HomePage_Banner
HomePage_Banner
HomePage_Banner
HomePage_Banner

ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ, ಕಂದಾಯ ಅಧಿಕಾರಿಗಳ ಮಧ್ಯಸ್ಥಿಕೆ | ಸೊರಕೆ ದಲಿತ ಕುಟುಂಬದ ದಾರಿ ವಿವಾದ ಇತ್ಯರ್ಥ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಮಾರು ೧೫ ವರ್ಷಗಳಿಂದ ರಸ್ತೆಗಾಗಿ ಹೋರಾಟ ಮಾಡುತ್ತಿದ್ದ ದಲಿತ ಕುಟುಂಬಕ್ಕೆ ಕೊನೆಗೂ ನ್ಯಾಯ ಸಿಕ್ಕಿದ್ದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಮತ್ತು ಪುತ್ತೂರು ಕಂದಾಯ ಇಲಾಖೆ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ವಿವಾದ ಇತ್ಯರ್ಥಗೊಂಡಿದ್ದು ರಸ್ತೆ ನಿರ್ಮಿಸುವಂತೆ ತಹಶೀಲ್ದಾರ್ ಆದೇಶ ನೀಡಿದ್ದು ಕಾಮಗಾರಿ ಆರಂಭಗೊಂಡಿದೆ.

ಏನಿದು ರಸ್ತೆ ವಿವಾದ…?
ಸರ್ವೆ ಗ್ರಾಮದ ಸೊರಕೆ ನಿವಾಸಿ ದಿ.ಪೊಡಿಯ ಮೊಗೇರ ಅವರ ಪತ್ನಿ ಚನಿಯಾರು ಅವರ ಮನೆಗೆ ತೆರಳುವ ರಸ್ತೆಯು ಕಾಲುದಾರಿಯಾಗಿತ್ತು. ಸುಮಾರು ೧ ಕಿಮೀ ದೂರಕ್ಕೆ ಕಾಲು ದಾರಿಯಿದ್ದು ಮನೆಯವರು ನಡೆದುಕೊಂಡೇ ಮನೆಗೆ ತೆರಳುತ್ತಿದ್ದರು. ಕಾಲು ದಾರಿಯನ್ನು ರಸ್ತೆ ನಿರ್ಮಿಸಿಕೊಡುವಂತೆ ಚನಿಯಾರು ಕುಟುಂಬ ಕಳೆದ ೧೫ ವರ್ಷಗಳಿಂದ ವಿವಿಧ ಇಲಾಖೆ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳಿಗೆ ಮನವಿ ಮಾಡಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದರು. ಆದರೆ ಚನಿಯಾರು ಅವರ ಮನೆಗೆ ತೆರಳುವ ಕಾಲು ದಾರಿಯ ಅಕ್ಕ ಪಕ್ಕದ ಜಾಗವು ಖಾಸಗಿ ವ್ಯಕ್ತಿಗಳ ಸ್ವಾಧೀನದಲ್ಲಿದ್ದ ಕಾರಣ ಅಡ್ಡಿಯಾಗಿತ್ತು. ಈ ಹಿಂದೆ ಸ್ಥಳಕ್ಕೆ ತೆರಳಿ ಕಂದಾಯ ಇಲಾಖೆ ಅಧಿಕಾರಿಗಳು ಪರಿಶಿಲನೆ ನಡೆಸಿದ್ದರು. ಆದರೆ ವಿವಾದ ಇತ್ಯರ್ಥಪಡಿಸಲು ಸಾಧ್ಯವಾಗಿರಲಿಲ್ಲ. ಖಾಸಗಿ ವ್ಯಕ್ತಿಗಳ ತಕರಾರು ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದರಿಂದ ಚನಿಯಾರು ಕುಟುಂಬ ಕಾನೂನಿನ ಮೂಲಕ ಹೋರಾಟ ನಡೆಸುತ್ತಿತ್ತು. ಚನಿಯಾರು ಅವರ ಮೊಮ್ಮಕ್ಕಳಾದ ಆಶಾಲತಾ ಹಾಗೂ ಬೇಬಿ ಎಸ್ ಅವರು ನಿರಂತರ ಕಾನೂನು ಹೋರಾಟವನ್ನು ಕೂಡಾ ನಡೆಸುತ್ತಾ ಬಂದಿದ್ದರು. ಮಾತ್ರವಲ್ಲದೇ ಗಂಗಾ ಕಲ್ಯಾಣ ಯೋಜನೆ ಮುಖಾಂತರ ಈ ಕುಟುಂಬಕ್ಕೆ ನಾಲ್ಕು ವರ್ಷಗಳ ಹಿಂದೆ ಕೊಳವೆಬಾವಿ ಮಂಜೂರುಗೊಂಡಿದ್ದು ಮನೆಬಳಿಗೆ ರಸ್ತೆಯಿಲ್ಲದ ಕಾರಣ ಅದು ಪೆಂಡಿಂಗ್ ಆಗಿತ್ತು.

ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಗೆ ದೂರು:
ಚನಿಯಾರುರವರು ಹೋರಾಟದ ನಡುವೆಯೂ ಪುತ್ತೂರು ತಾಲೂಕು ಅಂಬಡ್ಕರ್ ತತ್ವ ರಕ್ಷಣಾ ವೇದಿಕೆ ಸಂಘಟನೆಗೆ ತಮ್ಮ ನಿರಂತರ ಹೋರಾಟದ ಬಗ್ಗೆ ಹಾಗೂ ರಸ್ತೆಯಿಲ್ಲದ ಸಂಕಷ್ಟದ ಕುರಿತು ಮನವಿ ಮಾಡಿದ್ದರು. ಮನವಿಗೆ ಸ್ಪಂಧಿಸಿದ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆಮ್ಮಿಂಜೆ ಪರಮೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಕುರಿತು ಪುತ್ತೂರಿನ ಕಂದಾಯ ಅಧಿಕಾರಿಗಳನ್ನು ಭೇಟಿ ಮಾಡಿದ ಸಂಘಟನೆಯ ಪ್ರಮುಖರು ರಸ್ತೆ ನಿರ್ಮಾಣ ವಿವಾದವನ್ನು ಇತ್ಯರ್ಥಪಡಿಸುವಂತೆ ಕೇಳಿಕೊಂಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ಸರ್ವೆ ಗ್ರಾಮ ಕರಣಿಕರಾದ ತುಳಸಿ ಮತ್ತಿತರರು ಜಾಗವನ್ನು ಪರಿಶೀಲಿಸಿ ಬಳಿಕ ಚನಿಯಾರುರವರ ಮನೆಗೆ ತೆರಳುವ ಸುಮಾರು ಒಂದು ಕಿ.ಮೀ ಉದ್ದದ ಕಾಲುದಾರಿಯನ್ನು ೧೨ ಅಡಿ ಅಗಲಕ್ಕೆ ರಸ್ತೆ ನಿರ್ಮಿಸಿಕೊಡುವುದಾಗಿ ಆದೇಶಿಸಿದ್ದರು. ಅದರಂತೆ ಜು.೩ರಂದು ರಸ್ತೆ ಕಾಮಗಾರಿ ಪ್ರಾರಂಭಗೊಂಡಿದೆ. ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ, ತಹಶೀಲ್ದಾರ್ ಹಾಗೂ ಗ್ರಾಮ ಕರಣಿಕರಿಂದ ನಮಗೆ ನ್ಯಾಯ ಸಿಕ್ಕಿದೆ ಎಂದು ಚನಿಯಾರು ಮನೆಯವರು ತಿಳಿಸಿದ್ದಾರೆ.

ಸೊರಕೆಯಲ್ಲಿರುವ ದಲಿತ ಕುಟುಂಬವೊಂದು ರಸ್ತೆಗಾಗಿ ಹೋರಾಟ ನಡೆಸುತ್ತಾ ಬಂದಿದ್ದು ಕೆಲವು ಸಮಯದ ಹಿಂದೆ ನಮ್ಮ ಸಂಘಟನೆಗೆ ಮನವಿ ಮಾಡಿತ್ತು. ಇಲ್ಲಿನವರೇ ಆದ ನಮ್ಮ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ ಅವರು ಕೂಡಾ ಸಮಸ್ಯೆ ಹಲವು ಬಾರಿ ತಿಳಿಸಿದ್ದರು. ಈ ಕುರಿತು ನಾವು ಹೋರಾಟವನ್ನು ಮಾಡಿದ್ದೆವು. ಇದೀಗ ತಹಶೀಲ್ದಾರ್, ಗ್ರಾಮ ಕರಣಿಕರು ಒಳ್ಳೆಯ ಸಹಕಾರ ನೀಡಿದ್ದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರ ಮಾಡಿದ್ದಾರೆ ಗಿರಿಧರ ನಾಯ್ಕ, ರಾಜ್ಯಾಧ್ಯಕ್ಷರು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ

ರಸ್ತೆಗಾಗಿ ಹಲವಾರು ವರ್ಷಗಳಿಂದ ವಿವಿಧ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಮಧ್ಯಪ್ರವೇಶಿಸಿದ ಕಾರಣಕ್ಕೆ ನಮಗೆ ನ್ಯಾಯ ಸಿಕ್ಕಿದೆ ಆಶಾಲತಾ, ಅಧ್ಯಕ್ಷೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಪುತ್ತೂರು ತಾಲೂಕು

ಚನಿಯಾರು ರವರ ಮನೆಗೆ ತೆರಳುವ ಕಾಲು ದಾರಿ ಬದಿಯಲ್ಲಿದ್ದ ಜಗವನ್ನು ಖಾಸಗಿಯವರು ಒತ್ತುವರಿ ಮಾಡಿದ್ದರು.ಜಾಗವನ್ನು ಅಳತೆ ಮಾಡಿದಾಗ ಇಲಾಖೆಯ ಗಮನಕ್ಕೆ ಬಂದಿದ್ದು ರಸ್ತೆ ಇಲ್ಲದ ಅವರ ಮನೆಗೆ ರಸ್ತೆ ನಿರ್ಮಾಣ ಮಾಡುವಂತೆ ಆದೇಶ ಮಾಡಿದ್ದೇನೆ. ಸುಮಾರು ೧೨ ಅಡಿ ಅಗಲಕ್ಕೆ ರಸ್ತೆ ನಿರ್ಮಾಣ ಆಗಲಿದೆ. ಆ ಕುಟುಂಬ ಹಲವು ವರ್ಷಗಳಿಂದ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗೆ ಮನವಿಯನ್ನೂ ಸಲ್ಲಿಸಿತ್ತು. ಶೀಘ್ರದಲ್ಲೇ ರಸ್ತೆ ಕಾಮಗಾರಿ ಪೂರ್ಣವಾಗಲಿದೆ ರಮೇಶ್ ಬಾಬು, ತಹಶಿಲ್ದಾರ್ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.