ವಿಟ್ಲ: ಇಲ್ಲಿಗೆ ಅಮೀಪದ ಒಕ್ಕೆತ್ತೂರು ನಿವಾಸಿ ಕೊರೊನಾ ಸೋಂಕಿತ 21 ವರ್ಷದ ಯುವಕನ ಕುಟುಂಬದ ಇನ್ನೊಂದು ಮಹಿಳೆಯಲ್ಲಿ ಜು.7ರಂದು ಕೊರೋನ ಪಾಸಿಟಿವ್ ಪತ್ತೆಯಾಗಿದೆ.
ಮೂರು ತಿಂಗಳ ಹಿಂದೆ ವಿದೇಶದಿಂದ ಆಗಮಿಸಿದ್ದ ಒಕ್ಕೆತ್ತೂರು ನಿವಾಸಿ ಯುವಕನಲ್ಲಿ ಕೆಲದಿನಗಳ ಹಿಂದೆ ಕೊರೋನ ಪಾಸಿಟಿವ್ ಪತ್ತೆಯಾಗಿತ್ತು. ಆ ಬಳಿಕ ಅವರ ಮನೆ ಸೀಲ್ ಡೌನ್ ಮಾಡಿ, ಮನೆ ಮಂದಿ ಹಾಗೂ ಮನೆಯ ಸಂಪರ್ಕ ಹೊಂದಿದವರ ಗಂಟಲ ದ್ರವವನ್ನು ಕೊರೋನ ಟೆಸ್ಟ್ ಗೆ ಕಳುಹಿಸಿ ಕೊಡಲಾಗಿತ್ತು. ಬಳಿಕದ ದಿನಗಳಲ್ಲಿ ಯುವಕನ ಸಹೋದರ, ಹಾಗೂ ಪತ್ನಿಯಲ್ಲಿಯೂ ಕೊರೋನ ಪಾಸಿಟಿವ್ ಪತ್ತೆಯಾಗಿತ್ತು. ಇದೀಗ ಇದೇ ಕುಟುಂಬದ ಮಹಿಳೆಯೊಬ್ಬರ ವರದಿ ಬಂದಿದ್ದು, ಅವರಿಗೆ ಸೋಂಕು ತಗುಲಿರುವುದು ದೃಡಪಟ್ಟಿದೆ. ಇದೀಗ ಒಂದೇ ಕುಟುಂಬದ ಒಟ್ಟು ನಾಲ್ವರಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ನಾಗರಿಕರಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.