್ಲು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.