ಪುತ್ತೂರು: ಇಡೀ ಲೋಕಕ್ಕೆ ಸಂಕಷ್ಟ ತಂದಿರುವ ಕೊರೊನಾ ಸಾಂಕ್ರಾಮಿಕ ರೋಗದ ಈ ಸಂಧರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಪ್ರಥಮವಾಗಿ ಗುರುತಿಸಿ ಗೌರವಿಸಿದ್ದೇ ಸಹಕಾರ ಕೇತ್ರವಾಗಿರುತ್ತದೆ ಎಂದು ಆರ್ಯಾಪು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಹೆಚ್. ಮಹಮ್ಮದ್ ಆಲಿ ತಿಳಿಸಿದರು.
ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ವ್ಯಾಪ್ತಿಗೆ ಬರುವ ಆರ್ಯಾಪು-ಕುರಿಯ-ಕೆಮ್ಮಿಂಜೆ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಹಕಾರಿ ಸಂಘದ ವತಿಯಿಂದ ಗೌರವಿಸಿ, ಗೌರವ ವೇತನವನ್ನು ವಿತರಿಸಿ ಮಾತನಾಡುತ್ತಾ ಈ ಸಂಧರ್ಭದಲ್ಲಿ ಆಶಾ ಕಾರ್ಯಕರ್ತೆಯರು ತನ್ನ ಜೀವನದ ಹಂಗು ತೊರೆದು ಮನೆ ಮನೆ ಭೇಟಿ ನೀಡಿ ಆರೋಗ್ಯ ಸೇವೆಯನ್ನು ನೀಡಿರುತ್ತಾರೆ. ಇವರ ಈ ಪುಣ್ಯದ ಸೇವೆಯನ್ನು ಪ್ರಥಮವಾಗಿ ಗುರುತಿಸಿದ್ದೇ ಸಹಕಾರಿ ಕ್ಷೇತ್ರವಾಗಿರುತ್ತದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಆಶಾ ಕಾರ್ಯಕರ್ತೆಯರನ್ನು ಗೌರವಿಸಿ ಗೌರವ ನೀಡುವ ಕಾರ್ಯಕ್ಕೆ ಚಾಲನೆ ನೀಡುವುದರ ಮೂಲಕ ಜಿಲ್ಲೆಯ ಹವಾರು ಸಹಕಾರಿ ಸಂಘಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗೌರವಿಸಿ ಅವರಿಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ಕೆ ಮುಂದಾಗಿದೆ, ಇದರಿಂದಾಗಿ ಈ ಸಂಕಷ್ಟ ಸಮಯದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯ ಮಹತ್ವ ಎಲ್ಲರಿಗೂ ತಿಳಿಯುವಂತಾಯಿತು. ಅಲ್ಪ ಮೊತ್ತದ ಗೌರವ ಧನಕ್ಕೆ ಅಪಾರ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಆರೋಗ್ಯವನ್ನು ಭಗವಂತನೇ ಕಾಪಾಡುತ್ತಿದ್ದಾನೆ. ಇವರ ಮಹತ್ತರವಾದ ಸೇವೆಯನ್ನು ಪರಿಗಣಿಸಿ ಸರಕಾರ ಇವರ ಗೌರವ ಧನವನ್ನು ಹೆಚ್ಚಿಸಿ ಇವರ ಸೇವೆಗೆ ನ್ಯಾಯ ಸಲ್ಲಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು. ಈ ಸಂಧರ್ಭದಲ್ಲಿ ಸಹಕಾರಿ ಸಂಘದ ವ್ಯಾಪ್ತಿಯ ೧೪ ಮಂದಿ ಆಶಾ ಕಾರ್ಯಕರ್ತೆಯರಿಗೆ ಸಂಘದ ವತಿಯಿಂದ ತಲಾ ರೂ.3000/- ರಂತೆ ಪ್ರೋತ್ಸಾಹ ಧನ ವಿತರಿಸಲಾಯಿತು.
ವೇದಿಕೆಯಲ್ಲಿ ಸಹಕಾರಿ ಸಂಘದ ನಿರ್ದೇಶಕರಾದ ಸತೀಶ್ ನಾಕ್ ಪರ್ಲಡ್ಕ, ತಿಮ್ಮಪ್ಪ ನಾಯ್ಕ ಜಂಗಮುಗೇರು ಗಣೇಶ್ ರೈ ಬಳ್ಳಮಜಲು, ಗಣೇಶ್ ರೈ ತೊಟ್ಲ , ಸುರೇಂದ್ರ ರೈ ಬಳ್ಳಮಜಲು, ಇಸ್ಮಾಯಿಲ್ ಮಲಾರು, ಶೀನಪ್ಪ ಮರಿಕೆ, ಸಂಶುದ್ದೀನ್ ನೀರ್ಕಜೆ, ಹಾರೀಸ್ ಸಂಟ್ಯಾರು, ಶ್ರೀಮತಿ ಚಂದ್ರಕಲಾ ಓಟೆತ್ತಿಮಾರು, ಶ್ರೀಮತಿ ಮೀನಾಕ್ಷಿ ನೀರ್ಕಜೆ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಆರ್ಯಾಪು ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಾದ ಗೀತಾ, ಲೀಲಾವತಿ, ಮಾಲತಿ, ಯಮುನಾ, ಗುಲಾಬಿ, ಶಾಂತಿ ಟೆಲ್ಲಿಸ್, ಸುಶೀಲಾ, ಸುಕನ್ಯ, ಜಾನೆಟ್ ಡಿ ಅಲ್ಮೆಡಾ, ಸುಜಾತಾ, ಚಂದ್ರಾವತಿ ಡಿ.ಆರ್, ಶೀಲಾವತಿ, ಮೋಹಿನಿ, ಸಹಕಾರಿ ಸಂಘದ ಸಿಬ್ಬಂದಿಗಳಾದ ಅಜಿತ್ ಕುಮಾರ್ ರೈ, ಸುಭಾಷಿನಿ ವಿ ರೈ, ವಿನಯ ಕುಮಾರ್ ರೈ, ರಾಜೇಶ್ ಕುಮಾರ್, ನವೋದಯ ಸ್ವ ಸಹಾಯ ಗುಂಪುಗಳ ಪ್ರೇರಕಿ ಮೋಹಿನಿ, ಪ್ರಶಾಂತಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಉಮೇಶ್ ಎಸ್.ಕೆ ಸ್ವಾಗತಿಸಿ ವಂದಿಸಿದರು.