- ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ
- ಕಾರ್ಯಕರ್ತರು ಹೇಗಿರಬೇಕೆಂಬುದಕ್ಕೆ ಪ್ರತಾಪ್ಸಿಂಹ ಜ್ವಲಂತ ಸಾಕ್ಷಿ – ಸಂಜೀವ ಮಠಂದೂರು
- ಯುವ ಪೀಳಿಗೆಗೆ ಮಾರ್ಗದರ್ಶಕರು – ಗೋಪಾಲಕೃಷ್ಣ ಹೇರಳೆ
ಪುತ್ತೂರು: ಕೆಲಸದಲ್ಲಿ ಬದ್ಧತೆ ಇರಬೇಕು, ಮೌಲ್ಯಗಳನ್ನು ಕಾಪಾಡಬೇಕು. ಟೀಕೆಗಳು ಬಂದಾಗ ತಾಳ್ಮೆ ಇರಬೇಕು. ಅಂತಹ ತಾಳ್ಮೆಯ ಮನೋಭಾವವನ್ನು ಭಗವಂತ ನೀಡಿದ್ದಾನೆ. ನಾನು ಇಲ್ಲಿ ನಿಮಿತ್ತ ಮಾತ್ರ. ನನ್ನಲ್ಲಿ ನೀವು ನಿಮ್ಮನ್ನು ಕಾಣುತ್ತಿದ್ದೀರಿ. ಹಾಗಾಗಿ ನನ್ನಿಂದ ಏನು ಕೆಲಸ ಮಾಡಲು ಸಾಧ್ಯತೆ ಇದೆಯೋ ಅದನ್ನು ಮಾಡಿಸಿಕೊಳ್ಳಿ ಎಂದು ವಿಧಾನಪರಿಷತ್ ನೂತನ ಸದಸ್ಯ ಪ್ರತಾಪ್ಸಿಂಹ ನಾಯಕ್ ಅವರು ಭರವಸೆ ನೀಡಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲದ ನೇತೃತ್ವದಲ್ಲಿ ಜು.೭ರಂದು ಇಲ್ಲಿನ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸಹಕಾರಿ ಭವನದಲ್ಲಿ ಅಭಿಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾಜದ ಕಟ್ಟ ಕಡೆಯ ಬದುಕನ್ನು ಮುಂದಿಟ್ಟು ದೇಶದ ಸಾರ್ವ ಭೌಮತ್ವ ಅಂಖಂಡತೆಯ ದ್ರಷ್ಟಿಯಿಂದ ತೆಗೆದು ಕೊಂಡ ನಿರ್ಣಯದ ಕಾರಣಕ್ಕೆ ಇಡಿ ಜಗತ್ತು ನಮ್ಮನ್ನು ನೋಡುವಂತಾಗಿದೆ. ಅಂತಹ ಒಂದು ನಿರ್ಣಯ ಪಕ್ಷವನ್ನು ಗಟ್ಟಿಗೊಳಿಸಿದೆ. ಇವತ್ತು ನಾವು ಒಳ್ಳೆಯ ಉದ್ದೇಶಕ್ಕಾಗಿ ನಾವು ನಮ್ಮ ಸಮಯ ಕೊಡುತ್ತಿದ್ದೇವೆ ಎಂದ ಅವರು ನಿಮ್ಮ ಪ್ರೀತಿಗೆ, ನಿಮ್ಮ ನಿರೀಕ್ಷೆಗೆ ಸರಿಯಾಗಿ ಮಹಾಲಿಂಗೇಶ್ವರ ಅನುಗ್ರಹದೊಂದಿಗೆ ಉತ್ತಮ ಕೆಲಸ ಮಾಡುತ್ತೇನೆ. ಇದು ನನ್ನದೇ ಊರು. ನಾನು ಇಲ್ಲೇ ಹುಟ್ಟಿ ಬೆಳೆದೆ. ಹಾಗಾಗಿ ನನ್ನಿಂದ ಏನು ಕೆಲಸ ಮಾಡಲು ಸಾಧ್ಯವೋ ಅದನ್ನು ನೀಮ್ಮ ಮೂಲಕ ಮಾಡಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕರ್ತರು ಹೇಗಿರಬೇಕೆಂಬುದಕ್ಕೆ ಪ್ರತಾಪ್ಸಿಂಹ ಜ್ವಲಂತ ಸಾಕ್ಷಿ
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿಯುವ ಸಂದರ್ಭದಲ್ಲಿ ನಾನೇ ಪ್ರಧಾನಿ ಎಂದು ಎಲ್ಲರ ಮನಸ್ಥಿತಿಯಲ್ಲಿತ್ತು. ಅದೇ ರೀತಿಯ ಮನಸ್ಥಿತಿ ಪ್ರತಾಪಸಿಂಹ ನಾಯಕ್ ಅವರು ಎಮ್.ಎಲ್.ಸಿ. ಆದಾಗ ನಾವೇ ಎಮ್ ಎಲ್ಸಿ ಆದ ಖುಷಿ ಉಂಟಾಗುತ್ತದೆ ಎಂದ ಅವರು ಒಬ್ಬ ಸ್ವಾಭಿಮಾನಿಯಾಗಿ ಪಕ್ಷದ ಕಾರ್ಯಕರ್ತರು ಜೀವನ ಪರಿಯಂತ ಹೇಗೆ ಏನು ಮಾಡಬಹುದು ಎಂಬುದನ್ನು ತೋರಿಸಿಕೊಡುವಲ್ಲಿ ಪ್ರತಾಪಸಿಂಹ ಅವರ ಮೂಲಕ ಕಾಣಬೇಕು. ಕಾರ್ಯಕರ್ತ ಹೇಗಿರಬೇಕೆಂದು ಪ್ರತಾಪ್ ಸಿಂಹ ನಾಯಕ್ ಅವರೇ ಜ್ವಲಂತ ಸಾಕ್ಷಿ ಎಂದರು.
ಯುವ ಪೀಳಿಗೆಗೆ ಮಾರ್ಗದರ್ಶಕರು:
ಬಿಜೆಪಿ ಜಿಲ್ಲಾ ಸಹಪ್ರಭಾರಿಯಾಗಿರುವ ಗೋಪಾಲಕೃಷ್ಣ ಹೇರಳೆ ಅವರು ಮಾತನಾಡಿ ಪ್ರತಾಪ್ ಸಿಂಹ ನಾಯಕ್ ಅವರು ಯುವ ಪೀಳಿಗೆಗೆ ಮಾರ್ಗದರ್ಶಕರು ಎಂದು ಹೇಳಿದರು. ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರು ಶುಭ ಹಾರೈಸಿದರು. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭಾ ಸದಸ್ಯೆ ಗೌರಿ ಬನ್ನೂರು ಪ್ರಾರ್ಥಿಸಿದರು. ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಸ್ವಾಗತಿಸಿದರು. ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾ ನಿತೀಶ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ ಮುಂಗ್ಲಿಮನೆ, ಜಯಶ್ರೀ ಎಸ್ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.