HomePage_Banner
HomePage_Banner
HomePage_Banner
HomePage_Banner

ರೋಟರಿ ಕ್ಲಬ್ ‘ಪುತ್ತೂರು ಸೆಂಟ್ರಲ್’ ಪದಪ್ರದಾನ | ಅವಕಾಶಗಳನ್ನು ಸದ್ಭಳಕೆ ಮಾಡಿದಾಗ ಸಾಧನೆಗೆ ಶಕ್ತಿ-ರಿತೇಶ್ ಬಾಳಿಗ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಂತರ್ರಾಷ್ಟ್ರೀಯ ಸೇವಾಸಂಸ್ಥೆಯಾಗಿರುವ ರೋಟರಿ ಸಂಸ್ಥೆಯು ಸಮಾಜಮುಖಿ ಕೆಲಸಗಳನ್ನು ಮಾಡಲು ಆಹ್ವಾನ ಒದಗಿಸುತ್ತದೆ. ನಮ್ಮ ಜೀವನದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಲು ಅವಕಾಶಗಳು ಒದಗಿ ಬಂದ ಸಂದರ್ಭದಲ್ಲಿ ಅವನ್ನು ಧನಾತ್ಮಕ ರೀತಿಯಲ್ಲಿ ಸದ್ಭಳಕೆ ಮಾಡಿದಾಗ ನಮ್ಮ ಸಾಧನೆಗೆ ಶಕ್ತಿ ಬರುವುದು ಎಂದು ಇವೆಂಟ್ಸ್‌ನ ಜಿಲ್ಲಾ ಕಾರ್ಯದರ್ಶಿ ಮೇಜರ್ ಡೋನರ್ ರಿತೇಶ್ ಬಾಳಿಗರವರು ಹೇಳಿದರು.


ಅವರು ಜು.7 ರಂದು ಬಪ್ಪಳಿಗೆ-ಪುತ್ತೂರು ಇಲ್ಲಿನ ಆಶ್ಮಿ ಕಂಫರ್ಟ್‌ನಲ್ಲಿ ಜರಗಿದ ರೋಟರಿ ಜಿಲ್ಲೆ ೩೧೮೧, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ೨೦೨೦-೨೧ನೇ ಸಾಲಿನ ಪದಪ್ರದಾನ ಸರಳ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸುತ್ತಾ ಮಾತನಾಡಿದರು. ಮನಸ್ಸನ್ನು ಸಮಾಧಾನವಾಗಿ ಕೊಡೊಯ್ದಲ್ಲಿ ಜೀವನದಲ್ಲಿ ಏನನ್ನೂ ಸಾಧಿಸಬಹುದು. ಜೀವನವನ್ನು ಶೂನ್ಯದೆಡೆಗೆ ಕೊಂಡೊಯ್ಯದೆ ಜೀವನದಲ್ಲಿನ ಋಣಾತ್ಮಕ ಅಂಶಗಳನ್ನು ಧನಾತ್ಮಕ ಅಂಶಗಳತ್ತ ಮಾರ್ಪಾಡು ಮಾಡುವ ಮೂಲಕ ಪ್ರಪಂಚವನ್ನೇ ಗೆಲ್ಲುವ ಹುಮ್ಮಸ್ಸು ಬರಬಹುದು. ಕೇವಲ ಒಂದೇ ವರ್ಷದಲ್ಲಿ ರೋಟರಿ ಸೆಂಟ್ರಲ್ ತನ್ನ ಪ್ರಾಯೋಜಕತ್ವದಲ್ಲಿ ಮತ್ತೊಂದು ಕ್ಲಬ್‌ನ್ನು ಸಮಾಜಕ್ಕೆ ಪರಿಚಯಿಸಿರುವುದು ಧನಾತ್ಮಕ ಅಂಶಗಳಿಗೆ ಸಾಕ್ಷಿಯಾಗಿದೆ ಎಂದರು.
