HomePage_Banner
HomePage_Banner
HomePage_Banner
HomePage_Banner

ಪರ್ಲಡ್ಕ ಗೋಳಿಕಟ್ಟೆಯಲ್ಲಿ ಆವರಣಗೋಡೆ ಕುಸಿತ: ಮಹಿಳೆ ಮೃತ್ಯು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯಹೆದ್ದಾರಿ ಪರ್ಲಡ್ಕದ ಗೋಳಿಕಟ್ಟೆ ಎಂಬಲ್ಲಿ ಮನೆಯಂಗಳದ ಆವರಣ ಗೋಡೆಯೊಂದು ಕುಸಿದು ಬಿದ್ದು ಮಹಿಳೆಯೊಬ್ಬರು ಮಣ್ಣಿನಡಿಯಲ್ಲಿ ಹೋತು ಹೋಗಿ ಮೃತಪಟ್ಟ ಘಟನೆ ಜು.7ರಂದು ನಡೆದಿದೆ.

ಮೃತಪಟ್ಟ ಮಹಿಳೆ ವಸಂತಿ

 

ವೀಡಿಯೋಗಾಗಿ…

ಗೋಳಿಕಟ್ಟೆ ನಿವಾಸಿಯಾಗಿದ್ದು ಮಂಗಳೂರು‌ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗಿಯಾ ಘಟಕದಲ್ಲಿ ಸಾರಿಗೆ ನಿಯಂತ್ರಣಾಧಿಕಾರಿಯಾಗಿರುವ ಚಂದ್ರಶೇಖರ್ ಅವರ ಪತ್ನಿ ವಸಂತಿ ಯಾನೆ ಶೋಭಾ (49ವ) ಅವರು ಮೃತಪಟ್ಟವರು. 

ಘಟನೆ ವಿವರ: ಚಂದ್ರಶೇಖರ್ ಅವರ ಪತ್ನಿ ವಸಂತಿ ಅವರು ಮಧ್ಯಾಹ್ನದ ವೇಳೆ ಮನೆಯ ಹಿಂಬದಿಯಲ್ಲಿ ಬೀಡಿ ಕಟ್ಟುತ್ತಿದ್ದ ವೇಳೆ ಮನೆಯ ಹಿಂಬದಿಯ ಫ್ರುಟ್ಸ್‌ ವ್ಯಾಪಾರಿಯೊಬ್ಬರ ಮನೆಯ ಸುಮಾರು 10 ಅಡಿ ಎತ್ತರದ ಆವರಣ ಗೋಡೆ ಒಮ್ಮೆಲೆ‌ ಕುಸಿದು ಬಿದ್ದಿದೆ. ಕಲ್ಲು, ಮಣ್ಣು ಸಮೇತ ಬಿದ್ದ ರಭಸಕ್ಕೆ ಕೆಳಗೆ‌ ಕುಳಿತ್ತಿದ್ದ ವಸಂತಿಯವರು ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಹಾಗೂ ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಹೊರತೆಗೆಯಲಾಯಿತು.

ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್, ನಗರಸಭಾ ಸ್ಥಳೀಯ ಸದಸ್ಯೆ ದೀಕ್ಷಾ ಪೈ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,  ಡಿ.ವೈ.ಎಸ್.ಪಿ. ದಿನಕರ್‌ ಶೆಟ್ಟಿ, ಸಂಪ್ಯ ಠಾಣಾ ಎಸ್.‌ ಐ. ಚೆಲುವಯ್ಯ, ನಗರಠಾಣಾ ವೃತ್ತನಿರೀಕ್ಷಕರ ತಿಮ್ಮಪ್ಪ ನಾಯ್ಕ್‌ ಮತ್ತಿತರು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.

 

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.