ಆಲಂಕಾರು: ಕೋರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಕಾರ ಭಾನುವಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಮೆಡಿಕಲ್ ಹೊರತು ಪಡಿಸಿ ಆಲಂಕಾರು, ಕುಂತೂರು, ರಾಮಕುಂಜ, ಕೊಯಿಲ ಸಂಪೂರ್ಣ ಬಂದ್ ಆಗಿದೆ.
ವೀಡಿಯೋಗಾಗಿ
ಬೆಳಿಗ್ಗೆಯಿಂದಲೇ ಪೇಟೆಯಲ್ಲಿ ಜನ ವಿರಳವಾಗಿದ್ದು ಆಲಂಕಾರು ಪೇಟೆಯಲ್ಲಿ ಬೆಳಿಗ್ಗೆ ಕಡಬ ಪೋಲಿಸರು ಬ್ಯಾರಿಕೇಡ್ ಅಳವಡಿಸಿ ಬಂದೊಬಸ್ತ್ ಮಾಡಿ ವಾಹನಗಳನ್ನು ತಪಾಸಣೆ ನಡೆಸಿ ದಂಡ ವಿಧಿಸಿದ ಬಳಿಕ ವಾಹನ ಓಡಾಟ ವಿರಳವಾಯಿತು. ಇದೇ ರೀತಿ ಲಾಕ್ ಡೌನ್ ಮುಂದುವರಿದರೆ ಕೋರೊನಾ ಹತೋಟಿಗೆ ಬರಬಹುದು ಎನ್ನುವಂತಾದ್ದು ಸಾರ್ವಜನಿಕರ ಅಭಿಪ್ರಾಯವಾಗಿದ್ದು ಈ ಬಗ್ಗೆ ಮುಂದೆ ಕಾದುನೋಡಬೇಕಾಗಿದೆ.