HomePage_Banner
HomePage_Banner
HomePage_Banner
HomePage_Banner

ಜು.9: ಪುತ್ತೂರಿನಲ್ಲಿ ತಿರುಮಲ ಸೈಕಲ್ಸ್ ಶುಭಾರಂಭ | ಒಂದೇ ಸೂರಿನಡಿ ಎಲ್ಲಾ ಕಂಪೆನಿಯ, ರೂ.2500ರಿಂದ ರೂ.3 ಲಕ್ಷದ ಸೈಕಲ್ಸ್ ಲಭ್ಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹೋಂಡಾ ದ್ವಿಚಕ್ರ ವಾಹನ ಮಾರಾಟ ಮತ್ತು ಸರ್ವೀಸ್‌ನಲ್ಲಿ ಜಿಲ್ಲೆಯಲ್ಲೇ ಹೊಸ ದಾಖಲೆ ನಿರ್ಮಿಸಿ, ಗ್ರಾಹಕರಿಂದ ನಂಬರ್ 1 ಶೋರೂಮ್ ಎಂಬ ಶ್ಲಾಘನೆಯನ್ನು ಪಡೆದುಕೊಂಡಿರುವ ‘ತಿರುಮಲ’ ಸಂಸ್ಥೆಯವರಿಂದ ಪುತ್ತೂರಿನ ಜನತೆಗೆ ಮತ್ತೊಂದು ಸಂತಸದ ಸುದ್ದಿಯನ್ನು ನೀಡಲಾಗುತ್ತಿದೆ. ಒಂದೊಮ್ಮೆ ಹಳ್ಳಿ ಹಳ್ಳಿಯಲ್ಲೂ ಜನಪ್ರಿಯತೆ ಪಡೆದುಕೊಂಡಿದ್ದ ಸೈಕಲ್ ಈಗ ಮತ್ತೆ ಜನರನ್ನು ಆಕರ್ಷಿಸುತ್ತಿದೆ. ಗ್ರಾಹಕರಿಗೆ ಸೈಕಲ್ ಮಾರಾಟ ಮತ್ತು ಸರ್ವೀಸ್ ನೀಡುವ ಉದ್ದೇಶದೊಂದಿಗೆ ಪುತ್ತೂರಿನಲ್ಲಿ ತಿರುಮಲ ಸಂಸ್ಥೆಯವರಿಂದ ‘ ತಿರುಮಲ ಸೈಕಲ್ಸ್’ ಶುಭಾರಂಭಗೊಳ್ಳುತ್ತಿದೆ. ಬೊಳುವಾರು ಆರ್.ಕೆ ಸಂಕೀರ್ಣದಲ್ಲಿ ಜು.9 ರಂದು ಬೆಳಿಗ್ಗೆ ಶೋರೂಮ್ ಸರಳವಾಗಿ ಶುಭಾರಂಭಗೊಳ್ಳಲಿದೆ. ಗ್ರಾಹಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಶುಭಾರಂಭದಲ್ಲಿ ಭಾಗವಹಿಸಿ ಸಂಸ್ಥೆಗೆ ಪ್ರೋತ್ಸಾಹ ನೀಡುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಎಲ್ಲಾ ಕಂಪೆನಿಯ ಸೈಕಲ್ ಲಭ್ಯ
ಸೈಕಲ್ ಪ್ರಿಯರಿಗೆ ಇದೊಂದು ಅತ್ಯಂತ ಪ್ರೀತಿಯ ಶುಭ ಸುದ್ದಿಯಾಗಲಿದೆ. ತಿರುಮಲ ಸೈಕಲ್ಸ್‌ನಲ್ಲಿ ಎಲ್ಲಾ ಕಂಪೆನಿಯ ಸೈಕಲ್‌ಗಳು ಲಭ್ಯವಿದೆ. ಹಲವು ವರ್ಷಗಳಿಂದ ಜನಪ್ರಿಯತೆ ಪಡೆದುಕೊಂಡಿದ್ದ ‘ ಹರ್ಕ್‌ಲಿಸ್ ಬ್ರ್ಯಾಂಡ್’ನ ಅಧಿಕೃತ ಶೋರೂಮ್ ಇದಾಗಿದೆ. ರೂ.2500 ರಿಂದ ಹಿಡಿದು ರೂ.3 ಲಕ್ಷದ ವರೇಗಿನ ಸೈಕಲ್‌ಗಳು ತಿರುಮಲ ಸೈಕಲ್ಸ್‌ನಲ್ಲಿ ದೊರೆಯುತ್ತಿದೆ.
3 ವರ್ಷದ ಮಕ್ಕಳಿಂದ ಆರಂಭ
ತಿರುಮಲ ಸೈಕಲ್ಸ್‌ನಲ್ಲಿ ವಿಶೇಷವಾಗಿ ಟ್ರ್ಯಾಕ್‌ಆಂಡ್‌ಟ್ರ್ಯಾಯಲ್.ಕಾಮ್‌ನಲ್ಲಿ ಲಭ್ಯವಿರುವ ಎಲ್ಲಾ ಮಾಡೆಲ್ ಸೈಕಲ್‌ಗಳು ಗ್ರಾಹಕರಿಗೆ ಲಭ್ಯವಿದೆ. ಮಾಮೂಲಿ ಸೈಕಲ್‌ನಿಂದ ಹಿಡಿದು ಸ್ಪೋರ್ಟ್ಸ್ ಸೈಕಲ್ ತನಕದ ವಿವಿಧ ಮಾಡೆಲ್‌ನ ಸೈಕಲ್‌ಗಳು ಇಲ್ಲಿವೆ. ದೊಡ್ಡ ಮಟ್ಟದ ಸೈಕಲ್ ಶೋರೂಮ್ ಮಂಗಳೂರು ಬಿಟ್ಟರೆ ಇದೀಗ ಪುತ್ತೂರಿನಲ್ಲಿ ಆರಂಭವಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊ.7338179163ಗೆ ಸಂಪರ್ಕಿಸಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.