ವಿಟ್ಲ: ವಾಹನ ಮಾರಾಟ ಮತ್ತು ಸೇವೆಯಲ್ಲಿ ಅನುಭವಹೊಂದಿ ಕರಾವಳಿ ಅವಳಿ ಜಿಲ್ಲೆಗಳಲ್ಲಿ ಜನಮನ್ನಣೆಗಳಿಸಿರುವ ಹಲವಾರು ವರುಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಕಾಂಚನಾ ಮೋಟರ್ಸ್ ನ ಅಂಗಸಂಸ್ಥೆ ಕಾಂಚನಾ ಹೋಂಡಾದ ಕಂಕನಾಡಿ ಬೈಪಾಸ್ ಶೋರೂಂ ನಲ್ಲಿ ಹೋಂಡಾ ‘ಗ್ರಾಝಿಯಾ – 125’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಕರ್ನಾಟಕದಲ್ಲಿ ಇದೇ ಮೊದಲಬಾರಿಗೆ ಕಾಂಚನಾ ಹೋಂಡಾ ಶೋರೂಂನಲ್ಲಿ ಗ್ರಾಝಿಯಾ – 125 ವನ್ನು ಮಾರುಕಟ್ಟೆಗೆ ಬಿಡುಗಡೆ ಗೊಳಿಸಿರುವುದು ವಿಶೇಷ. ವಿನೂತನ ‘ ಬಿಎಸ್6’ ತಂತ್ರಜ್ಞಾನದೊಂದಿಗೆ ಈ ದ್ವಿಚಕ್ರವಾಹನವು ಗ್ರಾಹಕರ ಪ್ರಶಂಸೆಗೆ ಪಾತ್ರವಾಗಿದೆ. ಹೋಂಡಾದ ವಿನೂತನ ದ್ವಿಚಕ್ರ ವಾಹನದ ಕೀ ಯನ್ನು ಮೊದಲ ಗ್ರಾಹಕರಾಗಿರುವ ರಕ್ಷಿತ್ ಬಿರ್ವ ಪೆರ್ಮುದೆರವರಿಗೆ ಹಸ್ತಾಂತರಿಸಲಾಯಿತು. ಗ್ರಾಝಿಯಾ 125 ನ ಎಕ್ಸ್ ಶೋರೂಂ ಬೆಲೆಯು ೭೬೧೭೩ ರೂ( ಸ್ಟ್ಯಾಂಡರ್ಡ್) ,೮೩೨೩೯ ರೂ(ಡಿಲೆಕ್ಸ್) ಆಗಿದೆ. ವಿವಿಧ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದ್ದು, ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವು ಲಭ್ಯವಿದೆ. ಈ ವಾಹನದ ಬುಕ್ಕಿಂಗ್ ನಮ್ಮ ಎಲ್ಲಾ ಶೋರೂಂ ನಲ್ಲಿಯೂ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೊಸ ವಾಹನದ ವಿಶೇಷತೆಗಳು:
ನೋಡುಗರನ್ನು ಬೆರಗುಗೊಳಿಸುವ ಸ್ಟೈಲ್ ಹೋಂಡಾ ಗ್ರಾಝಿಯ ೧೨೫ ನ ವಿಶೇಷವಾಗಿದೆ. ಮುಖ್ಯವಾಗಿ ಸೈಲೆನ್ಸ್ ಸ್ಮಾರ್ಟ್, ಹೊಸ ಸ್ಪ್ಲಿಟ್ ಎಲ್ ಇ ಡಿ ಪೊಜಿಶನ್ ಲ್ಯಾಂಪ್ ಮತ್ತು ಹೆಡ್ ಲ್ಯಾಂಪ್, ಸ್ಟೈಲಿಶ್ ಮಫ್ಲರ್ ಪ್ರೊಟೆಕ್ಟರ್, ಫುಲ್ ಡಿಜಿಟಲ್ ಮೀಟರ್ ( ರಿಯಲ್ ಟೈಮ್ ಮೈಲೇಜ್, ಎವರೇಜ್ ಮೈಲೇಜ್, ಡಿಸ್ಟೆನ್ಸ್ – ಟು- ಎಂಟಿ, ತ್ರೀ ಸ್ಟೆಪ್ ಎಕೋ ಇಂಡಿಕೇಟರ್), ಸೈಟ್ ಸ್ಟ್ಯಾಂಡ್ ಇಂಜಿನ್ ಕಟ್ ಅಪ್, ಇಡಲಿಂಗ್ ಸ್ಟಾಪ್ ಸಿಸ್ಟಂ, ಇಂಜಿನ್ ಸ್ಟಾರ್ಟ್, ಸ್ಟಾಪ್ ಸ್ವಿಚ್ ಸೌಲಭ್ಯ. ಇಂಟಿಗ್ರೆಟೆಡ್ ಪಾಸ್ ಸ್ವಿಚ್, ಎಕ್ಸಟರ್ನಲ್ ಫ್ಯೂಯೆಲ್ ಲೀಡ್, ರೀಡಿಸೈನ್ಡ್ ಗ್ಲೋ ಬಾಕ್ಸ್, ಮಲ್ಟಿ ಫಂಕ್ಷನ್ ಯುನಿಟ್, ಟೆಲಿ ಸ್ಕೋಪಿಕ್ ಸಸ್ಪೆಂನ್ಶನ್ ಗಳನ್ನು ಒಳಗೊಂಡ ಬೆರಗುಗೊಳಿಸುವ ಸಂತೃಪ್ತಿಯನ್ನು ನೀಡಲಾಗಿದೆ.
