ಪುತ್ತೂರು: ರೋಟರಿ ಜಿಲ್ಲೆ ೩೧೮೧, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ೨೦೨೦-೨೧ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಜೇಸಿಐ ರಾಷ್ಟ್ರೀಯ ತರಬೇತುದಾರರಾಗಿರುವ ಕೃಷ್ಣ ಮೋಹನ್ ಪಿ.ಎಸ್, ಕಾರ್ಯದರ್ಶಿಯಾಗಿ ನಿವೃತ್ತ ಶಿಕ್ಷಕ ಪದ್ಮನಾಭ ಶೆಟ್ಟಿ ಬಿ, ಕೋಶಾಧಿಕಾರಿಯಾಗಿ ಸೌಂದರ್ಯ ಕ್ರೆಡಿಟ್ ಕೋ-ಆಪರೇಟಿವ್ ಇದರ ಶಾಖಾ ವ್ಯವಸ್ಥಾಪಕರಾದ ಮನೋಹರ್ ಕೆ.ರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ನಿಯೋಜಿತ ಅಧ್ಯಕ್ಷರಾಗಿ ಉದಯ ಶೆಟ್ಟಿ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಪ್ರಮೋದ್ ಮಲ್ಲಾರ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ವಿಕ್ಟರ್ ಮಾರ್ಟಿಸ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಡಾ|ಪೊಡಿಯ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಆನಂದ ಉಡುಪ, ಯೂತ್ ಸರ್ವಿಸ್ ನಿರ್ದೇಶಕರಾಗಿ ಮಹಾಬಲ, ಪೋಲಿಯೋ ಚೇರ್ಮ್ಯಾನ್ ರಾಜೇಶ್ ಯು.ಪಿ, ಟಿಆರ್ಎಫ್ ಚೇರ್ಮ್ಯಾನ್ ಲಾರೆನ್ಸ್ ಗೊನ್ಸಾಲ್ವಿಸ್, ಮೆಂಬರ್ಶಿಪ್ ಡೆವಲಪ್ಮೆಂಟ್ ಚೇರ್ಮ್ಯಾನ್ ಜಯಕುಮಾರ್ ರೈ ಎಂ.ಆರ್, ಸಿಎಲ್ಸಿಸಿ ಚೇರ್ಮ್ಯಾನ್ ಡಾ.ಹರಿಕೃಷ್ಣ ಪಾಣಾಜೆ, ವಿನ್ಸ್ ಚೇರ್ಮ್ಯಾನ್ ಜೆರೋಮಿಯಸ್ ಪಾಸ್, ವಾಟರ್ ಮತ್ತು ಸ್ಯಾನಿಟೇಶನ್ ಚೇರ್ಮ್ಯಾನ್ ಡಾ.ಶಶಿಧರ್ ಕಜೆ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್ಮ್ಯಾನ್ ನಟೇಶ್ ಉಡುಪ, ಸಾರ್ಜಂಟ್ ಎಟ್ ಆರ್ಮ್ಸ್ ಪ್ರಶಾಂತ್ ಶೆಣೈ, ಕ್ರೀಡಾ ಚೇರ್ಮ್ಯಾನ್ ಆಗಿ ಕಾರ್ತಿಕ್ ರೈ, ಬುಲೆಟಿನ್ ಎಡಿಟರ್ ಸುರೇಂದ್ರ ಕಿಣಿರವರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾದ ಕೃಷ್ಣ ಮೋಹನ್ರವರು ೨೦೧೫ರಲ್ಲಿ ಜೇಸಿಐ ವಲಯಾಧ್ಯಕ್ಷರಾಗಿ, ೨೦೧೩ರಲ್ಲಿ ರೋಟರಿ ಪುತ್ತೂರು ಸಿಟಿ ಸದಸ್ಯರಾಗಿ, ೨೦೧೬ರಲ್ಲಿ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ರಕ್ತದಾನ ಮಾಡಿ ಜೀವ ಉಳಿಸು ಎಂಬಂತೆ ಕೃಷ್ಣ ಮೋಹನ್ರವರು ೩೪ ಬಾರಿ ರಕ್ತದಾನ ಮಾಡಿರುತ್ತಾರೆ ಅಲ್ಲದೆ ಗೋಲಕ್ಷ್ಮೀ ಡೈರಿ ಮತ್ತು ಗೋಲಕ್ಷ್ಮೀ ಎಂಟರ್ಪ್ರೈಸಸ್ನ ಮಾಲಕರಾಗಿರುತ್ತಾರೆ. ಹೈನುಗಾರರ ಸ್ವ-ಸಹಾಯ ಸಂಘದ ಅಧ್ಯಕ್ಷರಾಗಿ, ಸಣ್ಣ ಕೈಗಾರಿಕಾ ಸಹಕಾರಿ ಸಂಘದ ನಿರ್ದೇಶಕರಾಗಿ, ಸಿಡ್ಕೋ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಕೃಷ್ಣ ಮೋಹನ್ರವರು.
