ರೋಟರಿ ಕ್ಲಬ್ ಪುತ್ತೂರು ಪದಪ್ರದಾನ: ಕೋವಿಡ್ ನಿಯಂತ್ರಣದಲ್ಲೂ ರೋಟರಿಯು ಶ್ರಮಿಸುತ್ತಿದೆ-ರತ್ನಾಕರ್ ರೈ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತದಲ್ಲಿನ ರೊಟೇರಿಯನ್ಸ್‌ಗಳು ಮಾರಕ ರೋಗವೆನಿಸಿದ ಕೋವಿಡ್ ನಿಯಂತ್ರಣಕ್ಕೆ ದೇಣಿಗೆ ನೀಡುವ ಮೂಲಕ ಸಹಕಾರ ನೀಡುತ್ತಿದೆ. ಹೇಗೆ ವಿಶ್ವದಲ್ಲಿ ಪೋಲಿಯೋ ನಿರ್ಮೂಲನೆಯತ್ತ ರೋಟರಿ ಸೇವಾಸಂಸ್ಥೆಯು ಕಾತಣವಾಗಿದೆಯೋ ಹಾಗೆಯೇ ಪ್ರಸ್ತುತ ಕೋವಿಡ್ ನಿಯಂತ್ರಣದಲ್ಲೂ ರೋಟರಿ ಸಂಸ್ಥೆಯು ಕೈಜೋಡಿಸುತ್ತಿದೆ ಎಂದು ರೋಟರಿ ಜಿಲ್ಲೆ ೩೧೮೧, ವಲಯ ಐದರ ಅಸಿಸ್ಟೆಂಟ್ ಗವರ್ನರ್ ರತ್ನಾಕರ್ ರೈಯವರು ಹೇಳಿದರು.

ಅವರು ಜು.೩ ರಂದು ರೋಟರಿ ಟ್ರಸ್ಟ್ ಹಾಲ್‌ನಲ್ಲಿ ಸಂಜೆ ಜರಗಿದ ಪುತ್ತೂರಿನ ಹಿರಿಯ ರೋಟರಿ ಸಂಸ್ಥೆ ಎನಿಸಿದ ೫೫ ವರುಷ ಹರೆಯದ ರೋಟರಿ ಕ್ಲಬ್ ಪುತ್ತೂರು ಇದರ ೨೦೨೦-೨೧ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನವನ್ನು ನೆರವೇರಿಸಿ ಮಾತನಾಡಿದರು. ಪುತ್ತೂರಿನ ಹಿರಿಯ ಸಂಸ್ಥೆಯೆನಿಸಿದ ಈ ಕ್ಲಬ್ ಕಳೆದ ೫೫ ವರ್ಷಗಳಿಂದ ಬ್ಲಡ್‌ಬ್ಯಾಂಕ್, ಮನೆಗಳ ನಿರ್ಮಾಣದಂತಹ ಹಲವಾರು ಕಾರ್ಯಗಳನ್ನು ಮಾಡುತ್ತಾ ಮನೆಮಾತಾಗಿದೆ. ಅದಲ್ಲದೆ ಪುತ್ತೂರಿನಲ್ಲಿ ಸುಸಜ್ಜಿತವಾದ ಡಯಾಲಿಸಿಸ್ ಘಟಕವನ್ನು ಕೂಡ ಈ ಕ್ಲಬ್ ಶೀಘ್ರವೇ ಆರಂಭಿಸಲಿರುವುದು ಶ್ಲಾಘನೀಯ. ಸಂಘ-ಸಂಸ್ಥೆಗಳಲ್ಲಿ ಧನಾತ್ಮಕ ಚಿಂತನೆ ಮತ್ತು ಸಮಾನ ಮನಸ್ಕರ ಸದಸ್ಯರಿದ್ದಲ್ಲಿ ಯಾವುದೇ ಕಾರ್ಯಯೋಜನೆಗಳು ಫಲಪ್ರದವೆನಿಸಬಲ್ಲುದು ಎಂಬುದಕ್ಕೆ ರೋಟರಿ ಪುತ್ತೂರು ಕ್ಲಬ್ ಉದಾಹರಣೆಯಾಗಿದೆ. ರೋಟರಿ ಎಂಬ ಸೇವಾ ಸಂಸ್ಥೆಯು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಮಾಡಲು ಸದವಕಾಶವನ್ನು ಒದಗಿಸಿಕೊಡುತ್ತದೆ ಎಂದು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಲಯ ಐದರ ವಲಯ ಸೇನಾನಿ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈಯವರು ಮಾತನಾಡಿ, ಪ್ರಸ್ತುತ ವರ್ಷ ಸಮರ್ಥ ವ್ಯಕ್ತಿಗೆ ಸಮರ್ಥ ನಾಯಕತ್ವ ಸಿಕ್ಕಿದೆ ಎಂಬುದು ಪ್ರಶಂಸನೀಯ. ಅಂತರ್ರಾಷ್ಟ್ರೀಯ ಸೇವಾಸಂಸ್ಥೆ ಎನಿಸಿದ ರೋಟರಿಯಲ್ಲಿ ಜಗತ್ತಿನಾದ್ಯಂತ ೩೫ ಸಾವಿರ ಕ್ಲಬ್‌ಗಳಿದ್ದು, ಸುಮಾರು ೧೨ ಲಕ್ಷ ರೊಟೇರಿಯನ್ಸ್‌ಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದ ಅವರು ಸ್ನೇಹ, ಒಡನಾಟ, ಸೇವೆ ಎಂಬ ಧ್ಯೇಯವನ್ನಿಟ್ಟುಕೊಂಡು ರೋಟರಿ ಕ್ಲಬ್‌ನ ಸದಸ್ಯರಲ್ಲಿ ಸಮಾಜಮುಖಿ ಕಾರ್ಯಗಳ ಅವಕಾಶಗಳನ್ನು ತೆರೆದುಕೊಡುತ್ತದೆ. ಜಗತ್ತಿನಾದ್ಯಂತ ರೊಟೇರಿಯನ್ಸ್‌ಗಳಿದ್ದು ನಮ್ಮ ಅಗತ್ಯದ ಸಂದರ್ಭದಲ್ಲಿ ಅವರುಗಳು ನೀಡುವ ಸೇವೆಯು ವರ್ಣನೆಗೆ ನಿಲುಕದ್ದು. ಸಣ್ಣ ಪುಟ್ಟ ಯೋಜನೆಗಳ ಬದಲು ದೊಡ್ಡ ಪ್ರಾಜೆಕ್ಟ್‌ಗಳನ್ನು ಮಾಡುವ ಮೂಲಕ ರೋಟರಿ ಸಂಸ್ಥೆಯು ಜನರಿಗೆ ಇನ್ನೂ ಹತ್ತಿರವಾಗಬೇಕು ಎಂದರು.

ನಿರ್ಗಮನ ಅಧ್ಯಕ್ಷ ಭುಜಂಗ ಆಚಾರ್ಯರವರು ಸ್ವಾಗತಿಸಿ ಮಾತನಾಡಿ, ಪ್ರಸ್ತುತ ಎದುರಿಸುವ ಲಾಕ್‌ಡೌನ್‌ನಲ್ಲಿ ಸುಮ್ಮನೆ ಕೂರದೆ ನಮ್ಮ ಕ್ಲಬ್‌ನ ಸದಸ್ಯರೊಡಗೂಡಿ ಅಗತ್ಯ ಫಲಾನುಭವಿಗಳಿಗೆ ಸುಮಾರು ಇಪ್ಪತ್ತು ಸಾವಿರದ ಕಿಟ್‌ನ್ನು ನೀಡಿದ್ದೇವೆ. ಅದಲ್ಲದೆ ಪ್ರಸ್ತುತ ವರ್ಷ ನಾವು ಮಾಡಲಾದ ಕಾರ್ಯಕ್ರಮಗಳಿಗೆ ಎಂಟು ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ವಾಟ್ಸಾಫ್‌ಗಳಲ್ಲಿ ಸಂದೇಶ ರವಾನಿಸುವಾಗ ಯಾರಿಗೂ ನೋವಾಗದ ರೀತಿಯಲ್ಲಿ ಸಂದೇಶಗಳನ್ನು ರವಾನಿಸುವುದು ಒಳಿತು ಎಂದರು.

ಪದಾಧಿಕಾರಿಗಳಿಗೆ ಪದಪ್ರದಾನ:
ನೂತನ ಅಧ್ಯಕ್ಷರಾಗಿ ಪ್ರೊ|ಝೇವಿಯರ್ ಡಿ’ಸೋಜ, ಕಾರ್ಯದರ್ಶಿಯಾಗಿ ಪ್ರೊ|ದತ್ತಾತ್ರೇಯ ರಾವ್, ಕೋಶಾಧಿಕಾರಿಯಾಗಿ ಶ್ರೀಕಾಂತ್ ಕೊಳತ್ತಾಯ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಪ್ರೇಮಾನಂದ ಬಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಡಾ.ಶ್ರೀಪ್ರಕಾಶ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಕೇಶವ ಆಮೈ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ವಿ.ಜೆ ಫೆರ್ನಾಂಡೀಸ್, ಯೂತ್ ಸರ್ವಿಸ್ ನಿರ್ದೇಶಕರಾಗಿ ದಾಮೋದರ್ ಕೆ.ಎ, ನಿಯೋಜಿತ ಅಧ್ಯಕ್ಷರಾಗಿ ಮಧು ನರಿಯೂರು, ನಿಕಟಪೂರ್ವ ಅಧ್ಯಕ್ಷರಾಗಿ ಭುಜಂಗ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಶ್ರೀಧರ ಗೌಡ ಕಣಜಾಲು, ಬುಲೆಟಿನ್ ಎಡಿಟರ್ ಹಾಗೂ ಇಂಟರ್‍ಯಾಕ್ಟ್ ಕ್ಲಬ್ ಸವಣೂರು ಶಾಲೆಯ ಚೇರ್‌ಮ್ಯಾನ್ ಆಗಿ ಕಿಶನ್ ಬಿ.ವಿ, ಎಕ್ಸಿಕ್ಯೂಟಿವ್ ಕಾರ್ಯದರ್ಶಿಯಾಗಿ ದೀಪಕ್ ಕೆ.ಪಿ, ಪೋಲಿಯೋ ಚೇರ್‌ಮ್ಯಾನ್‌ಗಳಾಗಿ ಡಾ.ಸುಧಾ ಎಸ್.ರಾವ್, ಟಿಆರ್‌ಎಫ್ ಚೇರ್‌ಮ್ಯಾನ್ ಆಗಿ ವಾಮನ್ ಪೈ, ಮೆಂಬರ್‌ಶಿಪ್ ಚೇರ್‌ಮ್ಯಾನ್ ಆಗಿ ರಫೀಕ್ ಎಂ.ಜಿ, ವಿನ್ಸ್ ಚೇರ್‌ಮ್ಯಾನ್ ಆಗಿ ಗೋವಿಂದ ಪ್ರಕಾಶ, ವಾಟರ್ ಮತ್ತು ಸ್ಯಾನಿಟೇಶನ್ ಚೇರ್‌ಮ್ಯಾನ್ ಆಗಿ ಸತೀಶ್ ನಾಯಕ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್‌ಮ್ಯಾನ್ ಆಗಿ ಡಾ.ನಝೀರ್ ಅಹಮ್ಮದ್, ಟೀಚ್ ಚೇರ್‌ಮ್ಯಾನ್ ಆಗಿ ಸುರೇಶ್ ಶೆಟ್ಟಿ, ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ಹೆರಾಲ್ಡ್ ಮಾಡ್ತಾ, ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಇದರ ಚೇರ್‌ಮ್ಯಾನ್ ಶ್ರೀಧರ ಕೆ, ರೋಟರ್‍ಯಾಕ್ಟ್ ಕ್ಲಬ್ ಸ್ವರ್ಣ ಚೇರ್‌ಮ್ಯಾನ್ ಆಗಿ ಪರಮೇಶ್ವರ ಗೌಡ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಇದರ ರೋಟರ್‍ಯಾಕ್ಟ್ ಕ್ಲಬ್‌ನ ಚೇರ್‌ಮ್ಯಾನ್ ಆಗಿ ಪ್ರೀತಾ ಎ, ಇಂಟರ್‍ಯಾಕ್ಟ್ ಕ್ಲಬ್ ಸುದಾನ ಶಾಲೆಯ ಚೇರ್‌ಮ್ಯಾನ್ ಆಗಿ ಉಮೇಶ್ ಆಚಾರ್, ಆರ್‌ಸಿಸಿ ಚೇರ್‌ಮ್ಯಾನ್ ಆಗಿ ಶಂಕಪ್ಪ ರೈ, ಸಾಂಸ್ಕೃತಿಕ ಕಾರ್ಯಕ್ರಮಗಳ ಚೇರ್‌ಮ್ಯಾನ್ ಆಗಿ ಸುಜಿತ್ ರೈರವರು ಪದಪ್ರದಾನವನ್ನು ಸ್ವೀಕರಿಸಿದ್ದಾರೆ.

ಪಿಎಚ್‌ಎಫ್ ಗೌರವ/ಹೊಸ ಸದಸ್ಯರ ಸೇರ್ಪಡೆ:ಕ್ಲಬ್‌ನ ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿರುವ ಕೇಶವ ಆಮೈರವರು ಪಿಎಚ್‌ಎಫ್ ಪದವಿಗೆ ಭಾಜನರಾಗಿದ್ದು, ಅವರಿಗೆ ಅಸಿಸ್ಟೆಂಟ್ ಗವರ್ನರ್ ರತ್ನಾಕರ್ ರೈಯವರು ಪ್ರಮಾಣಪತ್ರ ನೀಡಿ ಗೌರವಿಸಿದರು. ಕೋವಿಡ್ ೧೯ ಕಟ್ಟುನಿಟ್ಟಿನ ನಿಯಮದಿಂದಾಗಿ ಸಮಾರಂಭಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೇರಬೇಕು ಎನ್ನುವ ಹಿನ್ನೆಲೆಯಲ್ಲಿ ಕ್ಲಬ್ ಸರ್ವಿಸ್ ವತಿಯಿಂದ ಹತ್ತು ಹೊಸ ಸದಸ್ಯರ ಸೇರ್ಪಡೆಯ ಬದಲಾಗಿ ಸಾಂಕೇತಿಕ ರೀತಿಯಲ್ಲಿ ಎಲ್ಲರ ಪರವಾಗಿ ಏಷ್ಯನ್ ವುಡ್ ಇಂಡಸ್ಟ್ರೀಸ್‌ನ ಮಾಲಕ ಇಸ್ಮಾಯಿಲ್‌ರವರಿಗೆ ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಬರಮಾಡಿಕೊಳ್ಳಲಾಯಿತು. ಕ್ಲಬ್ ಸರ್ವಿಸ್ ನಿರ್ದೇಶಕ ಪ್ರೇಮಾನಂದರವರು ನೂತನ ಸದಸ್ಯರ ಪರಿಚಯ ಮಾಡಿದರು.

