HomePage_Banner
HomePage_Banner
HomePage_Banner
HomePage_Banner

ಆರೋಗ್ಯ ಇಲಾಖೆಗೆ ಕೋವಿಡ್-19 ಮಾದರಿ ಸಂಗ್ರಹ ಕಿಯೋಕ್ಸ್ ಕೊಡುಗೆ

Puttur_Advt_NewsUnder_1
Puttur_Advt_NewsUnder_1
  • ಸೆಲ್ಕೋ ಸಂಸ್ಥೆಯಿಂದ ಮನೆ ಬೆಳಕಿನೊಂದಿಗೆ ಆರೋಗ್ಯದ ಕಾಳಜಿ – ಸಂಜೀವ ಮಠಂದೂರು

ಪುತ್ತೂರು: ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯದ ವ್ಯವಸ್ಥೆ ಇರಬೇಕು. ಇದಕ್ಕೆ ಸರಕಾರದ ಜೊತೆ ಸಂಘ ಸಂಸ್ಥೆಗಳ ಸಹಕಾರವೂ ಇದೆ. ಪ್ರಸ್ತುತ ಈಗಿನ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಬೆಳಕು ನೀಡುವ ಕಾರ್ಯದಲ್ಲಿ ನಿರತರಾಗಿರುವ ಸೆಲ್ಕೋ ಸೋಲಾರ್ ಸಂಸ್ಥೆ ಇವತ್ತು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಸೆಲ್ಕೋ ಸಂಸ್ಥೆಯಿಂದ ರೂ.೧.೫೦ ಲಕ್ಷ ವೆಚ್ಚದಲ್ಲಿ ಪುತ್ತೂರು ಮತ್ತು ಕಡಬ ಉಭಯ ತಾಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ೭ ಕಡೆಗಳಿಗೆ ಕೊಡುಗೆಯಾಗಿ ನೀಡಿದ ಕೋವಿಡ್ -೧೯ ಮಾದರಿ ಸಂಗ್ರಹ ಕಿಯೋಸ್ಕ್‌ನ್ನು ತಾಲೂಕು ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಸಾಂಕೇತಿಕವಾಗಿ ಅವರು ಉದ್ಘಾಟಿಸಿ ಮಾತನಾಡಿದರು. ವೈದ್ಯಲೋಕಕ್ಕೆ ಸವಲಾದ ಕೋವಿಡ್‌ನಿಂದಾಗಿ ಒಬ್ಬರಿಗೊಬ್ಬರು ಮುಖ ತೋರಿಸದ, ಉಸಿರುಗಟ್ಟಿಸುವ ಸ್ಥಿತಿಯಲ್ಲಿಯಲ್ಲಿ ಇದ್ದೇವೆ. ಆರ್ಥಿಕ ಬಿಕ್ಕಟ್ಟು ಸಾಮಾನ್ಯ ಜನರ ಬದುಕಿಗೆ ತೊಂದರೆ ಆಗಿದೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಜನರ ಬದುಕಿನ ಬಗ್ಗೆ ವಿಶೇಷ ಕಾಳಜಿ ವಹಿಸಿ ಆತ್ಮನಿರ್ಭರ ಭಾರತದ ಕಲ್ಪಣೆ ಕೊಟ್ಟಿದೆ. ಈ ನಡುವೆ ಅನೇಕ ಸಂಘ ಸಂಸ್ಥೆಗಳು ಸಹಾಯ ಹಸ್ತ ನೀಡಿದೆ. ಸೆಲ್ಕೋ ಕೂಡಾ ಆರೋಗ್ಯದ ಕಾಳಜಿ ವಹಿಸಿ ಸರಕಾರಕ್ಕೆ ಪಿಪಿಇ ಕಿಟ್ ಉಳಿಸುವ ಮತ್ತು ಭಯಮುಕ್ತ ವ್ಯವಸ್ಥೆಗೆ ಕಿಯೋಸ್ಕ್ ನೀಡುವ ಮೂಲಕ ಮಹತ್ವದ ಸಹಕಾರ ನೀಡಿದೆ ಎಂದರು. ಇದರ ಜೊತೆಗೆ ಕೊರೋನಾ ಸೋಂಕು ಹರಡದಂತೆ ಸರಕಾರ ನೀಡಿದ ಸೂಚನೆಯನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಿಯೋಸ್ಕ್ ಘಟಕವನ್ನು ಆರೋಗ್ಯ ಇಲಾಖೆಗೆ ಕೊಡಮಾಡಲು ಕಾರಣಕರ್ತರಾದ ತಾ.ಪಂ ಸದಸ್ಯ ಹರೀಶ್ ಬಿಜತ್ರೆ ಮಾತನಾಡಿದರು. ಸೆಲ್ಕೋ ಸಂಸ್ಥೆಯ ಮೆನೇಜರ್ ಸುಧಾಕರ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅಮಿತ್, ಡಾ.ನಮಿತಾ, ಡಾ.ಗೋಪಿನಾಥ, ಡಾ.ರಿಸ್ವಾನ್, ಡಾ.ಶಶಿಕಲಾ, ಡಾ.ದೀಕ್ಷಾ, ಡಾ.ಅಂಬಿಕಾ ಅತಿಥಿಗಳನ್ನು ಗೌರವಿಸಿದರು. ಡಾ. ನಮಿತಾ ವಂದಿಸಿದರು. ಆರೋಗ್ಯ ಇಲಾಖೆಯ ಎಮ್.ಆರ್ ಪದ್ಮಾವತಿ ಅವರು ಕಾರ್ಯಕ್ರಮ ನಿರೂಪಿಸಿದರು.

