ಪುತ್ತೂರು: ಹಲವು ವರ್ಷಗಳಿಂದ ದೇವಳದ ಸೇವಾ ಕಾರ್ಯದಲ್ಲಿ ನಿರತರಾಗಿದ್ದು ವೈವಾಹಿಕ ಜೀವನದ 25 ವರ್ಷಗಳನ್ನು ಪೂರೈಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭದ್ರತಾ ಸಿಬಂದಿ ಜಗನ್ನಾಥ ದಂಪತಿ ಮತ್ತು ಸ್ವಚ್ಛತೆ ಕಾರ್ಯ ನಡೆಸುವ ಕುಶಾಲಪ್ಪ ಗೌಡ ದಂಪತಿಗೆ ದೇವಳದ ಅರ್ಚಕರು ಮತ್ತು ಸಿಬಂದಿಗಳು ಸೇರಿಕೊಂಡು ಸನ್ಮಾನ ಮಾಡಿದರು.
ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಅರ್ಚಕರಾದ ಜಯರಾಮ ಜೋಯಿಷ, ಪ್ರೀತಮ್ ಪುತ್ತೂರಾಯ, ಗೋವಿಂದ, ಕಚೇರಿ ಸಿಬಂದಿಗಳಾದ ರವೀಂದ್ರ, ಗಣೇಶ್ ಆಚಾರ್ಯ, ರೇಖಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭದ್ರತಾ ಸಿಬಂದಿ ಜಗನ್ನಾಥ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.