ಕಡಬ: ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಆದಿತ್ಯವಾರ ಲಾಕ್ ಡೌನ್ ಘೋಷಿಸಿದ್ದು ಈ ಹಿನ್ನಲೆಯಲ್ಲಿ ಕಡಬದಲ್ಲಿ ಸಂಪೂರ್ಣ ಬಂದ್ ಆಗಿದೆ.
ಮೆಡಿಕಲ್, ಪೆಟ್ರೋಲ್ ಬಂಕ್ ಹೊರತುಪಪಡಿಸಿ ಯಾವುದೇ ಅಂಗಡಿಗಳು ತೆರದಿಲ್ಲ. ಬೆರಳೆಣಿಕೆಯ ವಾಹನಗಳು ಹೊರತುಪಡಿಸಿದರೆ ರಸ್ತೆಗಳೂ ಖಾಲಿ ಖಾಲಿಯಾಗಿವೆ. ಮುಂಜಾನೆ ಹಾಲು ಮತ್ತು ಪತ್ರಿಕೆಗಾಗಿ ಜನರು ಆಗಮಿಸಿದ್ದು ಬಳಿಕ ಜನರ ಓಡಾಟಕ್ಕೂ ಕಡಿವಾಣ ಬಿದ್ದಿದೆ. ಕಡಬ ಪೊಲೀಸ ತಂಡ ಠಾಣಾ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದು ಠಾಣಾ ಮುಂಭಾದಲ್ಲಿ ಬ್ಯಾರಿ ಕೇಡ್ ಅಳವಡಿಸಿ ವಾಹನಗಳ ಮೇಲೆ ನಿಗಾವಹಿಸಿದ್ದಾರೆ.