ವರದಿ: ಉಮಾಪ್ರಸಾದ್ ರೈ ನಡುಬೈಲು
ಪುತ್ತೂರು: ಪುತ್ತೂರು ಮಂಡಲ ಬಿಜೆಪಿ ರೈತ ಮೋರ್ಚಾ ಅದ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಜು.6ರಂದು ಶಾಸಕ ಸಂಜೀವ ಮಠಂದೂರು ಇವರ ಬಳಿ ಕೃಷಿ ಯೋಗ್ಯ ಭೂಮಿಗಳನ್ನು ಕೃಷಿ ಚಟುವಟಿಕೆಗಳಿಗೆ ಬಳಸುವ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಬೇಕೆಂದು ಮನವಿ ಮಾಡಿಕೊಂಡರು.
ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ ಪುತ್ತೂರು ರೈತ ಮೋರ್ಚಾ ಅದ್ಯಕ್ಷ ಸುರೇಶ್ ಕಣ್ಣಾರಾಯ , ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ರಾಮಚಂದ್ರ ಮಣಿಯಾಣಿ , ಕಾರ್ಯದರ್ಶಿಯಾದ ಪುನೀತ್ ಮಾಡತ್ತಾರ್ ಸ್ಥಳದಲ್ಲಿ ಉಪಸ್ಥಿತಿ ಇದ್ದರು.