ವಿಟ್ಲ: ಕುಡಿಪ್ಪಾಡಿ ಗ್ರಾಮದ ಮಂಜಲ್ಪಡ್ಪು-ಕಬಕ ರಸ್ತೆಯ ಕಾರ್ಜಾಲುನಿಂದ ಪಂಬತ್ತಮಜಲು ತನಕ ರಸ್ತೆ ಕಾಂಕ್ರಿಟೀಕಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಸದರಿ ರಸ್ತೆಯಲ್ಲಿ ಜು.6ರಿಂದ ಆ.25 ರ ತನಕ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು ಸಾರ್ವಜನಿಕರು ಬದಲಿ ರಸ್ತೆಯ ಮೂಲಕ ಸಂಚರಿಸುವಂತೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ಲೋಕೋಪಯೋಗಿ ಇಲಾಖೆಯ 2019-20 ನೇ ಸಾಲಿನ 5054 ಅಪೆಡಿಂಕ್ಸ್ ಇ ಯೋಜನೆಯಲ್ಲಿ ಕಾರ್ಜಾಲ್ ನಿಂದ ಪಂಬತ್ತಮಜಲು ತನಕ 900 ಮೀಟರ್ ರಸ್ತೆ ಕಾಂಕ್ರಟೀಕರಣಗೊಳ್ಳಲಿದೆ. ಕಾಮಗಾರಿಯು ಜು.6 ರಿಂದ ಪ್ರಾರಂಭಗೊಳ್ಳಲಿದ್ದು ಮುಂದಿನ 50 ದಿನಗಳ ಕಾಲ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಸಾರ್ವಜನಿಕರು ಬದಲಿ ರಸ್ತೆಯ ಮೂಲಕ ಸಂಚರಿಸಿ ಸಹಕರಿಸಬೇಕು.
ಬದಲಿ ರಸ್ತೆಗಳು;
ಮಂಜಲ್ಪಡ್ಪು- ಕಬಕ ರಸ್ತೆಯ 1.30ರ ಪಂಬತ್ತಮಜಲುವಿನಿಂದ ಕೊಡಿಪ್ಪಾಡಿ-ಅರ್ಕ ರಸ್ತೆ ಮೂಲಕ ಸಂಚರಿಸುವುದು.
ಮಂಜಲ್ಪಡ್ಪು- ಕಬಕ ರಸ್ತೆಯ 0.40 ಕಾರ್ಜಾಲ್ ನಿಂದ ಮಂಜಲ್ಪಡ್ಪು ರಸ್ತೆ ಮೂಲಕ ಸಂಚರಿಸುವಂತೆ ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ರಾಜರಾಮ್ ಕೆ.ಬಿ ಮನವಿ ಮಾಡಿದ್ದಾರೆ.