HomePage_Banner
HomePage_Banner
HomePage_Banner
HomePage_Banner

ಅಂಚೆ ಕಛೇರಿಯ ನಿವೃತ್ತ ಹೆಡ್ ಪೋಸ್ಟ್‌ಮ್ಯಾನ್ ಅಣ್ಣಪ್ಪ ನಾಯ್ಕ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೊಟ್ಟೆತ್ತಡ್ಕ ನಿವಾಸಿ, ಪುತ್ತೂರು ಮುಖ್ಯರಸ್ತೆಯಲ್ಲಿನ ಪ್ರಧಾನ ಅಂಚೆ ಕಛೇರಿಯ ನಿವೃತ್ತ ಹೆಡ್ ಪೋಸ್ಟ್‌ಮ್ಯಾನ್ ಕೆ.ಅಣ್ಣಪ್ಪ ನಾಯ್ಕ(59ವ.) ರವರು ಅಸೌಖ್ಯದಿಂದ ಜು.6 ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಮೃತರು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದು, ಕಳೆದ ವಾರವೇ ವೃತ್ತಿಗೆ ಸ್ವಯಂನಿವೃತ್ತಿಯನ್ನು ಪಡೆದುಕೊಂಡಿದ್ದರು. ಮೃತ ಅಣ್ಣಪ್ಪ ನಾಯ್ಕರವರು ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ, ಶ್ರೀ ಚಾಮುಂಡೇಶ್ವರಿ ಸ್ವ-ಸಹಾಯ ಸಂಘದ ಅಧ್ಯಕ್ಷರಾಗಿ, ಪ್ರಸ್ತುತ ಸದಸ್ಯರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭೂಮಿಕಾ ಒಕ್ಕೂಟದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಅಣ್ಣಪ್ಪ ನಾಯ್ಕರವರು ಓರ್ವ ಕಬಡ್ಡಿಪಟುವಾಗಿದ್ದರು. ಮೃತರು ಪತ್ನಿ ಅನಿತಾ, ಪುತ್ರ ದೀಕ್ಷಿತ್, ಪುತ್ರಿ ಅಶ್ವಿನಿರವರನ್ನು ಅಗಲಿದ್ದಾರೆ.

ಮೃತರ ಮನೆಗೆ ಪುತ್ತೂರು ಪ್ರಧಾನ ಅಂಚೆ ಕಛೇರಿ ಮತ್ತು ದರ್ಬೆ ಅಂಚೆ ಕಛೇರಿಯ ಸಿಬ್ಬಂದಿಗಳು, ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈ, ಎಚ್.ಮಹಮ್ಮದ್ ಆಲಿ, ಮಾಜಿ ನಗರಸಭಾ ಸದಸ್ಯ ರಮೇಶ್ ರೈ, ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷ ವೇಣುಗೋಪಾಲ ಗೌಡ, ಆಡಳಿತ ಮಂಡಳಿ ಸದಸ್ಯ ರಮೇಶ್ ರೈ ಮಿಶನ್‌ಮೂಲೆ, ಭೂಮಿಕಾ ಒಕ್ಕೂಟದ ಅಧ್ಯಕ್ಷ ದಿಲೀಪ್ ಕುಮಾರ್, ಶ್ರೀ ಚಾಮುಂಡೇಶ್ವರಿ ಸ್ವ-ಸಹಾಯ ಸಂಘದ ಸದಸ್ಯರಾದ ಸದಸ್ಯರಾದ ರಾಮ, ಲಕ್ಷ್ಮಣ, ಶೇಖರ್, ಸತೀಶ್, ಸುಂದರ, ರಮೇಶ್, ಪ್ರಭಾಕರ, ದರ್ಬೆ ಅಂಚೆ ಕಛೇರಿ ನೌಕರ ಮುರಳೀಧರ, ಸುಧೀರ್ ಸಹಿತ ಹಲವರು ಭೇಟಿ ನೀಡಿ ಸಾಂತ್ವನ ನುಡಿದಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.