HomePage_Banner
HomePage_Banner
HomePage_Banner
HomePage_Banner

ಕಳುವಾಜೆ ಕುಟುಂಬಸ್ಥರ ವತಿಯಿಂದ ನಿವೃತ್ತ ಬೇಬಿ.ಜೆ. ರೈ ಅವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

 

ಒಳ್ಳೆಯ ಕೆಲಸಗಳನ್ನು ಮಾಡುವವರನ್ನು ಗುರುತಿಸುವುದು ನಮ್ಮ ಕರ್ತವ್ಯ- ಜಿನ್ನಪ್ಪ ಗೌಡ ಕಳುವಾಜೆ

ಕಾಣಿಯೂರು: ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವವರನ್ನು ಗುರುತಿಸುವುದು ನಮ್ಮ ಕರ್ತವ್ಯ. ನಯ, ವಿನಯತೆಯಿಂದ ಎಲ್ಲರೊಂದಿಗೆ ತಮ್ಮ ಉತ್ತಮ ಸೇವೆಯನ್ನು ನೀಡುವ ಮುಖಾಂತರವಾಗಿ ಸೇವಾವಧಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಬೇಬಿಯವರಿಗೆ ಸಲ್ಲುತ್ತದೆ ಎಂದು ಕಳುವಾಜೆ ಕುಟುಂಬದ ಹಿರಿಯರಾದ ಜಿನ್ನಪ್ಪ ಗೌಡ ಕಳುವಾಜೆ ಹೇಳಿದರು. ಅವರು ಕಳುವಾಜೆ ಕುಟುಂಬಸ್ಥರ ವತಿಯಿಂದ ಜು ೬ರಂದು ಕಳುವಾಜೆ ಕುಶಾಲಪ್ಪ ಗೌಡ ಅವರ ಮನೆಯಲ್ಲಿ ನಡೆದ ಇತ್ತೀಚೆಗೆ ನಿವೃತ್ತಿಗೊಂಡಿರುವ ಸವಣೂರು ಸಿ.ಎ ಬ್ಯಾಂಕ್‌ನ ಬೆಳಂದೂರು ಶಾಖಾ ವ್ಯವಸ್ಥಾಪಕಿ ಬೇಬಿ ರೈ ಅವರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಸವಣೂರು ಸಿ.ಎ ಬ್ಯಾಂಕ್ ಉತ್ತಮ ಸಂಘವಾಗಿ ಬೆಳಗಲು ಕಳುವಾಜೆ ಕುಟುಂಬಸ್ಥರ ಪಾತ್ರವೂ ಬಹಳಷ್ಠಿದೆ. ಒಂದು ಮನೆಯಲ್ಲಿ ಆಯೋಜನೆ ಮಾಡಿರುವ ಈ ಸನ್ಮಾನವು ಸವಣೂರು ಸಿ.ಎ ಬ್ಯಾಂಕ್‌ಗೆ ಸಲ್ಲುತ್ತದೆ ಎಂದರು. ಸನ್ಮಾನ ಸ್ವೀಕರಿಸಿದ ಸವಣೂರು ಸಿ.ಎ ಬ್ಯಾಂಕಿನ ಬೆಳಂದೂರು ಶಾಖೆಯ ನಿವೃತ್ತ ವ್ಯವಸ್ಥಾಪಕಿ ಬೇಬಿ ರೈ ಅವರು ಮಾತನಾಡಿ, ಸಂಘದ ಜೊತೆ ಸದಾ ಸ್ಪಂದಿಸುತ್ತಾ, ಸಂಘದ ಬೆಳವಣಿಗೆಯಲ್ಲಿ ಕೈಜೋಡಿಸುತ್ತಾ ಬಂದಿರುವ ಕಳುವಾಜೆ ಕುಟುಂಬವು ಇನ್ನೂ ಮುಂದೆಯೂ ಸಂಘದ ಅಭಿವೃದ್ಧಿಯಲ್ಲಿ ಸಹಕಾರ ಸದಾ ಇರಲಿ ಎಂದರು. ಕುಶಾಲಪ್ಪ ಗೌಡ ಕಳುವಾಜೆ, ಅಚ್ಯುತ್ತ ಗೌಡ ಕಳುವಾಜೆ, ಭಾಸ್ಕರ ಗೌಡ ಕಳುವಾಜೆ, ಯಶವಂತ ಗೌಡ ಕಳುವಾಜೆ, ದೇವಿಪ್ರಸಾದ್ ಸಜಂಕು ಕಳುವಾಜೆ, ಪ್ರಶಾಂತ್ ಕಳುವಾಜೆ, ಜಯಪ್ರಕಾಶ್ ಕಳುವಾಜೆ, ಶಶಿಕಲಾ ತಾರಾನಾಥ ಎರ್ಕಳ, ಜನಾರ್ದನ ಕಾಮಣ, ಚಿದಾನಂದ ಮೆದುಬಾರಿಕೆ, ನೀಲಯ್ಯ ನಾಯ್ತಡ್ಕ, ಸಂಜನಾ ನಡ್ಕ ಹಾಗೂ ಕಳುವಾಜೆ ಕುಟುಂಬಸ್ಥರು ಉಪಸ್ಥಿತರಿದ್ದರು. ವೆಂಕಟ್ರಮಣ ಗೌಡ ಕಳುವಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಂದರ ಗೌಡ ಕಳುವಾಜೆ ಸ್ವಾಗತಿಸಿ, ವೇಣುಗೋಪಾಲ ಕಳುವಾಜೆ ವಂದಿಸಿದರು. ಶಿವಪ್ರಸಾದ್ ಕಳುವಾಜೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.