ಮುಖ್ಯ ಅತಿಥಿ, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದ ಡಿ.ರವರು ಕ್ಲಬ್ ಬುಲೆಟಿನ್ ‘ರೋಟರಿ ಸೆಂಟ್ರಲ್ ನ್ಯೂಸ್’ನ್ನು ಬಿಡುಗಡೆ ಮಾಡಿ ಮಾತನಾಡಿ, ಜಿಲ್ಲಾ ಗವರ್ನರ್‌ರವರ ಜಿಲ್ಲಾ ಪ್ರಾಜೆಕ್ಟ್ ಎನಿಸಿದ ವನಮಹೋತ್ಸವ, ಉತ್ತಮ ಆರೋಗ್ಯದ ನಿರ್ಮಾಣಕ್ಕೆ ಜೀವನಶೈಲಿಯಲ್ಲಿ ಬದಲಾವಣೆ, ಆಕ್ಸಿಡೆಂಟ್ ಅಥವಾ ಇತರ ಸಂದರ್ಭದಲ್ಲಿ ಆಗುವಂತಹ ಘಟನೆಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ, ಶಾಲೆಗಳಿಗೆ ನೀರು, ಶೌಚಾಲಯದ ಅಗತ್ಯ ಪೂರೈಕೆ ಬಗ್ಗೆ ರೊಟೇರಿಯನ್ಸ್‌ಗಳು ಪ್ರೋತ್ಸಾಹಿಸಬೇಕಾಗಿದೆ. ಪ್ರಸ್ತುತ ಸೆಂಟ್ರಲ್ ಕ್ಲಬ್‌ನ ನಿರ್ಗಮಿತ ಅಧ್ಯಕ್ಷರಾಗಿರುವ ಸಂತೋಷ್ ಶೆಟ್ಟಿಯವರು ರೋಟರಿಯಲ್ಲಿ ಅಪಾರ ಅನುಭವಸ್ಥವುಳ್ಳವರು. ಅವರ ಸಲಹೆಯೊಂದಿಗೆ ರೋಟರಿಯನ್ನು ಮುನ್ನೆಡೆಸಿ ರೋಟರಿ ಎಂಬುದು ಎಲ್ಲರಿಗೂ ಮಾದರಿಯಾಗಿ ನೆಲೆ ನಿಲ್ಲಲಿ ಎಂದು ಹೇಳಿ ಶುಭಹಾರೈಸಿದರು.
ವಲಯ ಸೇನಾನಿ ಮನೋಹರ್ ಕುಮಾರ್ ಮಾತನಾಡಿ, ರೊಟೇರಿಯನ್ಸ್ ಬಂಧುಗಳಿಗೆ ಅಶಕ್ತರಿಗೆ ಮಿಡಿಯುವ ಅಂತಕರಣವಿದೆ ಎಂಬುದಕ್ಕೆ ರೊಟೇರಿಯನ್ಸ್‌ಗಳು ಸಮಾಜದಲ್ಲಿ ಎಲ್ಲೆಲ್ಲಿ ಯಾವುದರ ಬಗ್ಗೆ ಕೊರತೆ ಕಾಣಿಸುತ್ತದೆಯೋ ಅವುಗಳನ್ನು ಪೂರೈಸುವ ಬಗ್ಗೆ ನೀಡುವ ಕಾರ್ಯಗಳೇ ಸಾಕ್ಷಿಯಾಗಿದೆ. ರೋಟರಿ ಸೆಂಟ್ರಲ್ ಕಳೆದ ಒಂದು ವರ್ಷ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿರುವುದರ ಬಗ್ಗೆ ಪತ್ರಿಕೆಯಲ್ಲಿ ಓದಿ ತಿಳಿಯಲ್ಪಟ್ಟಿzವೆ. ಕೋವಿಡ್ ಸಂಕಷ್ಟದಲ್ಲಿ ನಾವಿದ್ದರೂ ಪರಿಸ್ಥಿತಿ ಬಗ್ಗೆ ಅವಲೋಕನೆ ಮಾಡುತ್ತಾ ಸಮಾಜಕ್ಕೆ ಸೇವೆ ನೀಡುವ ಕಾಯಕ ನಮ್ಮದಾಗಲಿ ಎಂದರು.
