ಪೆರ್ನಾಜೆ: ಪ್ರಕೃತಿಯಲ್ಲಿ ದೊರೆಯುವ ಅಪೂರ್ವ ಹಣ್ಣುಗಳಲ್ಲೊಂದಾದ ಹಲಸಿನ ಹಣ್ಣಿನ ಬಗ್ಗೆ ಒಟ್ಟಿನಲ್ಲಿ ಹೇಳುವುದಾದರೆ ಉತ್ತಮ ಪೌಷ್ಟಿಕಾಂಶ ಇರುವ ಹಣ್ಣು. ಅಡ್ಡ ಮರದಲ್ಲಿ ಬೊಡ್ಡ ಕುಳಿತಿದ್ದಾನೆ. ನನ್ನಜ್ಜಿ ಮೈಮೇಲೆಲ್ಲಾ ಮುಳ್ಳು ಗಾದೆಮಾತಿನಂತೆ ಹಣ್ಣುಗಳಲ್ಲಿ ಅತಿ ದೊಡ್ಡದಾದ ಹಣ್ಣು ಹಲಸು ಈ ಹಣ್ಣು ಕಂಡುಬಂದಿದ್ದು ಕುಮಾರ್ ಪೆರ್ನಾಜೆ ಅವರ ತೋಟದಲ್ಲಿ ಇದರಲ್ಲಿ ಪ್ರತಿವರ್ಷ ನಾಲ್ಕರಿಂದ ಐದು ಗಜಗಾತ್ರದ, ಒಂದು ಕೋಲು ಉದ್ದದ 20 ಕೆಜಿ ತೂಕದ 35 ಇಂಚು ವ್ಯಾಸದ 30ಇಂಚು ಉದ್ದದ ಹಲಸು ಕಣ್ಣಿಗೆ ಸುಗ್ಗಿಯಾಗಿ ಮನ ಸಂತೋಷ ನೀಡುತ್ತದೆ.
ಪಲ್ಯ, ಸಾಂಬಾರ್, ಹುಳಿ,ಗಸಿ, ಹಪ್ಪಳ ಪಾಯಸ ಸೋಂಟೆ, ಸುಟ್ಟವ್, ಗೆಣಸಲೆ, ಬೆರಟಿ ಗಟ್ಟಿ ಹೀಗೆ ವೈವಿಧ್ಯಮಯ ತಿಂಡಿ ತಿನಿಸುಗಳಿಗೆ ಆಹಾರವಾಗಿದ್ದು ಹಲಸಿನ ಹಣ್ಣನ್ನು ಕಂಡಾಗಲಂತೂ ಪ್ರೀತಿ ಹುಟ್ಟದಿರದು. ಮಳೆಗಾಲದಲ್ಲಿ ತೋಟಗಳಲ್ಲಿ ಬಿದ್ದು ಕೊಳೆತು ಹಾಳಾಗುವ ಹಲಸಿನ ಹಣ್ಣುಗಳನ್ನು ಕಾಣುವಾಗಲಂತೂ ರೈತನಿಗೆ ಬೇಸರವಾಗದೇ ಇರದು. ಹಸಿದವನಿಗೆ ಹಲಸು ಎಂಬಂತೆ ತಮ್ಮ ತೋಟದಲ್ಲಿ ಇಂತಹ ವೈವಿಧ್ಯತೆಯ ಹಲಸು ಇದೆ ಅಂತ ಒಮ್ಮೆ ನೋಡುವಂತಿದೆ ಅಲ್ಲವೇ ಅಲ್ಲವೇ..!
ಚಿತ್ರ, ಬರಹ: ನಂದನ್ ಕುಮಾರ್ ಪೆರ್ನಾಜೆ