- ಕಾರ್ಯಕರ್ತರಲ್ಲಿ ಹೊಸ ಆಶಾಭಾವನೆ ಮೂಡಿದೆ: ಅನಿತಾ ಹೇಮನಾಥ ಶೆಟ್ಟಿ
ಪುತ್ತೂರು: ಕೆಪಿಸಿಸಿ ಯ ನೂತನ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ನೇಮಕವಾಗಿರುವುದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸಿನ ಜೊತೆ ಆಶಾಭಾವನೆ ಮಾಡಿದೆ. ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ನೆಟ್ಟನಿಗೆ ಮುಡ್ನೂರು ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.
ಜು. 2ರಂದು ಕಾವು ಹೇಮನಾಥ ಶೆಟ್ಟಿಯವರ ` ಕಾವು ಶೆಟ್ಟಿ ನಿಲಯದಲ್ಲಿ ನಡೆದ ಡಿಕೆಶಿ ಪ್ರತಿಜ್ಞಾ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಸದಸ್ಯರು,ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷದ ಅಭಿಮಾನಿಗಳಲ್ಲರು ಒಂದಾಗಿ ಸಂವಿಧಾನ ಮತ್ತು ಪಕ್ಷದ ಪೀಠಿಕೆ ಯನ್ನು ಓದುವ ಮೂಲಕ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಸ್ವತಃ ತಾವೇ ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ ಡಿಕೆಶಿ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಕಾವು ಧಿವ್ಯನಾಥ್ ಶೆಟ್ಟಿ , ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಶಿವರಾಮ ಮಣಿಯಾಣಿ ,ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶಂಕರ , ಪುತ್ತೂರು ಪುರಸಭೆ ಮಾಜಿ ಉಪಾಧ್ಯಕ್ಷ ಲಾನ್ಸಿ ಮಸ್ಕರೇನ್ಸ್ , ನೇಮಾಕ್ಷಾ ಸುವರ್ಣ ಪುತ್ತೂರು, ,ಪುತ್ತೂರು ಸಾಮಾಜಿಕ ಜಾಲತಾಣದ ಸಹಸಂಚಾಲಕರಾದ ರೆಹಮಾನ್ ಸಂಪ್ಯ , ನಾಗೇಶ್ ಅಚಾರ್ಯ, ಕೇಶವ ಪೂಜಾರಿ, ಮಹಮ್ಮದ್ ಕುಂಞಿ , ಗೋಪಾಲ ಪಾಟಾಲಿ ,ಶಿವಕುಮಾರ್ ಸಿಆರಸಿ ಕೌಡಿಚಾರ್ ಸರೋಜಿನಿ , ನೂಜಿಬೈಲು ಜಯಪ್ರಕಾಶ್ ರೈ ,ಡೆಂಬಾಳೆ ಜಗನ್ನಾಥ ರೈ , ಅಬ್ದುಲ್ ರೆಹಮಾನ್ ಕಾವು , ವಿಮಲಾ ರೈ , ನಳಿನಾಕ್ಷೀ, ಸಲ್ಮಾ ,ನವೀನಾ ,ಚಿತ್ರಾ,ನಿರ್ಮಲಾ , ರವೀಂದ್ರ , ಇಬ್ರಾಹಿಂ ಕಾವು , ಷಾಹ ಅಮ್ಚಿನಡ್ಕ , ಕೊರಗಪ್ಪ ಗೌಡ , ಹಾಗೂ ಇನ್ನಿತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ಮಧ್ಯಾಹ ಬೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.