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷೆ ಸೆನೋರಿಟ ಆನಂದ್‌ರವರು ಮಾತನಾಡಿ, ರೋಟರಿ ಸ್ವರ್ಣ ಪ್ರಾಯೋಜಿತ ಸಂಸ್ಥೆಯಾಗಿರುವ ರೋಟರಿ ಸೆಂಟ್ರಲ್ ತನ್ನ ಚಾರ್ಟರ್ ಪ್ರೆಸೆಂಟೇಶನ್ ಪಡೆದ ಒಂದೇ ವರ್ಷದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿ ಜನರ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಕಾರ್ಯ ಮಾಡಿರುವ ರೋಟರಿ ಸೆಂಟ್ರಲ್‌ನ ಸದಸ್ಯರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಬೇಕಾಗಿದೆ ಎಂದರು.
ನಿರ್ಗಮಿತ ಅಧ್ಯಕ್ಷ ಸಂತೋಷ್ ಶೆಟ್ಟಿ ಸಾಜರವರು ಮಾತನಾಡಿ, ೨೦೧೮-೧೯ರ ಅಂತರ್ರಾಷ್ಟ್ರೀಯ ರೋಟರಿ ಅಧ್ಯಕ್ಷರ ಧ್ಯೇಯವಾಕ್ಯ ‘ಸ್ಪೂರ್ತಿಯಾಗು’ ಎಂಬ ಮಾತಿನಿಂದ ಸ್ಫೂರ್ತಿ ಪಡೆದು ೨೦೧೯ ಜನವರಿಯಲ್ಲಿ ಪ್ರಾರಂಭಿಸಿ ಫೆಬ್ರವರಿಯಲ್ಲಿ ಚಾರ್ಟರ್ ದೊರೆತು ಮಾರ್ಚ್‌ರಂದು ರೋಟರಿ ಸೆಂಟ್ರಲ್‌ಗೆ ಸನದು ಪ್ರದಾನ ದೊರೆಯಿತು. ಅಧ್ಯಕ್ಷನಾಗಿ ಯಾವುದೇ ಕೆಲಸ, ಜವಾಬ್ದಾರಿಯನ್ನು ಇಲ್ಲ ಎನ್ನದೆ ಒಪ್ಪಿಕೊಂಡು ಮಾಡಿzನೆ. ಅವಕಾಶಗಳು ತಾನಾಗಿಯೇ ಸೃಷ್ಟಿಯಾಗುತ್ತದೆ ಆದರೆ ಅದನ್ನು ಸರಿಯಾಗಿ ನಿರ್ವಹಿಸುವ ಗುರುತರ ಜವಾಬ್ದಾರಿ ನಮ್ಮದಾಗಬೇಕಿದೆ. ಈ ಮೂಲಕ ೧೪ ಕ್ಲಬ್‌ಗಳ ಪೈಪೋಟಿಯ ನಡುವೆಯೂ ರೋಟರಿ ಸೆಂಟ್ರಲ್ ಕ್ಲಬ್‌ಗೆ ‘ಬೆಸ್ಟ್ ನ್ಯೂ ಕ್ಲಬ್ ಆಫ್ ದಿ ಡಿಸ್ಟ್ರಿಕ್ಟ್’ ಪ್ರಶಸ್ತಿ ದೊರಕಿರುವುದು ನಮ್ಮ ಕ್ಲಬ್‌ನ ಸದಸ್ಯರ ಸಾಧನೆಯೇ ಸಾಕ್ಷಿಯಾಗಿದೆ ಎಂದರು.
