ಕೊರೋನ ಸಂಕಷ್ಟದಲ್ಲಿ ವಿದ್ಯಾರ್ಥಿಗಳ ಶಿಕ್ಷಣವು ಮರೀಚಿಕೆಯಾಗಿದೆ, ಇದನ್ನು ಮನಗಂಡು ಅಂಬಿಕಾ ಪದವಿಪೂರ್ವ ವಿದ್ಯಾಲಯವು ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಮುಗಿಸಿದ ಮತ್ತು ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರಥಮ ಪಿಯುಸಿಗೆ ಸೇರಲಿರುವವರು ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಶಿಕ್ಷಣವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಯಾವುದೇ ಚೀನಾದ ಆಪ್ ಬಳಸದೆ ಸ್ವದೇಶಿ ತಂತ್ರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ನಮ್ಮದೇ ವಿಶಿಷ್ಟವಾದಂತಹ ವೆಬ್ ಸೈಟ್ ಮೂಲಕ ಆನ್ ಲೈನ್ ಶಿಕ್ಷಣವನ್ನು ಪ್ರಾರಂಭಿಸಿದ ಖ್ಯಾತಿ ಅಂಬಿಕಾಕ್ಕೆ ಸೇರಿದ್ದಾಗಿದೆ.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಆನ್ ಲೈನ್ ತರಗತಿಯನ್ನು ಇದೇ ಜುಲೈ13 ರಂದು ಪ್ರಾರಂಭಿಸಲಾಗುವುದು, ಪ್ರತೀ ದಿನ ಪ್ರತೀ ವಿಷಯಗಳಲ್ಲಿ ಒಂದು ಗಂಟೆಗಳ ಕಾಲ ಪ್ರತೀ ಅವಧಿಯ ಬಿಡುವಿನೊಂದಿಗೆ ತಮ್ಮ ಮನೆಯಲ್ಲೇ ಕೂತು ಮೊಬೈಲ್, ಟ್ಯಾಬ್, ಕಂಪ್ಯೂಟರ್, ಲ್ಯಾಪ್ ಟ್ಯಾಬ್, ಮೂಲಕ ವೀಕ್ಷಿಸಬಹುದು. ಸೇರಲಿಚ್ಛಿಸುವವರು www. ambikavidyalaya.com ನಲ್ಲಿ ಮತ್ತು 08251-235688 ಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.