ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕದ ಅವ್ಯವಸ್ಥೆಯಿಂದ ಕೂಡಿದೆ. ಇದನ್ನು ತಕ್ಷಣ ಸರಿಪಡಿಸಬೇಕೆಂದು ಎಸ್ಡಿಪಿಐ ಪಕ್ಷದಿಂದ ತಾಲೂಕು ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಸರಕಾರಿ ಆಸ್ಪತ್ರೆಯ ಆಶ್ರಯದಲ್ಲಿ ನಡೆಯುವ ಮತ್ತು ಖಾಸಗಿ ಸಂಸ್ಥೆಗಳು ನಡೆಸುತ್ತಾ ಬರುವ ಡಯಾಲಿಸಿಸ್ ಘಟಕವು ಪುತ್ತೂರಿನ ಬಡ ಕಿಡ್ನಿ ರೋಗಿಗಳಿಗೆ ತಮ್ಮ ಜೀವ ಉಳಿಸಿಕೊಳ್ಳಲು ವರದಾನವಾಗಿತ್ತು. ಆದರೆ ಇತ್ತೀಚೆಗೆ ಈ ಘಟಕವು ಡಯಾಲಿಸಿಸ್ ರೋಗಿಗಳನ್ನು ನಡೆಸಿಕೊಳ್ಳುವ ರೀತಿ ತೀರಾ ಅಮಾನವೀಯವಾಗಿದೆ. ಪ್ರಸ್ತುತ ಡಯಾಲಿಸಿಸ್ ನಡೆಯುತ್ತಿರುವ ಸಂದರ್ಭದಲ್ಲಿ ಈ ಘಟಕದ ಸಿಬ್ಬಂದಿಗಳು ವಹಿಸಬೇಕಾದ ಕರ್ತವ್ಯದಿಂದ ನುಣುಚಿಕೊಂಡು ಬೇಕಾಬಿಟ್ಟಿ ಯಾಗಿ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಡಯಾಲಿಸಿಸ್ ರೋಗಿಗಳ ಬಗ್ಗೆ ಬಹಳಷ್ಟು ನಿಗಾವಹಿಸಬೇಕಾದ ಈ ಡಯಾಲಿಸಿಸ್ ಘಟಕವು ಬಡ ರೋಗಿಗಳ ಪಾಲಿಗೆ ಮೃತ್ಯು ಕೂಪವಾಗಿ ಪರಿಣಮಿಸುತ್ತಿದೆ. ಆದ್ದರಿಂದ ಈ ಬಗ್ಗೆ ಅಲ್ಲಿನ ಸಂಪೂರ್ಣ ವ್ಯವಸ್ಥೆಯನ್ನು ಸರಿದಾರಿಗೆ ತಂದು ಬಡ ಕಿಡ್ನಿ ರೋಗಿಗಳಿಗೆ ಸರಕಾರವು ನೀಡಿದಂತಹ ಈ ಸವಲತ್ತನ್ನು ಸಮರ್ಪಕವಾಗಿ ಉಪಯೋಗಿಸುವಂತಾಗಲು ಮತ್ತು ಈ ಘಟಕಗದ ಸಿಬ್ಬಂದಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಈ ಬಗ್ಗೆ ಕರ್ತವ್ಯ ನಿರ್ವಹಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು. ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಬಾವು ಅವರ ತಾಲೂಕು ಆರೋಗ್ಯಾಧಿಕಾರಿಗಳಿಗೆ ಮತ್ತು ಸಹಾಯಕ ಕಮೀಷನರ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಪುತ್ತೂರು ನಗರಾದ್ಯಕ್ಷ ಬಶೀರ್ ಕೂರ್ನಡ್ಕ, ಎಸ್ಡಿಟಿಯು ಪುತ್ತೂರು ತಾಲೂಕು ಅದ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಎಸ್ಡಿಎಯು ಅದ್ಯಕ್ಷ ಶಮೀರ್ ನಾಜೂಕು, ಪಿಎಫ್ಐ ಸಿಟಿ ಡಿವಿಷನ್ ಕಾರ್ಯದರ್ಶಿ ಬಾತಿಷ್ ಬಡಕ್ಕೋಡಿ ಹಾಗೂ ಪಕ್ಷದ ಕಾರ್ಯಕರ್ತರಾದ ಉಬೈದ್ ಮರೀಲ್,ಅಝರ್ ಕೂರ್ನಡ್ಕ,ಆತಿಕ್ ಮರೀಲ್ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.
ಡಯಲಿಸಿಸ್ ನಿರ್ವಹಣೆ ಅಚ್ಚುಕಟ್ಟಾಗಿ ಇರಲೇ ಬೇಕು.