ಪದಾಧಿಕಾರಿಗಳ ಪದಪ್ರದಾನ: ಅಧ್ಯಕ್ಷರಾಗಿ ವೆಂಕಟ್ರಾಜ್ ಪಿ.ಜಿ, ಕಾರ್ಯದರ್ಶಿಯಾಗಿ ಅಶೋಕ್ ನಾಯ್ಕ, ಕೋಶಾಧಿಕಾರಿಯಾಗಿ ಪಿ.ಎಂ ಅಶ್ರಫ್ ಮುಕ್ವೆ, ನಿಕಟಪೂರ್ವ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಸಾಜ, ನಿಯೋಜಿತ ಅಧ್ಯಕ್ಷ ನವೀನ್‌ಚಂದ್ರ ನಾಕ್, ಉಪಾಧ್ಯಕ್ಷ ರಮೇಶ್ ರೈ ಬೋಳೋಡಿ, ಜೊತೆ ಕಾರ್ಯದರ್ಶಿ ವಿಷ್ಣು ಭಟ್, ಸಾರ್ಜಂಟ್ ಎಟ್ ಆರ್ಮ್ಸ್ ವಸಂತ್ ಬಿ, ಕ್ಲಬ್ ಸರ್ವಿಸ್ ನಿರ್ದೇಶಕ ಸನತ್ ರೈ, ವೊಕೇಶನಲ್ ಸರ್ವಿಸ್ ನಿರ್ದೇಶಕ ಶಿವರಾಮ ಎಂ.ಎಸ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಮೊಹಮ್ಮದ್ ರಫೀಕ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಹರ್ಷಿತ್ ರಾಂ, ಯೂತ್ ಸರ್ವಿಸ್ ನಿರ್ದೇಶಕ ಶೈಲಜಾ ವಿ, ಪಲ್ಸ್ ಪೋಲಿಯೋ ಚೇರ್‌ಮ್ಯಾನ್ ಡಾ.ರವಿನಾರಾಯಣ, ಟಿಆರ್‌ಎಫ್ ಚೇರ್‌ಮ್ಯಾನ್ ಶ್ರೀಧರ್ ಕೆ, ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಚೇರ್‌ಮ್ಯಾನ್ ರಂಜಿತ್ ಬಂಗೇರ, ಟೀಚ್ ಚೇರ್‌ಮ್ಯಾನ್ ಚಂದ್ರಹಾಸ ರೈ, ವಿನ್ಸ್ ಚೇರ್‌ಮ್ಯಾನ್ ಅಕ್ಷತಾ ರೈ, ವೆಬ್ ಚೇರ್‌ಮ್ಯಾನ್ ಇಂದೀವರ್ ಭಟ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್‌ಮ್ಯಾನ್ ಜಯಪ್ರಕಾಶ್ ಎ.ಎಲ್, ಪ್ರಥಮ ಚಿಕಿತ್ಸೆ ಚೇರ್‌ಮ್ಯಾನ್ ನೋಯಲ್ ಡಿ’ಸೋಜ, ಪರಿಸರ ಹಾಗೂ ಸಸ್ಯ ರಕ್ಷಣಾ ಚೇರ್‌ಮ್ಯಾನ್ ಪುರುಷೋತ್ತಮ ಶೆಟ್ಟಿ, ಬುಲೆಟಿನ್ ಎಡಿಟರ್ ಡಾ|ರಾಜೇಶ್ ಬೆಜ್ಜಂಗಳ ಮತ್ತು ಭಾರತಿ ಎಸ್ ರೈಯವರಿಗೆ ಇವೆಂಟ್ಸ್‌ನ ಜಿಲ್ಲಾ ಕಾರ್ಯದರ್ಶಿ ಮೇಜರ್ ಡೋನರ್ ರಿತೇಶ್ ಬಾಳಿಗರವರು ಪದಪ್ರದಾನ ಮಾಡಿದರು.
