ಉಪ್ಪಿನಂಗಡಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ – ಕುಮಾರಧಾರ ನದಿಗಳ ನೀರಿನ ಹರಿವಿನಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ.
ನೇತ್ರಾವತಿ ನದಿಯಲ್ಲಿ ಸಾಧಾರಣ ಹೆಚ್ಚಳ ಕಾಣಿಸಿಕೊಂಡಿದ್ದರೆ, ಕುಮಾರಧಾರ ನದಿಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. ಶನಿವಾರ ಸಾಯಂಕಾಲ ಶಂಭೂರು ಅಣೆಕಟ್ಟು ಆಧಾರಿತ ಜಲಮಟ್ಟದ ಅನ್ವಯ ನೇತ್ರಾವತಿ ನದಿಯ ನೀರಿನಮಟ್ಟ ಸಮುದ್ರ ಮಟ್ಟಕ್ಕಿಂತ 25 ಮೀ ಸನಿಹದಲ್ಲಿ ಹರಿಯುತ್ತಿದೆ. ಇಲ್ಲಿ ಅಪಾಯದ ಮಟ್ಟ 30 ಮೀಟರ್ ಆಗಿದೆ. ಭಾರೀ ಮಳೆಯಿಂದಾಗಿ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿರುವ ಕಾರಣದಿಂದ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗುವ ಮೂಲಕ ಪಾದಚಾರಿಗಳು ಸಮಸ್ಯೆಗೆ ತುತ್ತಾದರು.