ವಿಟ್ಲ: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಇದರ 156ನೇ ಕ್ಯಾಂಪ್ ವಿಟ್ಲ ದ ಸರಕಾರಿ ಆಸ್ಪತ್ರೆಯಲ್ಲಿ ರೆಡ್ ಕ್ರಾಸ್ ಸೊಸೈಟಿ, ಹಾಗೂ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ವಿಟ್ಲ ಹಾಗೂ ಮಂಗಲಪದವು ಸೆಕ್ಟರ್ ವತಿಯಿಂದ ಬ್ಲಡ್ ಸೈಬೋ ಇದರ ೧೫೭ನೇ ಕ್ಯಾಂಪ್ ಉಕ್ಕುಡ ಮಹಿಳಾ ಶರೀಅತ್ ಕಾಲೇಜಿನಲ್ಲಿ ಜೂ.೨೮ರಂದು ನಡೆಯಿತು.
ದೇರಳಕಟ್ಟೆ ಯೇನಪೋಯ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ವಿಟ್ಲ ಸೌತ್ ಸೆಕ್ಟರ್ ಹಾಗೂ ಕನ್ಯಾನ ಸೆಕ್ಟರ್ ವತಿಯಿಂದ ನಡೆಯಿತು. ಎರಡು ಕ್ಯಾಂಪ್ ಗಳಲ್ಲಿ ಒಟ್ಟಾಗಿ ೧೮೦ ಯುನಿಟ್ ರಕ್ತ ಸಂಗ್ರಹವಾಗಿದೆ. ಬ್ಲಡ್ ಸೈಬೋ ನಾಯಕರು ಗಳಾದ ಕರೀಮ್ ಕದ್ಕಾರ್ ಬೋಳಂತೂರು, ಇಮ್ರಾನ್ ರೆಂಜಲಾಡಿ, ಹಂಝ ಮಂಚಿ, ರಝಾಕ್ ಬೈರಿಕಟ್ಟೆ ಹಾಗೂ ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷರಾದ ಸಲೀಂ ಹಾಜಿ ಬೈರಿಕಟ್ಟೆ, ಜಿಲ್ಲಾ ಸದಸ್ಯರಾದ ಅಬ್ದುರ್ರ್ಅಹ್ಮಾನ್ ಶರಫಿ ಮೂಡಂಬೈಲು, ವಿಟ್ಲ ಡಿವಿಷನ್ ಅಧ್ಯಕ್ಷರಾದ ಅಬೂಬಕ್ಕರ್ ಹಿಮಮಿ ಸಖಾಫಿ, ನಾಯಕರಾದ ಅಬ್ದುಲ್ ಖಾದರ್ ಕೊಡಂಗಾಯಿ, ಜಲೀಲ್ ಒಕ್ಕೆತ್ತೂರು, ಅಶ್ಫಾಕ್ ಟಿಪ್ಪುನಗರ ಮೊದಲಾದವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.