ಗೌರವ:
ಕ್ಲಬ್‌ನ ವಿವಿಧ ಘಟಕಗಳಲ್ಲಿ ಡಿಸ್ಟ್ರಿಕ್ಟ್ ಚೇರ್‌ಮ್ಯಾನ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿ.ಜೆ ಫೆರ್ನಾಂಡೀಸ್, ಶ್ರೀಕಾಂತ್ ಎನ್, ಡಾ.ಜಯದೀಪ್ ಎನ್.ಎ, ಡಿಸ್ಟ್ರಿಕ್ಟ್ ವೈಸ್ ಚೇರ್‌ಮ್ಯಾನ್ ಸುರೇಶ್ ಶೆಟ್ಟಿ, ಡಾ.ಬಿ ಶ್ಯಾಮ್, ರಾಮಕೃಷ್ಣ ಕೆ., ಭುಜಂಗ ಆಚಾರ್ಯ, ಚಿದಾನಂದ ಬೈಲಾಡಿ, ಡಾ.ಸುಧಾ ಎಸ್.ರಾವ್, ಎಂ.ಜಿ ರಫೀಕ್, ಡಾ.ನಝೀರ್ ಅಹಮ್ಮದ್, ಡಿಸ್ಟ್ರಿಕ್ಟ್ ಕೋ-ಚೇರ್‌ಮ್ಯಾನ್ ಪರಮೇಶ್ವರ್ ಗೌಡ, ವಲಯ ಐದರ ವಲಯ ಸೇನಾನಿ ಎ.ಜೆ ರೈ, ವಲಯ ಚೇರ್‌ಮ್ಯಾನ್ ಶ್ರೀಧರ್ ಆಚಾರ್ಯ, ಡಾ.ಶ್ರೀಪ್ರಕಾಶ್, ದೀಪಕ್ ಕೆ.ಪಿ, ಪ್ರೇಮಾನಂದರವರಿಗೆ ಹೂಗುಚ್ಛ ನೀಡಿ ಅಭಿನಂದಿಸಲಾಯಿತು.

ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ವಾಮನ್ ಪೈ, ನೂತನ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರ ಪತ್ನಿ ಶಿಕ್ಷಕಿ ತನುಜಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದಪ್ರದಾನ ಅಧಿಕಾರಿ ಅಸಿಸ್ಟೆಂಟ್ ಗವರ್ನರ್ ರತ್ನಾಕರ್ ರೈಯವರ ಪರಿಚಯವನ್ನು ವಿನ್ಸ್ ಚೇರ್‌ಮ್ಯಾನ್ ಆಗಿ ಗೋವಿಂದ ಪ್ರಕಾಶ, ವಲಯ ಸೇನಾನಿ ಎ.ಜೆ ರೈಯವರ ಪರಿಚಯವನ್ನು ಯೂತ್ ಸರ್ವಿಸ್ ನಿರ್ದೇಶಕರಾಗಿ ದಾಮೋದರ್ ಕೆ.ಎ.ರವರು ನೀಡಿದರು. ನೂತನ ಕಾರ್ಯದರ್ಶಿ ಪ್ರೊ|ದತ್ತಾತ್ರೇಯಾ ರಾವ್ ಪ್ರಾರ್ಥಿಸಿ, ವಂದಿಸಿದರು. ನಿಕಟಪೂರ್ವ ಕಾರ್ಯದರ್ಶಿ ಮಧು ನರಿಯೂರು ವರದಿ ಮಂಡಿಸಿದರು. ಬುಲೆಟಿನ್ ಎಡಿಟರ್ ಹಾಗೂ ಇಂಟರ್‍ಯಾಕ್ಟ್ ಕ್ಲಬ್ ಸವಣೂರು ಶಾಲೆಯ ಚೇರ್‌ಮ್ಯಾನ್ ಆಗಿ ಕಿಶನ್ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು.