ಸೆಲ್ಕೋದಿಂದ ಇನ್ನಷ್ಟು ಸಹಕಾರದ ಭರವಸೆ
೧೯೯೪ರಲ್ಲಿ ಆರಂಭಗೊಂಡ ಸೆಲ್ಕೋ ಸಂಸ್ಥೆ ಗ್ರಾಮೀನ ಭಾಗದ ಮನೆಯನ್ನು ಬೆಳಕು ಮಾಡುವ ಗುರಿ ಹೊಂದಿತ್ತು. ಹಂತ ಹಂತವಾಗಿ ಗ್ರಾಮೀಣ ಭಾಗದ ಜನರಿಗೆ ಪೂರಕ ಕೆಲಸಕಾರ್ಯ ಮಾಡುತ್ತಿದ್ದು, ಇದೀಗ ಮಾರಕ ರೋಗದಿಂದ ಭಯಮುಕ್ತವಾಗಲು ಆರೋಗ್ಯದ ವಿಚಾರದಲ್ಲೂ ಸಹಕಾರ ನೀಡಿದ್ದು, ಪುತ್ತೂರು ತಾಲೂಕಿಗೆ ೫ ಮತ್ತು ಕಡಬಕ್ಕೆ ೨ ಕಿಯೋಸ್ಕ್ ಘಟಕವನ್ನು ನೀಡಿದೆ. ಒಂದು ಕಿಯೋಸ್ಕ್ ಘಟಕಕ್ಕೆ ಸುಮಾರು ರೂ. ೨೪ಸಾವಿರ ಖರ್ಚು ತಗಲಿದ್ದು, ಇದರಲ್ಲಿ ಸೋಲಾರ್ ಲೈಟ್, ಫ್ಯಾನ್ ಅಳವಡಿಸಲಾಗಿದ್ದು, ಎಲ್ಲಿಗೂ ಬೇಕಾದರೂ ಕೊಂಡೊಯ್ಯಬಹುದು ಎಂದು ಸೆಲ್ಕೋ ಸಂಸ್ಥೆಯ ಪುತ್ತೂರು ವಿಭಾಗದ ಹಿರಿಯ ವ್ಯವಸ್ಥಾಪಕ ಸಂಜಿತ್ ರೈ ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.