ನೂತನ ಸದಸ್ಯರ ಸೇರ್ಪಡೆ: ಏಳ್ಮುಡಿ ಡೇನಿಯಲ್ ಆರ್ಕೇಡ್‌ನಲ್ಲಿನ ಉಜ್ಜೀವನ ಬ್ಯಾಂಕ್‌ನಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿರುವ ಮುರಳೀ ರೈ ಎಸ್, ಸೇಲ್ಸ್ ಆಫೀಸರ್ ಆಗಿರುವ ಶ್ರೀರಾಮ ಭಟ್, ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ರೇಂಜ್ ಫಾರೆಸ್ಟ್ ಆಫೀಸರ್ ಮೋಹನ್ ಕುಮಾರ್ ಬಿ.ಜಿ, ಅಟೋಮೊಬೈಲ್ಸ್ ಫೈನಾನ್ಸ್‌ನ ಸೇಲ್ಸ್ ಎಕ್ಸಿಕ್ಯೂಟಿವ್ ಅಕ್ಷಯ್ ಕುಮಾರ್ ಕೆ, ಎಪಿಎಂಸಿ ರಸ್ತೆ ಕಾಂಚನಾ ಮೋಟಾರ‍್ಸ್ ಇದರ ಟಿವಿಎಸ್ ಕ್ರೆಡಿಟ್ ಸರ್ವಿಸ್ ಲಿ.ಚೆನ್ನೈ ಅಟೋ ಫೈನಾನ್ಸ್‌ನ ಅಲೋಕ್ ಕುಮಾರ್ ಬಿ.ಎ, ಎಚ್‌ಡಿಎಫ್‌ಸಿ ಬ್ಯಾಂಕ್ ಮ್ಯಾನೇಜರ್ ಲೋಹಿತ್ ಕುಮಾರ್, ಆನಸ್ತೇಶಿಯಾ ಟೆಕ್ನಿಶಿಯನ್ ಭರತ್ ಕುಮಾರ್ ಟಿ, ಉದ್ಯಮಿ ವಿಕಾಶ್ ರೈ, ಡೆಂಟಿಸ್ಟ್ ಶ್ರದ್ಧಾ ವಿ.ರೈ, ನಿವೃತ್ತ ಬ್ಯಾಂಕ್ ಅಧಿಕಾರಿ ಪೂವಪ್ಪ ನಾಕ್ ಎಂ, ಉದ್ಯಮಿ ರಾಜೇಶ್ ಕೋಲ್ಪೆ, ಭಾರತ್ ಆಟೋ ಕಾರ‍್ಸ್‌ನ ಸೀನಿಯರ್ ಸೇಲ್ಸ್ ಎಕ್ಸಿಕ್ಯೂಟಿವ್ ಆನಂದ ನಾಕ್, ಉದ್ಯಮಿ ಸಿನಾನ್ ಕೆ.ರವರನ್ನು ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ರಿತೇಶ್ ಬಾಳಿಗರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಸೇರ್ಪಡೆಗೊಳಿಸಿದರು.
ಸ್ಕಾಲರ್‌ಶಿಪ್/ಚೇರ್ ವಿತರಣೆ: ಕ್ಲಬ್ ವತಿಯಿಂದ ಸುಮಾರು ೨೦ ಅಂಗನವಾಡಿಗಳಿಗೆ ೨೦೦ ಚೇರ್‌ಗಳನ್ನು ವಿತರಿಸುವ ಕಾರ್ಯದ ಸಂದರ್ಭದಲ್ಲಿ ಮೊದಲಿಗೆ ಬಪ್ಪಳಿಗೆ ಅಂಗನವಾಡಿ ಕೇಂದ್ರಕ್ಕೆ ಚೇರ್‌ಗಳನ್ನು ವಿತರಿಸುವ ಮೂಲಕ ಚಾಲನೆ ನೀಡಲಾಯಿತು. ಇದರಲ್ಲಿ ಸುಮಾರು ನೂರು ಚೇರ್‌ಗಳನ್ನು ರೋಯಲ್ ಫರ್ನಿಚರ್‌ರವರು ಕೊಡುಗೆಯಾಗಿ ನೀಡಿರುತ್ತಾರೆ. ಓರ್ವೆ ಪ್ರತಿಭಾವಂತ ಹುಡುಗಿಗೆ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲೆಂದು ಸ್ಕಾಲರ್‌ಶಿಪ್‌ನ್ನು ಕೂಡ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಡಿಸ್ಟ್ರಿಕ್ಟ್ ಸದಸ್ಯರಿಗೆ ಗೌರವ: ಜಿಲ್ಲಾ ಪ್ರೋಗ್ರಾಂನ ಝೋನಲ್ ಕೋಆರ್ಡಿನೇಟರ್ ಆಗಿ ಭಾರತಿ ಎಸ್.ರೈ, ಆರ್‌ಸಿಎಲ್‌ನ ಝೋನಲ್ ಕೋಆರ್ಡಿನೇಟರ್ ಕವನ್ ಡಿ.ನಾಕ್, ಆರ್‌ಎಎಚ್‌ಎಲ್‌ಎ ಝೋನಲ್ ಕೋಆರ್ಡಿನೇಟರ್ ಮೊಹಮ್ಮದ್ ರಫೀಕ್, ರೋಟರಿ ಸಿಂಗಿಂಗ್ ಐಡಲ್‌ನ ಝೋನಲ್ ಕೋಆರ್ಡಿನೇಟರ್ ನೋಯಲ್ ಡಿ’ಸೋಜ, ವುಮನ್ ಎಂಟರ್‌ಪ್ರನರ್‌ಶಿಪ್ ಡೆವಲಪ್‌ಮೆಂಟ್ ಇದರ ವೈಸ್ ಚೇರ್‌ಮ್ಯಾನ್ ಅಮಿತಾ ಶೆಟ್ಟಿ, ಕಾನ್ಫರೆನ್ಸ್ ಮತ್ತು ರೋಟರಿ ಪಬ್ಲಿಕ್ ಇಮೇಜ್‌ನ ವೈಸ್ ಚೇರ್‌ಮ್ಯಾನ್ ಸಂತೋಷ್ ಶೆಟ್ಟಿಯವರಿಗೆ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸನ್ಮಾನ: ಕಳೆದ ವರ್ಷ ಅತ್ತ್ಯುತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿದ ನಿರ್ಗಮಿತ ಅಧ್ಯಕ್ಷ ಸಂತೋಷ್ ಶೆಟ್ಟಿ ಸಾಜ, ಕಾರ್ಯದರ್ಶಿ ರಫೀಕ್ ರೋಯಲ್ ಹಾಗೂ ಕೋಶಾಧಿಕಾರಿ ಸನತ್ ರೈರವರನ್ನು ನೂತನ ತಂಡದಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಟಿಆರ್‌ಎಫ್ ಚೇರ್‌ಮ್ಯಾನ್ ಶ್ರೀಧರ್ ಕೆ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ಸಂತೋಷ್ ಶೆಟ್ಟಿ ಸಾಜ ಸ್ವಾಗತಿಸಿ, ನೂತನ ಕಾರ್ಯದರ್ಶಿ ಅಶೋಕ್ ನಾಯ್ಕ್ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ರಫೀಕ್ ರೋಯಲ್ ವರದಿ ವಾಚಿಸಿದರು. ಭಾರತಿ ಎಸ್ ರೈ ಹಾಗೂ ಡಾ|ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಕ್ಲಬ್ ವತಿಯಿಂದ ಸ್ಯಾನಿಟೈಸರ್, ಉಚಿತ ಮಾಸ್ಕ್, ದೇಹದ ಉಷ್ಣತೆ ಪರೀಕ್ಷಿಸುವ ಥರ್ಮಾಮೀಟರ್‌ನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು. ಸಭಾಂಗಣದಲ್ಲಿ ಕೇವಲ ೫೦ ಮಂದಿಗೆ ಕುಳಿತುಕೊಳ್ಳುವ ಆಸನಗಳನ್ನು ಸಾಮಾಜಿಕ ಅಂತರದೊಂದಿಗೆ ಜೋಡಿಸಿಡಲಾಗಿತ್ತು.

