ಪುತ್ತೂರು: ಪುತ್ತೂರು ಸುಬ್ರಹ್ಮಣ್ಯ ರಸ್ತೆ ಪುರುಷರಕಟ್ಟೆ ಸಮೀಪ ಬೈಕ್ ಮತ್ತು ಕಾರುಗಳ ನಡುವೆ ಸಂಭವಿಸಿದ ಅಪಘಾತದಿಂದಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಜು.7ರಂದು ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಬೈಕ್ ಸವಾರ ನರಿಮೊಗರು ಗ್ರಾಮದ ಪುರುಷರಕಟ್ಟೆ ನಿವಾಸಿ ಜಯಂತ ಪೂಜಾರಿ ಎಂಬವರ ಪುತ್ರ ಪ್ರಸಾದ್ ಕುಮಾರ್ (19ವ) ಎಂಬವರು ಗಾಯಗೊಂಡವರು. ಅವರು ಚಲಾಯಿಸುತ್ತಿದ್ದ ಬೈಕ್ ಮತ್ತು ಎರಡು ಕಾರುಗಳ ನಡುವೆ ಪುರುಷರಕಟ್ಟೆ ಸಮೀಪ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಿಂದ ಎಸೆಯಲ್ಪಟ್ಟ ಪ್ರಸಾದ್ ಅವರ ಬಲಕಾಲು ಮುರಿತಕ್ಕೊಳಗಾಗಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ. ಅಪಘಾತ ಗೊಂಡ ತಕ್ಷಣ ಗಾಯಾಳುವನ್ನು ರಫೀಕ್ ಪಿ.ಕೆ, ಜಮಾಲ್, ಸಲೀಂ ಪಾಪು, ಫಾರೀಸ್ ಪಿ.ಕೆ ಅವರು ಶರೀಫ್ ಬಡಕೋಡಿ ಎಂಬವರ ರಿಕ್ಷಾದಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಕರಿಸಿದರು.