HomePage_Banner
HomePage_Banner
HomePage_Banner
HomePage_Banner

ಪುತ್ತೂರು/ಉಪ್ಪಿನಂಗಡಿ ನೆರೆ ಹಾವಳಿಯಲ್ಲಿ ತುತ್ತಾಗುವ ಪ್ರದೇಶಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ -ತಹಸೀಲ್ದಾರ್ ರಮೇಶ್ ಬಾಬು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಉಪ್ಪಿನಂಗಡಿಯಲ್ಲಿ ನೆರೆ ಹಾವಳಿಗೆ ಸಂಬಂಧಿಸಿ ನೆರೆಗೆ ತುತ್ತಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಕಾರ್ಯಪಡೆಗೆ ನೋಡೆಲ್ ಅಧಿಕಾರಿಗಳು ಮತ್ತು ಈಜುಗಾರರು, ಗೃಹರಕ್ಷಕ ದಳ, ಕಾಳಜಿ ಕೇಂದ್ರಗಳನ್ನು ಈಗಾಗಲೇ ಸಿದ್ಧಪಡಿಸಿಕೊಳ್ಳಲಾಗಿದೆ.

ಉಪ್ಪಿನಂಗಡಿ ಹೋಬಳಿಯ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕಾರ್ಯನಿರ್ವಾಹಣ ಪಡೆಗೆ ನೊಡೇಲ್ ಅಧಿಕಾರಿಯಾಗಿ ತಾ.ಪಂನ ಕಾರ್ಯನಿರ್ವಾಹಕ ಅಧಿಕಾರಿಯವರನ್ನು ನೇಮಿಸಲಾಗಿದೆ. ನೆರೆಯ ಸಂದರ್ಭ ತಕ್ಷಣ ರಕ್ಷಣಾ ಕಾರ್ಯಕ್ಕೆ ಸ್ಥಳೀಯ ಇಬ್ಬರು ಈಜುಗಾರರು, ಬೋಟ್ ನಿರ್ವಾಹಕರು, ಐವರು ಗ್ರಹರಕ್ಷಕದಳದವರು ಹಗಲು ರಾತ್ರಿ ಕರ್ತವ್ಯದಲ್ಲಿ ಇರುತ್ತಾರೆ. ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಹಾರ (ಕಾಳಜಿ) ಕೇಂದ್ರ ಸ್ಥಾಪಿಸಲು ಅಗತ್ಯ ಸಾಮಾಗ್ರಿಗಳನ್ನು ಸಿದ್ದಪಡಿಸಲಾಗಿದೆ. 24*70 ಕಂಟ್ರೋಲ್ ರೂಮ್ ಪುತ್ತೂರು ತಾಲೂಕು ಕಚೇರಿ ಮತ್ತು ಉಪ್ಪಿನಂಗಡಿ ನಾಡಕಛೇರಿಯಲ್ಲಿ ತೆರೆಯಲಾಗಿದೆ. ಅಲ್ಲಿ ಕರ್ತವ್ಯ ನಿರ್ವಹಿಸಲು ಕಂದಾಯ ಇಲಾಖಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವಾಗ ಮತ್ತು ನದಿಯ ಮಟ್ಟ ಅಪಾಯದ ಮಟ್ಟ ತಲುಪಿದಾಗ ಸಾರ್ವಜನಿಕರಿಗೆ ಮುನ್ಸೂಚನೆ ನೀಡಲು ಸೈರನ್ ವ್ಯವಸ್ಥೆ ಇದೆ. ಸಂಬಂಧಪಟ್ಟ ಸಾರ್ವಜನಿಕರು ಪ್ರಕೃತಿಕ ವಿಕೋಪ ಸಮಯದಲ್ಲಿ ಯಾವುದೇ ಅನಾಹುತ ಸಂಭವಿಸಿದಲ್ಲಿ ಸಂಪರ್ಕಿಸಲು ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ ಎಂದು ತಹಸೀಲ್ದಾರ್ ರಮೇಶ್ ಬಾಬು ಟಿ ಅವರು ತಿಳಿಸಿದ್ದಾರೆ.

ಮುಖ್ಯ ದೂರವಾಣಿ ಸಂಖ್ಯೆಗಳು :
ರಮೇಶ್ ಬಾಬು ಟಿ ತಹಶೀಲ್ದಾರ್ ಪುತ್ತೂರು ಮೊ: 9480168864
ನವೀನ್ ಭಂಡಾರಿ , ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ ಮೊ: 9901348445
ರೂಪಾ ಶೆಟ್ಟಿ ಪೌರಾಯುಕ್ತರು ನಗರಸಭೆ ಪುತ್ತೂರು ಮೊ: 988೬೧೩೩೦೯
ರಾಮಣ್ಣ ನಾಯ್ಕ ಉಪತಹಶೀಲ್ದಾರ್ ಮೊ: 9481141060 
ಸದಾಶಿವ ನಾಯ್ಕ ಉಪತಹಶೀಲ್ದಾರ್ ಮೊ: 9480279255
ರವಿ ಕುಮಾರ್ ಕಂದಾಯ ನಿರೀಕ್ಷಕರು ಮೊ: 81057949
ವಿಜಯ ವಿಕ್ರಮ ಕಂದಾಯ ನಿರೀಕ್ಷಕರು ಉಪ್ಪಿನಂಗಡಿ ಮೊ: 9743395144
ಪುತ್ತೂರು ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08251-230349
ಉಪ್ಪಿನಂಗಡಿ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08251-251994

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.