ಪುತ್ತೂರು: ಕೊರೋನಾ ಸೋಂಕಿನಿಂದ ಮೃತಪಟ್ಟ ಬಾಣಂತಿಯ ಅಂತ್ಯಸಂಸ್ಕಾರ ಜು.8ರಂದು ಸಂಜೆ ಕೂರ್ನಡ್ಕ ಫೀರ್ ಮೊಹಲ್ಲಾ ಜುಮ್ಮಾ ಮಸೀದಿಯ ಆಡಳಿತಕ್ಕೊಳಪಟ್ಟ ಬೆದ್ರಾಳದಲ್ಲಿರುವ ದಫನ ಭೂಮಿಯಲ್ಲಿ ನಡೆಯಿತು.
ಕೋವಿಡ್ -19 ಗೆ ಸಂಬಂಧಿಸಿ ಸರಕಾರ ಸೂಚನೆಯಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ, ವೈದ್ಯಾಧಿಕಾರಿಗಳು, ಇಲಾಖಾ ಅಧಿಕಾರಿಗಳು, ಪುತ್ತೂರು ನಗರ ಠಾಣಾ ಇನ್ ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಉಪಸ್ಥಿತಿಯಲ್ಲಿ ದಫನ ಕಾರ್ಯ ನಡೆಯಿತು. ಕೂರ್ನಡ್ಕ ಜಮಾಅತ್ ಅಧ್ಯಕ್ಷ ಕಾಸಿಂ ಹಾಜಿ ನೇತೃತ್ವ ವಹಿಸಿದ್ದರು. ಮೃತ ಮಹಿಳೆಯ ಗಂಡ ಶಾಮಿಲ್ ಮತ್ತು ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿದ್ದಿಕ್ ಎ ಅವರು ಪಿಪಿಇಕಿಟ್ ಧರಿಸಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು. ಪಿಎಫ್ಐ ಸಂಘಟನೆಯ ಅಶ್ರಫ್ಬಾವು, ಲತೀಫ್ ಸಾಲ್ಮರ, ಬಾತೀಷಾ ಬಡಕೋಡಿ, ಉಸ್ಮಾನ್, ಶಮೀರ್ ಕೂರ್ನಡ್ಕ, ಹಸೈನಾರ್ ಹಾಜಿ, ಸಲೀಂ ಹಾಜಿ, ಇಫಾಝ್ ಬನ್ನೂರು ರವರು ಪಿಪಿಇ ಕಿಟ್ ಧರಿಸಿ ದಫನ್ ಕಾರ್ಯ ನಡೆಸಿದರು.