ಪುತ್ತೂರು: ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ 2020-21ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಏಳ್ಮುಡಿ ಭಟ್ ಬಿಲ್ಡಿಂಗ್ನಲ್ಲಿನ ರಾಜ್ ಕನ್ಸಲ್ಟೆಂಟ್ಸ್ನ ಸಿವಿಲ್ ಇಂಜಿನಿಯರ್ ವೆಂಕಟ್ರಾಜ್ ಪಿ.ಜಿ, ಕಾರ್ಯದರ್ಶಿಯಾಗಿ ಹೈಡೆಲ್ಬರ್ಗ್ ಸಿಮೆಂಟ್ ಲಿಮಿಟೆಡ್ ಇದರ ಸೇಲ್ಸ್ ಮ್ಯಾನೇಜರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷರಾದ ಅಶೋಕ್ ನಾಯ್ಕ, ಕೋಶಾಧಿಕಾರಿಯಾಗಿ ಉದ್ಯಮಿ ಪಿ.ಎಂ ಅಶ್ರಫ್ ಮುಕ್ವೆರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಸಾಜ, ನಿಯೋಜಿತ ಅಧ್ಯಕ್ಷರಾಗಿ ನವೀನ್ಚಂದ್ರ, ಉಪಾಧ್ಯಕ್ಷರಾಗಿ ರಮೇಶ್ ರೈ ಬೋಳೋಡಿ, ಜೊತೆ ಕಾರ್ಯದರ್ಶಿಯಾಗಿ ವಿಷ್ಣು ಭಟ್, ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ವಸಂತ್ ಬಿ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಸನತ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಶಿವರಾಮ ಎಂ.ಎಸ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಮೊಹಮ್ಮದ್ ರಫೀಕ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಹರ್ಷಿತ್ ರಾಂ, ಯೂತ್ ಸರ್ವಿಸ್ ನಿರ್ದೇಶಕರಾಗಿ ಶೈಲಜಾ ವಿ, ಪಲ್ಸ್ ಪೋಲಿಯೋ ಚೇರ್ಮ್ಯಾನ್ ಡಾ.ರವಿನಾರಾಯಣ, ಟಿಆರ್ಎಫ್ ಚೇರ್ಮ್ಯಾನ್ ಶ್ರೀಧರ್ ಕೆ, ಮೆಂಬರ್ಶಿಪ್ ಡೆವಲಪ್ಮೆಂಟ್ ಚೇರ್ಮ್ಯಾನ್ ರಂಜಿತ್ ಬಂಗೇರ, ಟೀಚ್ ಚೇರ್ಮ್ಯಾನ್ ಚಂದ್ರಹಾಸ ರೈ, ವಿನ್ಸ್ ಚೇರ್ಮ್ಯಾನ್ ಅಕ್ಷತಾ ರೈ, ವೆಬ್ ಚೇರ್ಮ್ಯಾನ್ ಇಂದೀವರ್ ಭಟ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್ಮ್ಯಾನ್ ಜಯಪ್ರಕಾಶ್ ಎ.ಎಲ್, ಪ್ರಥಮ ಚಿಕಿತ್ಸೆ ಚೇರ್ಮ್ಯಾನ್ ನೋಯಲ್ ಡಿ’ಸೋಜ, ಪರಿಸರ ಹಾಗೂ ಸಸ್ಯ ರಕ್ಷಣಾ ಚೇರ್ಮ್ಯಾನ್ ಪುರುಷೋತ್ತಮ ಶೆಟ್ಟಿ, ಬುಲೆಟಿನ್ ಎಡಿಟರ್ ಡಾ|ರಾಜೇಶ್ ಬೆಜ್ಜಂಗಳ ಮತ್ತು ಭಾರತಿ ಎಸ್ ರೈಯವರು ಆಯ್ಕೆಯಾಗಿದ್ದಾರೆ.
ಜು.7ರಂದು ಪದಪ್ರದಾನ…
ನೂತನ ಪದಾಧಿಕಾರಿಗಳಿಗೆ ಇವೆಂಟ್ಸ್ನ ಜಿಲ್ಲಾ ಕಾರ್ಯದರ್ಶಿ ಮೇಜರ್ ಡೋನರ್ ರಿತೇಶ್ ಬಾಳಿಗರವರು ಪದಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದ, ಗೌರವ ಅತಿಥಿಗಳಾಗಿ ವಲಯ ಸೇನಾನಿ ಮನೋಹರ್ ಕುಮಾರ್, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ಸೆನೋರಿಟ ಆನಂದ್ರವರು ಭಾಗವಹಿಸಲಿದ್ದಾರೆ.