ನಿರೀಕ್ಷೆಗೂ ಮೀರಿದ ಮಾರಾಟ:
ಕೊರೋನಾ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜನ ದ್ವಿಚಕ್ರ ವಾಹನ ಕೊಂಡು ಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಜೂನ್ ತಿಂಗಳಿನಲ್ಲಿ ನಿರೀಕ್ಷೆಗೂ ಮೀರಿದ ದ್ವಿಚಕ್ರ ವಾಹನಮಾರಾಟ ವಾಗಿದ್ದು, ಜುಲೈ ತಿಂಗಳಲ್ಲಿಯೂ ಬಹಳಷ್ಟು ಬೇಡಿಕೆಗಳು ಬರುತ್ತಿದೆ. ಈಗಾಗಲೇ ಹೋಂಡಾ ಸಂಸ್ಥೆಯಿಂದ ಹೊಸ ಬಿಎಸ್-೬ ತಂತ್ರಜ್ಞಾನದಿಂದ ಬಿಡುಗಡೆಯಾದ ಹೋಂಡಾ ಆ್ಯಕ್ಟೀವಾ -125, ಆ್ಯಕ್ಟೀವಾ 6 ಜಿ, ಡಿಯೋ, ಶೈನ್, ಎಸ್.ಪಿ – 125, ಯುನಿಕಾರ್ನ್, ಸಿಡಿ 100 ಸಾಯ್ಲೆಂಟ್ ಸ್ಟಾರ್ಟ್ ನಿಂದ ಪ್ರಶಂಸೆಗೆ ಪಾತ್ರವಾಗಿದೆ. 10% ದಿಂದ 16% ದಷ್ಟು ಅಧಿಕ ಮೈಲೇಜ್ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ.
ಜು.೧೫ರ ವರೆಗೆ ಮುಂದುವರೆಯಲಿದೆ ಮೆಘಾ ಮಾನ್ಸೂನ್ ಆಫರ್: ಕಾಂಚನ ಹೋಂಡಾದ ಎಲ್ಲಾ ಶೋರೋಂ ಗಳಲ್ಲಿ ಮೆಗಾ ಮಾನ್ಸೂನ್ ಆಫರ್ ಆರಂಭಗೊಂಡಿದ್ದು, ಗ್ರಾಹಕರ ಅಪೇಕ್ಷೆ ಮೇರೆಗೆ ಅದನ್ನು ಜು.೧೫ರ ವರೆಗೆ ವಿಸ್ತರಣೆ ಮಾಡಲಾಗಿದೆ. ಪ್ರತಿ ವಾಹನ ಖರೀದಿಯ ಮೇಲೆ ವಿಶೇಷ ರೀಯಾಯಿತಿಯೊಂದಿಗೆ ಹೋಂಡ ರೈನ್ಕೋಟ್, ಹೋಂಡಾ ಹೆಲ್ಮೆಟ್, ಫುಲ್ ಟ್ಯಾಂಕ್ ಪೆಟ್ರೋಲ್, ೧೫ ಲಕ್ಷದ ರೈಡರ್ ಇನ್ಶೂರೆನ್ಸ್ ನ್ನು ಸಂಸ್ಥೆ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9945564997, 8722390123ಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಉತ್ತಮ ಸೇವೆ ನೀಡುವ ಸಂಸ್ಥೆಯಾಗಿದೆ
ಕಾಂಚನ ಹೋಂಡಾದಲ್ಲಿ ಒಂದು ವಾಹನವನ್ನು ಖರೀದಿಸಿದರೆ ಆ ಬಳಿಕವೂ ಅವರು ನಮ್ಮೊಂದಿಗೆ ಇದ್ದು ಉತ್ತಮ ಸೇವೆ ನೀಡುವ ಒಂದು ಸಂಸ್ಥೆಯಾಗಿದೆ. ನಾನು ಇದೀಗ ಕಾಂಚನಾ ಹೋಂಡಾದ ಕಂಕನಾಡಿ ಬೈಪಾಸ್ ಶೋರೂಂ ನಿಂದ ಖರೀದಿಸಿರುವ ಗ್ರಾಝಿಯಾ – 125 ಸಂಸ್ಥೆಯಿಂದ ಖರೀದಿಸಿದ ಮೂರನೇ ವಾಹನವಾಗಿದೆ. 2013 ರಲ್ಲಿ ಆ್ಯಕ್ಟೀವಾ ಹೋಂಡ ಖರೀದಿಸಿದ್ದೆ. ಆ ಬಳಿಕ ಡಿಯೋ ಇದೀಗ ಗ್ರಾಝಿಯಾ 125 ವನ್ನು ಕೊಂಡುಕೊಂಡಿದ್ದೇನೆ. ಕಾಂಚನಾ ಹೋಂಡಾದಲ್ಲಿ ಬೇರೆ ಕಡೆಯಿಂದ ಉತ್ತಮ ಆಫರ್ ಗಳು ಲಭಿಸುತ್ತದೆ ಮಾತ್ರವಲ್ಲದೆ ಕಡಿಮೆ ಬಡ್ಡಿದರದಲ್ಲಿ ಸುಲಭ ಕಂತಿನಲ್ಲಿ ಸಾಲ ಸೌಲಭ್ಯಗಳು ಲಭಿಸುತ್ತದೆ – ರಕ್ಷಿತ್ ಬಿರ್ವ ಪೆರ್ಮುದೆ ಗ್ರಾಹಕರು