- ಶಾಸಕ ಸಂಜೀವ ಮಠಂದೂರು ಅವರಿಂದ ಬೇಡಿಕೆ ಈಡೇರಿಸುವ ಭರವಸೆ
ಪುತ್ತೂರು: ಪುತ್ತೂರು ಉಪವಿಭಾಗದಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪಾನ ಮಾಡಬೇಕೆಂದು ಆಗ್ರಹಿಸಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಜು.6ರಂದು ಶಾಸಕ ಸಂಜೀವ ಮಠಂದೂರಿಗೆ ಸಲ್ಲಿಸಿದ ಮನವಿಗೆ ಸ್ಪಂಧಿಸಿದ ಶಾಸಕರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.
ಕೋವಿಡ್ -19 ಸಂದರ್ಭದಲ್ಲಿ ಪುತ್ತೂರು ಉಪವಿಭಾಗ ಬಿಟ್ಟು ಬೇರೆ ಕಡೆ ಹೋಗಿ ಪರೀಕ್ಷಾ ಮೌಲ್ಯ ಮಾಪಾನ ಮಾಡುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗದಲ್ಲೇ ಎಸ್ಎಸ್ಎಲ್ಸಿ ಪರೀಕ್ಷಾ ಮೌಲ್ಯ ಮಾಪನಾ ಮಾಡುವ ಕುರಿತು ಶಿಕ್ಷಕರ ನಿಯೋಗ ಶಾಸಕರಲ್ಲಿ ಮನವಿ ಮಾಡಿತ್ತು. ಈ ಸಂದರ್ಭ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಈ ಕುರಿತ ವಿಚಾರವನ್ನು ಶಿಕ್ಷಣ ಸಚಿವರ ಮುಂದಿಟ್ಟು ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರಲ್ಲದೆ. ಸವಾಲಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಶಿಕ್ಷಕರನ್ನು ಅಭಿನಂದಿಸಿದರು. ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್, ಕೋಶಾಧಿಕಾರಿ ಶಂಕರ್ ಭಟ್, ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್, ಜೊತೆ ಕಾರ್ಯದರ್ಶಿ ಅನ್ನಪೂರ್ಣ, ವಿನೋದ್ ಕುಮಾರ್ ಕೆ.ಎಸ್, ಜಲಜಾಕ್ಷಿ, ಎಮ್.ಅನ್ನಮ್ಮ ಪಿ.ಎಸ್ ನಿಯೋಗದಲ್ಲಿದ್ದರು.