ವಿಟ್ಲ: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮಾಜದಲ್ಲಿ ಆತಂಕ ಮನೆ ಮಾಡಿದೆ. ಈ ಸಂದರ್ಭದಲ್ಲಿ ಕೋವಿಡ್-19 ನಿರ್ವಹಣೆ ಕುರಿತಂತೆ ಸಮಾಜದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ವಿಟ್ಲ, ಟೋಪ್ಕೋ ಜ್ಯುವೆಲ್ಲರಿ ವಿಟ್ಲ ಹಾಗೂ ಟೋಪ್ಕೋ ಝಂಝಂ ಜ್ಯುವೆಲ್ಲರಿ ಪುತ್ತೂರು ಇದರ ಸಹಯೋಗದಲ್ಲಿ ಜು.9ರಂದು ವಿಟ್ಲ ಲಯನ್ಸ್ ಕ್ಲಬ್ ಕಚೇರಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಸದಸ್ಯರಿಗೆ ಕೋವಿಡ್-19 ನಿರ್ವಹಣೆ ಕುರಿತಂತೆ ಕಾರ್ಯಾಗಾರ ನಡೆಯಲಿದೆ.
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಜನಜಾಗೃತಿಯ ಅಗತ್ಯತೆ ಮತ್ತು ವಿಧಾನಗಳು, ಮುಂದಿನ ಸವಾಲುಗಳು, ‘ಒತ್ತಡ ನಿರ್ವಹಣೆ’ಯ ಕೌನ್ಸಿಲಿಂಗ್, ಸರಕಾರದ ಯೋಜನೆಗಳು ಹಾಗೂ ಕೊರೋನ ಸೋಂಕಿತರ ನಿರ್ವಹಣೆ ಮತ್ತು ಮೃತರ ಅಂತ್ಯಸಂಸ್ಕಾರ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ, ವೈದ್ಯರಿಂದ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು. ಮೊದಲು ಹೆಸರು ನೋಂದಾಯಿಸುವ 30 ಮಂದಿಗೆ ಮಾತ್ರ ಅವಕಾಶ. ಆಸಕ್ತರು ಮೊಬೈಲ್ ಸಂಖ್ಯೆ 90088 57506, 9900802040 ಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.