ಪುತ್ತೂರು: ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ಪದಗ್ರಹಣ ಸಮಾರಂಭವನ್ನು ಯಂಗ್ ಬ್ರಿಗೇಡ್ ಸೇವಾದಳ ಪುತ್ತೂರು ಇವರು ಗಿಡವನ್ನು ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ಆಚರಿಸಿದ್ದಾರೆ.
ಗೋಳಿಕಟ್ಟೆ ವಾರ್ಡ್ ನಂ 29 ರ ಮೂಡೋಡಿ ಯ ಪಿ. ಕೆ. ರೆಸಿಡೆನ್ಸಿ ಯಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲು ಎಲ್ ಇ ಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಯೂಥ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ಅರ್ಶದ್ ದರ್ಬೆ ಮಾತನಾಡಿ ಡಿ. ಕೆ. ಶಿವಕುಮಾರ್ ರವರ ಕಾರ್ಯವೈಖರಿಯನ್ನು ವಿವರಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯಂಗ್ ಬ್ರಿಗೇಡ್ ಅಧ್ಯಕ್ಷರಾದ ಅಭಿಷೇಕ್ ಬೆಳ್ಳಿಪ್ಪಾಡಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಮತ್ತು ಯಂಗ್ ಬ್ರಿಗೇಡ್ ಸೇವಾದಾಳ್ ಪುತ್ತೂರು ಅಧ್ಯಕ್ಷರಾದ ರಂಜಿತ್ ಬಂಗೇರ .ಕೆ ಅವರು ಮಾತನಾಡಿ ಇಂದು ನಾವು ವಿತರಿಸುತ್ತಿರುವ ಗಿಡಗಳನ್ನು ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ನಟ್ಟು ಅದಕ್ಕೆ ನೀರು ಅಥವ ಗೊಬ್ಬರ ಹಾಕಿ ಹೇಗೆ ಅದನ್ನ ಮರವನ್ನಾಗಿ ಬೆಳೆಸುತ್ತೀರೋ ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಳೆಸುವ ಕಾರ್ಯ ನಮ್ಮಿಂದಾಗಬೇಕು ಇಂದು ಹೆಳುತ್ತ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಹಿರಿಯ ಕಾರ್ಯಕರ್ತರಾದಂತಹ ಬಿ. ಕೆ. ಮೂಸಾ ಹಾಜಿ ಕುಂಜೂರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕರ್ಯದರ್ಶಿ ದಿನೇಶ್, ಮೊಯ್ದು ಖುನ್ಹಿ ಕುಂಜೂರು ಯಂಗ್ ಬ್ರಿಗೇಡ್ ಕೊಶಾಧಿಕಾರಿ ಶೆರೀಫ್ ಬಲ್ನಾಡ್, ಸದಸ್ಯರಾದ ಮನ್ಸೂರ್ ಬಲ್ನಾಡ್, ರಾಜಕಿರಣ್, ವಿಶಾಂಕ್ ಭಟ್, ಫಾರ್ಸಾನ್ ಕಬಕ, ದೀಕ್ಷಿತ್, ದಿನೇಶ್, ಇಕ್ಬಾಲ್ ಮಡಿಕೇರಿ, ಖಲಂದರ್ ಸೂಪರ್ ಟೈರ್, ಶಮೀರ್ ಬಾಯಂಬಾಡಿ, ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕಾರ್ಯಕರ್ತರನ್ನು ಸ್ಥಳೀಯ ನಗರಸಭಾ ಸದಸ್ಯ ಕಾಯ್ರಕ್ರಮದ ಉಸ್ತುವಾರಿ ಮೊಹಮ್ಮದ್ ರಿಯಾಝ್ .ಕೆ ರವರು ಸ್ವಾಗತಿಸಿದರು. ಯಂಗ್ ಬ್ರಿಗೇಡ್ ಸದಸ್ಯರಾದ ಸಿನಾನ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.