ಪುತ್ತೂರು, ಜು. 7 : ಪುತ್ತೂರಿನಲ್ಲಿ ಜು.1 ರಿಂದ ಎಲ್ಲಾ ಬ್ಯೂಟಿ ಪಾರ್ಲರ್ ಗಳು ಬಂದ್ ಆಗಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ತೆರೆಯಲಾಗುವುದು ಎಂದು ಪುತ್ತೂರು ತಾಲೂಕು ಬ್ಯೂಟಿ ಪಾರ್ಲರ್ ಮಾಲಕರ ಅಸೋಸಿಯೇಷನ್ ನಿರ್ಧರಿಸಿದೆ.
ಜಗತ್ತಿಗೆ ಆವರಿಸಿರುವ ಕೊರೋನಾ ಎಂಬ ಮಹಾಮಾರಿಯಿಂದ ಜನರು ಕಂಗೆಟ್ಟಿದ್ದಾರೆ. ಬ್ಯೂಟಿಪಾರ್ಲರ್ ಗೆ ಬೇರೆ ಬೇರೆ ಪ್ರದೇಶಗಳಿಂದ ಮಹಿಳೆಯರು ಬರುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಹಿತಾದೃಷ್ಟಿಯಿಂದ ತಾಲೂಕಿನ ಎಲ್ಲಾ ಬ್ಯೂಟಿ ಪಾರ್ಲರ್ ಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ತೆರೆಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ.