HomePage_Banner
HomePage_Banner
HomePage_Banner
HomePage_Banner

ಜು.10: ಉಪ್ಪಿನಂಗಡಿ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್‌ರಿಂದ ಪದಪ್ರಧಾನ

ಉಪ್ಪಿನಂಗಡಿ: ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 10ರಂದು ಉಪ್ಪಿನಂಗಡಿ ರೋಟರಿ ಸಮುದಾಯ ಭವನದಲ್ಲಿ
ಜರಗಲಿದೆ ಎಂದು ಉಪ್ಪಿನಂಗಡಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರವೀಂದ್ರ ದರ್ಭೆ ತಿಳಿಸಿದರು.

ಅವರು ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿ, ರೋಟರಿ ವಲಯ-4ರ ಸಹಾಯಕ ಗವರ್ನರ್ ಹಾಗೂ ವಿಧಾನ ಪರಿಷತ್ ಸದಸ್ಯ  ಪ್ರತಾಪಸಿಂಹ ನಾಯಕ್ ಪದಪ್ರಧಾನ ಮಾಡಲಿದ್ದಾರೆ. ರೋಟರಿ ವಲಯ ಸೇನಾನಿ ಜೆರೋಮಿಯಸ್ ಪಾಯಸ್, ಮಾತೃ ಘಟಕವಾದ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರೋ. ಝೇವಿಯರ್ ಡಿ’ಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸುಸಜ್ಜಿತ ರೋಟರಿ ಭವನ:
ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಜೊತೆಗೆ ದುಡಿಯುತ್ತಿರುವ ಸಹಸಂಸ್ಥೆ ರೋಟರಿ ಟ್ರಸ್ಟ್ ಉಪ್ಪಿನಂಗಡಿ ರೋಟರಿ ಕ್ಲಬ್‌ನ ಎಲ್ಲಾ ಕಾರ್‍ಯಕ್ರಮಗಳಿಗೆ ಸಹಕಾರ ನೀಡುತ್ತಾ
ಬಂದಿದ್ದು, ಆರೋಗ್ಯಪೂರ್ಣ ಬೆಳವಣಿಗೆಗೆ ಸದಾ ಸಹಕರಿಸುತ್ತಿದೆ. ಈ ಸಂಸ್ಥೆಯ ಸುಪರ್ದಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುವ ೨೦೦ ಮಂದಿಗೆ ಆಸನದ ವ್ಯವಸ್ಥೆ ಇರುವ ಸುಸಜ್ಜಿತ ರೋಟರಿ ಭವನವನ್ನು ನಿರ್ಮಿಸಿ ಈಗಾಗಲೇ ಲೋಕಾರ್ಪಣೆಗೊಂಡಿದ್ದು, ಈ ಕಟ್ಟಡ ಸಾರ್ವಜನಿಕರ ಬಳಕೆಗೆ ಒಳಪಟ್ಟಿರುವುದು ಅಭಿನಂದನೆಗೆ ಪಾತ್ರವಾಗಿದೆ ಎಂದು ಹೇಳಿದರು.

ಸೇವಾ ಯೋಜನೆಗಳು:
ಜಗತ್ತಿನಾದ್ಯಂತ ಕೋವಿಡ್-೧೯ ಮಾರಕ ರೋಗ ಮಾನವ ಬದುಕನ್ನು ತಲ್ಲಣಗೊಳಿಸಿದ್ದು, ಈ ನಿಟ್ಟಿನಲ್ಲಿ ರೋಟರಿ ಸದಸ್ಯರ ಸಹಕಾರದೊಂದಿಗೆ ಈ ಕಾಯಿಲೆಗೆ ಸಂಬಂಧಪಟ್ಟಂತೆ ಮುಂಜಾಗ್ರತಾ ಕ್ರಮ ಅನುಸರಿಸುವ ಜಾಗೃತಿ ಮೂಡಿಸುವ ಕಾರ್‍ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುವುದು. ಕಾಯಿಲೆಯ ಬಗ್ಗೆ ಅರಿವು ಮೂಡಿಸುವುದು, ಸರಕಾರಿ ಸಂಸ್ಥೆಗಳಿಗೆ ಸಾನಿಟೈಸರ್ ಹಾಗೂ ಅದರ ಸ್ಟ್ಯಾಂಡ್ ಒದಗಿಸುವುದು, ಸರ್ಕಾರಿ ಶಾಲಾ ಮಕ್ಕಳಿಗೆ ಮಾಸ್ಕ್ ಒದಗಿಸುವುದು (ಶಾಲೆ ಆರಂಭವಾದ ಬಳಿಕ), ಗಿಡ ನೆಡುವ ಕಾರ್‍ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್ ನಿರ್ಗಮನ ಅಧ್ಯಕ್ಷ ಚಂದಪ್ಪ ಮೂಲ್ಯ, ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ| ರಾಜಾರಾಮ್, ನಿಕಟಪೂರ್ವ ವಲಯ
ಸೇನಾನಿ ವಿಜಯಕುಮಾರ್ ಕಲ್ಲಳಿಕೆ, ನಿಯೋಜಿತ ಕಾರ್‍ಯದರ್ಶಿ ಜಗದೀಶ್ ನಾಯಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.