ಉಪ್ಪಿನಂಗಡಿ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ “ರೈತ ಉತ್ಪನ್ನಗಳ ಖರೀದಿ ಕೇಂದ್ರ” ಅಲಿಮಾರ್ ರೈ ಎಂಟರ್ಪ್ರೈಸಸ್ ಸಂಸ್ಥೆ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಟೇಲ್ ಫಿಶ್ ಲ್ಯಾಂಡ್ ಬಳಿ ಜುಲೈ ೮ರಂದು ಉದ್ಘಾಟನೆಗೊಂಡಿತು.
ನೂತನ ಸಂಸ್ಥೆಯನ್ನು ಪ್ರಗತಿಪರ ಕೃಷಿಕ ರಾಮಣ್ಣ ರೈ ಅಲಿಮಾರ್ ಉದ್ಘಾಟಿಸಿ, ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್, ಪ್ರಧಾನ ಕಾರ್ಯದರ್ಶಿ ವಿನೋದ್ ಪಾದೆಕಲ್ಲು, ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪುಣ್ಚತ್ತಡ್ಕ, ಹರ್ಷ ಕುಮಾರ್ ಹೆಗ್ಡೆ, ಪುತ್ತೂರು ತಾಲ್ಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ರತ್ನಕುಮಾರ್ ಈಶ್ವರಮಂಗಲ, ಜಯಪ್ರಕಾಶ್ ರೈ, ಬೆಳ್ತಂಗಡಿ ತಾಲ್ಲೂಕು ಅಧ್ಯಕ್ಷ ಸೀತಾರಾಮ ಮಡಿವಾಳ, ಪುತ್ತೂರು ಎಪಿಎಂಸಿ. ಸದಸ್ಯ ಶುಕೂರ್ ಹಾಜಿ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಉಪ್ಪಿನಂಗಡಿ ಸಿ.ಎ. ಬೇಂಕ್ ನಿರ್ದೇಶಕ ಅಜೀಜ್ ಬಸ್ತಿಕ್ಕಾರ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಕೆ. ಸುರೇಶ್ ಕುಮಾರ್, ಜಯಕರ್ನಾಟಕ ಸಂಘಟನೆಯ ವಿಕ್ರಂ ಕೋಡಿಂಬಾಡಿ, ಗಣೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿ ಮಾತನಾಡಿ ಸಂಸ್ಥೆಯಲ್ಲಿ ಅಡಿಕೆ, ತೆಂಗಿನಕಾಯಿ, ಬಾಳೆಗೊನೆ, ಗೇರುಬೀಜ, ಕಾಳುಮೆಣಸು ಇನ್ನಿತರ ಕೃಷಿ ಮತ್ತು ಕಾಡುತ್ಪತ್ತಿಗಳನ್ನು ಖರೀದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಸಂಸ್ಥೆಯ ರಾಜೇಶ್ ರೈ ಅಲಿಮಾರ್ ವಂದಿಸಿದರು.