HomePage_Banner
HomePage_Banner
HomePage_Banner
HomePage_Banner

ಕರ್ಮಲ ಸನ್ನಿದಿ ಲೇಔಟ್‌ನಲ್ಲಿ ಕೃತಕ ನೆರೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜು.7ರಂದು ಸುರಿದ ಭಾರಿ ಮಳೆಗೆ ಕರ್ಮಲ ಸನ್ನಿದಿ ಲೇಔಟ್‌ನಲ್ಲಿ ಕೃತಕ ನೆರೆಯುಂಟಾಗಿ ಮಳೆ ನೀರು ಹಲವು ಮನೆಗಳಿಗೆ ನುಗ್ಗಿರುವ ಕುರಿತು ವರದಿಯಾಗಿದೆ. ಆದರೆ ನೆರೆಗೆ ಸಂಬಂಧಿಸಿ ಸಮರ್ಪಕ ಚರಂಡಿಯ ವ್ಯವಸ್ಥೆ ಮತ್ತು ನಿರ್ವಹಣೆಯ ಬಗ್ಗೆ ಇತ್ತ ಕಡೆ ಯಾರೂ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಬನ್ನೂರು ಸಮೀಪದ ರೈಲ್ವೇ ಹಳಿಯ ಬಳಿಯ ಕರ್ಮಲದ ಸನ್ನಿದಿ ಲೇಔಟ್‌ನಲ್ಲಿ ಹಲವಾರು ಮನೆಗಳಿದ್ದು, ಪಕ್ಕದ ರೈಲ್ವೇ ಹಳಿಯ ಬಳಿಯಿಂದ ಬರುವ ಮಳೆ ನೀರು ಲೇಔಟ್‌ಗೆ ನುಗ್ಗಿತ್ತಿವೆ. ಈ ಕುರಿತು ಹಲವಾರು ಭಾರಿ ನಗರಸಭೆಯ ಗಮನಕ್ಕೆ ಇದನ್ನು ತರಲಾಗಿದ್ದರೂ ಲೇಔಟ್ ನಗರಸಭೆಗೆ ಹಸ್ತಾಂತರ ಆಗಿಲ್ಲ ಎಂಬುದು ನಗರಸಭೆ ವಾದ. ಇತ್ತ ಕಡೆ ಲೇಔಟ್ ಮಾಲಕರು ನಗರಸಭೆಗೆ ಎಲ್ಲವನ್ನೂ ಹ್ಯಾಂಡ್ ಓವರ್ ಮಾಡಲಾಗಿದೆ ಎಂಬ ವಾದವೂ ಕೇಳಿ ಬುರುತ್ತಿದೆ. ಇದೀಗ ನೆರೆಯ ಸಂದರ್ಭದಲ್ಲೂ ಇತ್ತ ಕಡೆ ಸಂಬಂಧಿಸಿದ ಯರೂ ಗಮನ ಹರಿಸದ ಪರಿಣಾಮ ಲೇಔಟ್‌ನಲ್ಲಿ ಮನೆ ಮಾಡಿರುವ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮುಂದೆ ಮಳೆಯ ಸಂದರ್ಭ ಅನಾಹುತ ಆಗುವ ಮುನ್ನ ಸಂಬಂಧಿಸಿದವರು ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರ ಆಗ್ರಹವಾಗಿದೆ.

ಲೇ ಔಟ್ ಹಸ್ತಾಂತರ ಆದರೂ ಅಲ್ಲಿ ಇನ್ನೂ ಕೂಡಾ ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದು ಕಾಮಗಾರಿಗಳ ವೇಸ್ಟೇಜ್ ಮಣ್ಣುಗಳನ್ನು ರಸ್ತೆಗೆ ಯದ್ವಾತದ್ವಾ ಹಾಕಿದ ಪರಿಣಾಮ ಅಲ್ಲಿ ಸಮಸ್ಯೆ ಉಂಟಾಗುತ್ತಿದೆ.
ರೂಪಾ ಶೆಟ್ಟಿ, ಪೌರಾಯುಕ್ತರು ನಗರಸಭೆ

ಲೇ ಔಟ್ ಹಸ್ತಾಂತರ ಆಗಿದೆ:
ಸನ್ನಿಧಿ ಲೇ ಔಟ್ ಪೂರ್ಣ ಪ್ರಮಾಣದಲ್ಲಿ ನಗರಸಭೆಗೆ ಹಸ್ತಾಂತರ ಆಗಿದೆ. ನಗರಸಭೆಯಿಂದ ದಾರಿ ದೀಪವೂ ಅಳವಡಿಕೆ ಆಗಿದೆ. ಆದರೆ ನೆರೆ ಬಂದಾಗ ಮಾತ್ರ ನಮಗೆ ಸಮಸ್ಯೆ ಉಂಟಾಗಿದೆ. ಹಾಗಾಗಿ ನಗರಸಭೆಯವರು ನಮಗೆ ಸಹಕಾರ ನೀಡಬೇಕಾಗಿದೆ.
ಮಂಜುನಾಥ ಶೆಣೈ
ಲೇ ಔಟ್‌ನಲ್ಲಿ ವಾಸ್ತವ್ಯ ಹೊಂದಿರುವವರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Sudarshan

    ನಗರಸಭೆ ಈ ಲೆ ಔಟ್ ವಿಚಾರದಲ್ಲಿ ಕಣ್ಷು ಮುಚ್ಚಾಲೆ ಆಟ ಆಡುವಂತಿದೆ. ರೈಲ್ವೇ ಇಲಾಖೆಯ ನಿರಾಪೇಕ್ಷಣ ಅನುಮತಿ ಪಡೆಯದೆ ಅವೈಜ್ಞಾನಿಕ ಲೇ ಔಟ್ ನಿರ್ಮಿಸಿರುವುದರಿಂದ ಲೇ ಔಟ್ ಸ್ಥಾಪಕ ಮತ್ತು ನಗರಸಭೆ ಇದಕ್ಕೆ ಸಮಾನ ಹೊಣೆಗಾರರು.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.