ಕಾರ್ಯದರ್ಶಿಯಾಗಿ ಆಯ್ಕೆಯಾದ ಪದ್ಮನಾಭ ಶೆಟ್ಟಿಯವರು ಪ್ರಸ್ತುತ ಜೀವ ವಿಮಾ ನಿಗಮದಲ್ಲಿ ವಿಮಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪದ್ಮನಾಭ ಶೆಟ್ಟಿಯವರು ಶಿಕ್ಷಕರಾಗಿದ್ದು, ೧೯೯೯ರಲ್ಲಿ ನೇಮಕಾತಿ ಹೊಂದಿ ಬಡಗನ್ನೂರು ಸರಕಾರಿ ಹಿ.ಪ್ರಾ ಶಾಲೆಯಲ್ಲಿ ಎಂಟು ವರ್ಷ, ಕೃಷ್ಣನಗರ ಸರಕಾರಿ ಉನ್ನತ ಹಿ.ಪ್ರಾ ಶಾಲೆಯಲ್ಲಿ ೧೨ ವರ್ಷ ಸೇವೆಯನ್ನು ಪೂರೈಸಿ ನಿವೃತ್ತಿ ಹೊಂದಿದ್ದರು. ರೋಟರಿ ಸಿಟಿಯಲ್ಲಿ ೨೦೧೯-೨೦ನೇ ಸಾಲಿನಲ್ಲಿ ಕೋಶಾಧಿಕಾರಿಯಾಗಿ ಅವರು ಕರ್ತವ್ಯ ನಿರ್ವಹಿಸಿದ್ದರು.
ಕೋಶಾಧಿಕಾರಿಯಾಗಿ ಆಯ್ಕೆಯಾದ ಮನೋಹರ್ ಕೊಳಕ್ಕಿಮಾರ್ರವರು ರೋಟರಿ ಸಿಟಿಯ ಸ್ಥಾಪಕ ಸದಸ್ಯರಾಗಿದ್ದು, ೨೦೧೮-೧೯ರ ಸಾಲಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಈ ತನಕ ಅವರು ಕ್ಲಬ್ನ ವಿವಿಧ ಹುದ್ದೆಗಳಾದ ಕಾರ್ಯದರ್ಶಿ, ಬುಲೆಟಿನ್ ಎಡಿಟರ್, ಕ್ಲಬ್ ಹಾಗೂ ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ, ಕೋಶಾಧಿಕಾರಿಯಾಗಿಯೂ ಸೇವೆ ನೀಡಿರುತ್ತಾರೆ. ಸಹಕಾರಿ ಕ್ಷೇತ್ರದಲ್ಲಿ ೩೨ ವರ್ಷಗಳ ಕಾಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಅವರದ್ದಾಗಿದೆ.
ಇಂದು ಪದಪ್ರದಾನ…
ನೂತನ ಪದಾಧಿಕಾರಿಗಳಿಗೆ ರಾಜ್ಯ ಸರಕಾರದ ವಿಧಾನಪರಿಷತ್ ಸದಸ್ಯ ಹಾಗೂ ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರತಾಪ್ ಸಿಂಹ ನಾಯಕ್ರವರು ಪದಪ್ರದಾನ ಮಾಡಲಿದ್ದಾರೆ. ಗೌರವ ಅತಿಥಿಗಳಾಗಿ ವಲಯ ಸೇನಾನಿ ಜೆರೋಮಿಯಸ್ ಪಾಸ್, ಮಾತೃಸಂಸ್ಥೆಯಾದ ರೋಟರಿ ಕ್ಲಬ್ ಪುತ್ತೂರು ಈಸ್ಟ್ನ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯರವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಜು.೭ ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಲಿದೆ.