ಪುತ್ತೂರಿನಲ್ಲಿ ಪರಿಸರ ಸ್ನೇಹಿ ಸೈಕಲ್ಸ್ ಶೋರೂಂ ʼತಿರುಮಲ ಸೈಕಲ್ಸ್ʼ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹೋಂಡಾ ದ್ವಿಚಕ್ರ ವಾಹನ ಮಾರಾಟ ಮತ್ತು ಸರ್ವೀಸ್‌ನಲ್ಲಿ ಜಿಲ್ಲೆಯಲ್ಲೇ ಹೊಸ ದಾಖಲೆ ನಿರ್ಮಿಸಿ, ಗ್ರಾಹಕರಿಂದ ನಂಬರ್ 1 ಶೋರೂಮ್ ಎಂಬ ಶ್ಲಾಘನೆಯನ್ನು ಪಡೆದುಕೊಂಡಿರುವ ‘ತಿರುಮಲ’ ಸಂಸ್ಥೆಯವರಿಂದ ಪುತ್ತೂರಿನ ಜನತೆಗೆ ಮತ್ತೊಂದು ಸಂತಸದ ಸುದ್ದಿಯನ್ನು ನೀಡಲಾಗಿದ್ದು, ಪುತ್ತೂರಿನಲ್ಲಿ ‘ತಿರುಮಲ ಸೈಕಲ್ಸ್’ ಬೊಳುವಾರು ಆರ್.ಕೆ ಸಂಕೀರ್ಣದಲ್ಲಿ ಜು.9ರಂದು ಬೆಳಿಗ್ಗೆ ಶೋರೂಮ್ ಸರಳವಾಗಿ ಶುಭಾರಂಭಗೊಂಡಿತು. 

ಆರ್.ಕೆ. ಸಂಕೀರ್ಣದ ಮಾಲಕ ಶಿವಪ್ರಸಾದ್‌ ರಿಬ್ಬನ್‌ ಕತ್ತರಿಸಿದರು, ಮಾಸ್ಟರ್‌ ಪ್ಲಾನರಿಯ ಎಸ್.ಕೆ. ಆನಂದ್, ಡಾ.ಎಂ.ಎಸ್.‌ ಭಟ್‌, ರಾಮ್‌ಭಟ್‌ ಬಂಗಾರಡ್ಕ, ಸಂಸ್ಥೆಯ ಮಾಲಕರ ಸಹೋದರ ರಾಜಗೋಪಾಲ್‌ ಎನ್.ಟಿ., ಮಾಲಕ ಕೃಷ್ಣಕಿಶೋರ್‌ ಎನ್.ಟಿ. ದೀಪ ಬೆಳಗಿಸಿದರು.

ಈ ಸಂದರ್ಭದಲ್ಲಿ ಮಾಲಕರ ಪತ್ನಿ ಅರುಣಾ ಕಿಶೋರ್‌, ಪುತ್ರ ಅಖಿಲೇಶ್‌, ಸೊಸೆ ಕೀರ್ತಿ ಅಖಿಲೇಶ್‌ ಉಪಸ್ಥಿತರಿದ್ದರು. ಅನೇಕ ಗಣ್ಯರು ಹಿತೈಷಿಗಳು ಆಗಮಿಸಿ ಶುಭಹಾರೈಸಿದರು.

ಪುತ್ತೂರಿಗೆ ಮೊದಲ ಬಾರಿಗೆ 1990ರಲ್ಲಿ ಅಟೋ ಮೊಬೈಲ್ಸ್‌ನ್ನು ಡೀಲರ‍್ಸ್ ಆಗಿ ತಂದಿದ್ದ ಸಂಸ್ಥೆಯ ಮಾಲಕ ಕೃಷ್ಣ ಕಿಶೋರ್ ಎನ್.ಟಿ.ಯವರು ಇದೀಗ ಮೊದಲ ಬಾರಿಗೆ ಪುತ್ತೂರಿಗೆ ಸೈಕಲ್ಸ್ ಡೀಲರ್ ಆಗಿರುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಹರ್ಕ್ಯೂಲ್ಸ್ ಕಂಪೆನಿಯ ಸೈಕಲ್‌ಗಳು ಲಭ್ಯ:
ಸೈಕಲ್ ಪ್ರಿಯರಿಗೆ ಇದೊಂದು ಅತ್ಯಂತ ಪ್ರೀತಿಯ ಶುಭ ಸುದ್ದಿಯಾಗಲಿದೆ. ಹಲವು ವರ್ಷಗಳಿಂದ ಜನಪ್ರಿಯತೆ ಪಡೆದುಕೊಂಡಿದ್ದ Hercules Cycles ಬ್ರ್ಯಾಂಡ್’ನ ಅಧಿಕೃತ ಶೋರೂಮ್ ಇದಾಗಿದೆ. ರೂ.2500 ರಿಂದ ಹಿಡಿದು ರೂ.3 ಲಕ್ಷದ ವರೇಗಿನ ವಿವಿಧ ಶ್ರೇಣಿಯ ಸೈಕಲ್‌ಗಳು ತಿರುಮಲ ಸೈಕಲ್ಸ್‌ನಲ್ಲಿ ದೊರೆಯುತ್ತಿದೆ.

3 ವರ್ಷದ ಮಕ್ಕಳಿಂದ ಆರಂಭ:

ತಿರುಮಲ ಸೈಕಲ್ಸ್‌ನಲ್ಲಿ ವಿಶೇಷವಾಗಿ ಟ್ರ್ಯಾಕ್‌ಆಂಡ್‌ಟ್ರ್ಯಾಯಲ್.ಕಾಮ್‌ನಲ್ಲಿ ಲಭ್ಯವಿರುವ ಎಲ್ಲಾ ಮಾಡೆಲ್ ಸೈಕಲ್‌ಗಳು ಗ್ರಾಹಕರಿಗೆ ಲಭ್ಯವಿದೆ. ಮಾಮೂಲಿ ಸೈಕಲ್‌ನಿಂದ ಹಿಡಿದು ಸ್ಪೋರ್ಟ್ಸ್ ಸೈಕಲ್ ತನಕದ ವಿವಿಧ ಮಾಡೆಲ್‌ನ ಸೈಕಲ್‌ಗಳು ಇಲ್ಲಿವೆ. ದೊಡ್ಡ ಮಟ್ಟದ ಸೈಕಲ್ ಶೋರೂಮ್ ಮಂಗಳೂರು ಬಿಟ್ಟರೆ ಇದೀಗ ಪುತ್ತೂರಿನಲ್ಲಿ ಆರಂಭವಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊ.7338179163ಗೆ ಸಂಪರ್ಕಿಸಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.