ಸದಸ್ಯರ ನಡುವೆ ಬಾಂಧವ್ಯ ವೃದ್ಧಿಸಲಿ…
ಕ್ಲಬ್‌ನಲ್ಲಿ ಹಿರಿಯ-ಕಿರಿಯ ಸದಸ್ಯರಿದ್ದು ಎಲ್ಲರನ್ನು ಒಟ್ಟಾಗಿ ಸೇರಿಸಿ ಮುನ್ನೆಡೆಯುವುದು ನಮ್ಮ ಧರ್ಮವಾಗಿದೆ. ಹಿರಿಯ ಸದಸ್ಯರ ಹರಸುವಿಕೆಯಿಂದ ಪುತ್ತೂರಿನ ಹಿರಿಯ ಕ್ಲಬ್ ಇಂದು ೫೬ರ ಹರೆಯಕ್ಕೆ ಕಾಲಿಟ್ಟಿದೆ. ಶೀಘ್ರವೇ ಡಯಾಲಿಸಿಸ್ ಘಟಕ ಆರಂಭಿಸಿ ಸಾರ್ವಜನಿಕ ವಲಯದಲ್ಲಿ ಪುತ್ತೂರು ಕ್ಲಬ್‌ಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ ಎಂದು ಹೇಳಲು ಸಂತಸವಾಗುತ್ತದೆ. ಮುಂದಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ಆಂಗ್ಲ ಭಾಷೆಯಲ್ಲಿ ವ್ಯಾಮೋಹ, ಸ್ವಚ್ಛತೆ, ದೇಶಪ್ರೇಮ ಬಗ್ಗೆ, ಆರೋಗ್ಯ ಕಾಪಾಡುವಿಕೆ ಮುಂತಾದುವುಗಳ ಬಗ್ಗೆ ತರಬೇತಿ ಕಾರ್ಯಗಳು ಶಾಲಾ-ಕಾಲೇಜುಗಳು ಆರಂಭವಾದ ಬಳಿಕ ಆರಂಭಿಸಲಿರುವೆವು. ಪ್ರಸ್ತುತ ಎದುರಿಸುವ ಕೋವಿಡ್ ಸಂಕಷ್ಟದಲ್ಲಿ ಹೊರಗಡೆ ಹೋಗಿ ಸೇವೆ ನೀಡುವುದು ಕಷ್ಟದಾಯಕವಾಗಿದ್ದರೂ, ಕ್ಲಬ್‌ನೊಳಗೆ ಸದಸ್ಯರ ನಡುವೆ ಬಾಂಧವ್ಯವನ್ನು ವೃದ್ಧಿಸುವುದು ನಮ್ಮ ಆದ್ಯ ಕರ್ತವ್ಯ -ಪ್ರೊ|ಝೇವಿಯರ್ ಡಿ’ಸೋಜ, ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು

೨೦೧೯-೨೦ನೇ ಸಾಲಿನಲ್ಲಿ ಅತ್ತ್ಯುತ್ತಮ ಕಾರ್ಯ ನಿರ್ವಹಿಸಿ ಎಂಟು ಪ್ರಶಸ್ತಿಗಳನ್ನು ಗಳಿಸಲು ಕಾರಣಕರ್ತರಾದ ಕ್ಲಬ್‌ನ ಮಾಜಿ ಅಧ್ಯಕ್ಷ ಭುಜಂಗ ಆಚಾರ್ಯ ಹಾಗೂ ಕಾರ್ಯದರ್ಶಿ ಮಧು ನರಿಯೂರುರವರ ಸೇವೆಯನ್ನು ಗುರುತಿಸಿ ಅವರುಗಳಿಗೆ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.

ಫೇಸ್‌ಬುಕ್/ಯೂಟ್ಯೂಬ್‌ನಲ್ಲಿ ಲೈವ್…
ಪ್ರಸಕ್ತ ಎದುರಿಸುವ ಮಹಾಮಾರಿ ಕೋವಿಡ್-೧೯ ಸನ್ನಿವೇಶದಲ್ಲಿ ೫೦ ಜನರಿಗಿಂತಲೂ ಹೆಚ್ಚು ಮಂದಿ ಸೇರಬಾರದು ಎನ್ನುವ ಸರಕಾರದ ಕಟ್ಟುನಿಟ್ಟಿನ ನಿಯಮದನ್ವಯ ಕಾರ್ಯಕ್ರಮದಲ್ಲಿ ಕೆಲವೇ ಮಂದಿ ಭಾಗಿಯಾಗಿದ್ದರು. ಉಳಿದ ರೋಟರಿ ಸದಸ್ಯರು ಫೇಸ್‌ಬುಕ್ ಹಾಗೂ ಯೂಟ್ಯೂಬ್ ಲೈವ್‌ನಲ್ಲಿ ಕಾರ್ಯಕ್ರಮ ವೀಕ್ಷಿಸುವ ಅವಕಾಶವನ್ನು ಈ ಸಂದರ್ಭದಲ್ಲಿ ಮಾಡಿಕೊಟ್ಟಿದ್ದರು. ಕಾರ್ಯಕ್ರಮದ ಮೊದಲಿಗೆ ಸ್ಯಾನಿಟೈಸರ್‌ನ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.