 

ಅತೀ ಬಡವರಿಗೆ ವೆಂಟಿಲೇಟರ್‌ನ್ನು ಉಚಿತವಾಗಿ ಮತ್ತು ಉಳಿದವರಿಗೆ ಬಾಡಿಗೆಗೆ ನೀಡುವ ವ್ಯವಸ್ಥೆ, ಕಟ್ಟಡದಲ್ಲಿನ ವೇಸ್ಟ್ ಸಾಮಾಗ್ರಿಗಳ ಮರು ಬಳಕೆ ಮಾಡುವ ಯೋಜನೆ, ಕೆಮ್ಮಾಯಿ ಜಂಕ್ಷನ್‌ನಲ್ಲಿ ರೋಟರಿ ಸೆಂಟ್ರಲ್ ವತಿಯಿಂದ ವೃತ್ತ ನಿರ್ಮಿಸುವ ಯೋಜನೆಯನ್ನು ಹೊಂದಿದೆ ಎಂದು ಹೇಳಿ ಯೋಜನೆಗಳಿಗೆ ಸದಸ್ಯರ ಸಹಕಾರ ಅತೀ ಮುಖ್ಯ ಎಂದು ನೂತನ ಅಧ್ಯಕ್ಷ ವೆಂಕಟ್ರಾಜ್ ಪಿ.ಜಿರವರು ಹೇಳಿದರು.

ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ಗೆ ರೂ.30 ಸಾವಿರ ವೆಚ್ಚದಲ್ಲಿ ಪಿಪಿಇ ಕಿಟ್… ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿನ ಖಾಸಗಿ ಡಯಾಲಿಸಿಸ್(ನೆಪ್ರೋಲಜಿ) ಸೆಂಟರ್‌ಗೆ ಕೋವಿಡ್ ಸಂಕಷ್ಟದಲ್ಲಿ ಸ್ವ-ರಕ್ಷಣೆಗೆ ನೆರವಾಗಲು ಸೆಂಟರ್‌ನ ಒಂಬತ್ತು ಮಂದಿ ಕಾರ್ಯನಿರ್ವಾಹಕರಿಗೆ ಹಾಗೂ ರೋಗಿಗಳಿಗೆ ರೋಟರಿ ಸೆಂಟ್ರಲ್, ರೋಟರಿ ಎಲೈಟ್ ಹಾಗೂ ರೋಟರಿ ಸ್ವರ್ಣದ ವತಿಯಿಂದ ರೂ.30 ಸಾವಿರ ವೆಚ್ಚದಲ್ಲಿ ಸ್ಯಾನಿಟೈಸರ್ ಸ್ಟ್ಯಾಂಡ್, ಸ್ಯಾನಿಟೈಸರ್ ಗ್ಲೌಸ್, ಎನ್.೯೫ ಮಾಸ್ಕ್, ಪಿಪಿಇ ಕಿಟ್ ಹಾಗೂ ಇನ್ನಿತರ ಪರಿಕರವನ್ನೊಳಗೊಂಡ ಸರ್ಜಿಕಲ್ ಕಿಟ್‌ನ್ನು ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದ ಎಂಆರ್‌ಡಿಟಿ ರಕ್ಷಿತ್ ಕೆ.ಜೆರವರಿಗೆ ಹಸ್ತಾಂತರಿಸಲಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಹಾಯಹಸ್ತ ನೀಡಬಲ್ಲೆವು ಎಂಬ ಭರವಸೆಯ ಮಾತುಗಳನ್ನು ನಿರ್ಗಮಿತ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.