HomePage_Banner
HomePage_Banner
HomePage_Banner
HomePage_Banner

ದಕ್ಷಿಣ ಭಾರತದ ಮೊದಲ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾದ ನಾಟೆಕಲ್ಲು ಕಣಚೂರ್ ಆಸ್ಪತ್ರೆ | ಡಿಯಾಪ್ರಾಗ್ಮೆಟಿಕ್ ಹರ್ನಿಯಾ ರೋಗ ಗುಣಪಡಿಸಿದ‌ ವೈದ್ಯಕೀಯ ತಂಡ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ನಾಟೆಕಲ್ಲು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ ಬಹಳ ಅಪರೂಪದ ಕಾಯಿಲೆ Congenital Hemidi a pragmatic Agenesis (Right side) ಎಂಬ ಕಾಯಿಲೆಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ರೋಗವನ್ನು ಗುಣಪಡಿಸಲಾಗಿದೆ. ಈ ಅಪರೂಪದ ಶಸ್ತ್ರ ಚಿಕಿತ್ಸೆಯು ಭಾರತದ ವಯಸ್ಕರಲ್ಲಿ ದಾಖಲಾದ ಮತ್ತು ಕಾರ್ಯನಿರ್ವಹಿಸಿದ ಎರಡನೇ ಶಸ್ತ್ರ ಚಿಕಿತ್ಸೆಯಾಗಿದೆ. ದಕ್ಷಿಣ ಭಾರತದಲ್ಲಿ ಇದು ಮೊತ್ತಮೊದಲನೇ ಶಸ್ತ್ರಚಿಕಿತ್ಸೆಯಾಗಿದೆ.

೩೫ ವರ್ಷದ ಚಿಕ್ಕಮಗಳೂರಿನ ನಿವಾಸಿಯಾದ ಮಹಿಳೆಯೊಬ್ಬರು ಹತ್ತು ವರ್ಷದಿಂದ ಉಸಿರಾಟದ ತೊಂದರೆ ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ನಾಟೆಕಲ್ಲು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಕ್ಕೆ ಬಂದ ಅವರನ್ನು ಅಲ್ಲಿನ ವೈದ್ಯರು ಪರಿಶೀಲನೆ ನಡೆಸಿದಾಗ ಬಲಗಡೆಗೆ Diaphragmatic Hernia ಇದೆ ಎಂಬುದನ್ನು ದೃಢಪಡಿಸಿದ್ದರು.  ಬಳಿಕ ಅವರನ್ನು ಜೂ.8ರಂದು Thoracotomy repairs with mesh ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು.
ಶಸ್ತ್ರ ಚಿಕಿತ್ಸಾ ತಂಡದಲ್ಲಿ ಥೋರಸಿಕ್ ಸರ್ಜನ್  ಡಾ. ಚೈತ್ರ ಕೆ. ಭಟ್, ಜನರಲ್ & ಲ್ಯಾಪ್ರೊಸ್ಕೋಪಿಕ್ ಸರ್ಜನ್ ಡಾ. ಲಿಕಿತ್ ರೈ, ಅನಾಸ್ತೇಶಿಯಾ ತಜ್ಞರಾದ ಡಾ. ವಿನ್ಸೆಂಟ್ ಮ್ಯಾಥ್ಯೂಸ್, ಡಾ. ಸಂದ್ಯಾ, ಡಾ. ಫೈಜುದ್ದೀನ್ ಕಾರ್ಯನಿರ್ವಹಿಸಿದ್ದರು. ಸತತ ನಾಲ್ಕು ತಾಸುಗಳ ಕಾಲ ಶಸ್ತ್ರ ಚಿಕಿತ್ಸೆಯನ್ನು ಮಾಡಿರುವ ಈ ತಂಡ ಕೊನೆಗೂ ಅಪರೂಪದ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಯಶಸ್ಸು ಕಂಡಿದೆ.

Congenital He midi a pragmatic Agenesis :
ಬಲಗಡೆ ತೆಳು ಪೊರೆಯ ಆ ಜನನದ ಪ್ರಕರಣ ಬಹಳ ಅಪರೂಪದ ಕಾಯಿಲೆಯಾಗಿದೆ. ಈ ಕಾಯಿಲೆ ಸಾಮಾನ್ಯವಾಗಿ ನವಜಾತ ಶಿಶುಗಳಲ್ಲಿ ಕಂಡುಬರುತ್ತದೆ. ಇಂತಹ ಪ್ರಕರಣ 1.25ಲಕ್ಷದಲ್ಲಿ ಒಂದು ನವಜಾತ ಶಿಶುವಿನಲ್ಲಿ ಕಂಡುಬರುತ್ತದೆ. ಹಿರಿಯರಲ್ಲಿ ಈ ಕಾಯಿಲೆ ಕಂಡು ಬರುವುದು ಬಹಳ ವಿರಳ, ಏಕೆಂದರೆ 60%ರಷ್ಟು ಶಿಶುಗಳ ಸಾವು ನವಜಾತ ವಯಸ್ಸಿನಲ್ಲಿರುತ್ತದೆ. ಒಂದು ವೇಳೆ ಹಿರಿಯರಲ್ಲಿ ಕಂಡು ಬಂದರೆ ಈ ಕಾಯಿಲೆಯನ್ನು ಧೃಢೀಕರೀಸುವುದು ಹಾಗೂ ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸುವುದು ಬಹಳ ಕಷ್ಟದ ಸಂಗತಿ. ಇಲ್ಲಿಯವರೆಗೆ ವೈದ್ಯಕೀಯ ಲೋಕದಲ್ಲಿ ಸುಮಾರು ೮ಮಂದಿ ಹಿರಿಯರಲ್ಲಿ ಈ ಕಾಯಿಲೆಯನ್ನು ದೃಢೀಕರಿಸಿ ಚಿಕಿತ್ಸೆ ನೀಡಲಾಗಿದೆ.

ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಮಂಗಳೂರಿನ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಒಂದು ಘಟಕವಾಗಿದೆ. 650 ಬೆಡ್‌ಗಳನ್ನು ಹೊಂದಿರುವ ಈ ಆಸ್ಪತ್ರೆ ಮಲ್ಟಿಸ್ಪೆಷಾಲಿಟಿ ವ್ಯವಸ್ಥೆಯನ್ನು ಹೊಂದಿದೆ‌. ದಿನದ ಇಪ್ಪತ್ತನಾಲ್ಕು ಗಂಟೆಯೂ ವೈದ್ಯಕೀಯ, ಶಸ್ತ್ರ ಚಿಕಿತ್ಸಾ ತಜ್ಞರು ಲಭ್ಯವಿರುವ  ಆಸ್ಪತ್ರೆಯಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.