ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ನಿವೃತ್ತರಾದ ಮೋನಪ್ಪ ಗೌಡ ಕೆ. ರವರಿಗೆ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ನಡೆಯಿತು.
ಬ್ಯಾಂಕಿನ ಅಧ್ಯಕ್ಷರಾದ ಜಗನ್ನಾಥ ಸಾಲಿಯಾನ್.ಹೆಚ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬ್ಯಾಂಕಿನ ಉಪಾಧ್ಯಕ್ಷರಾದ ಮೋಹನ್ ಕೆ.ಎಸ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಮನೋರಂಜನ್.ಕೆ.ಎಸ್, ಉದಯಕುಮಾರ್.ಎ, ಕೃಷ್ಣ.ಕೆ, ದಿವಾಕರ.ವಿ, ದಯಾನಂದ ಆಳ್ವ, ಸುಂದರ.ಡಿ, ವಿಶ್ವನಾಥ.ಎಂ, ಗೋವರ್ಧನ್ ಕುಮಾರ್, ಬಾಲಕೃಷ್ಣ.ಪಿ.ಎಸ್, ಶುಭಲಕ್ಷ್ಮಿರವರು ಉಪಸ್ಥಿತರಿದ್ದರು. ಶ್ರೀನಿಧಿ ವಿ. ಕುಡ್ವರವರು ಪ್ರಾರ್ಥಿಸಿದರು. ಮುಖ್ಯಕಾರ್ಯನಿರ್ವಾಹಕರಾದ ಕೃಷ್ಣ ಮುರಳಿ ಶ್ಯಾಂ.ಕೆ ರವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಮೋಹನ್ ಕೆ.ಎಸ್. ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು ಹಾಗೂ ವಿಶ್ವನಾಥ.ಎಂರವರು ವಂದಿಸಿದರು. ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.