1928 ರಲ್ಲಿ ಸಿಟಿ ಮುನ್ಸಿಪಲ್ ಕೌನ್ಸಿಲ್ ಜಾಗೃತಿಗಾಗಿ ಹೊರಡಿಸಿದ ಕರ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

Puttur_Advt_NewsUnder_1
Puttur_Advt_NewsUnder_1

ಈಗ ಕೊರೋನಾ ರೋಗ ವಿಶ್ವದಾದ್ಯಂತ ಹರಡಿ ಪ್ರಪಂಚದ ಅನೇಕ ಬಲಿಷ್ಟ ದೇಶಗಳೂ ದಿಕ್ಕುಗಾಣದೆ ಲಾಕ್ ಡೌನ್ ನಂತಹ ಕ್ರಮಗಳನ್ನು ಕೈಗೊಂಡು ದೇಶದ ಮತ್ತು ಜನರ ಆರ್ಥಿಕತೆಗೆ ಭಾರೀ ಹೊಡೆತವಾಗಿರುವುದನ್ನು ನಾವೆಲ್ಲ ಅನುಭವಿಸುತ್ತಿದ್ದೇವೆ. ಇದುವರೆಗೆ ಈ ರೀತಿಯ ಪರಿಸ್ಥಿತಿ ಆಗಿರುವುದನ್ನು ನಾವಂತೂ ಕಂಡಿಲ್ಲ ಕೇಳಿಲ್ಲ ಅಂತ ಎಲ್ಲರೂ ಹೇಳುತ್ತೇವೆ. ಆದರೆ ಇಂತಹದೇ ಪರಿಸ್ಥಿತಿ 1918 ರಲ್ಲಿ ಮತ್ತು 1928 ರಲ್ಲಿ ದೊಡ್ಡ ಊರುಗಳಲ್ಲಿ ಸೃಷ್ಟಿಯಾಗಿತ್ತೆಂಬ ಮಾಹಿತಿ ಹೆಚ್ಚಿನವರಿಗಿಲ್ಲ.

 

1918 ರಲ್ಲಿ ಬಂದ ಫ್ರೆಂಚ್ ಫ್ಲೂ ಎಂಬ ಮಹಾಮಾರಿಗೆ ಈಗ ಸಂಭವಿಸಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಜನ ಸತ್ತಿದ್ದರೆಂದು ತಿಳಿದು ಬಂದಿದೆ. ಆಗ ಕೂಡ ಇದೇ ರೀತಿ ಲಾಕ್ ಡೌನನ್ನು ಆಗಿನ ಆಡಳಿತ ಘೋಷಿಸಿತ್ತು. ಪುನಹ 1928 ಅದೇ ಮಾದರಿಯ ರೋಗ ಕಾಣಿಸಿಕೊಡಾಗ ಆಗಿನ ಬೆಂಗಳೂರು ಸಿಟಿ ಮುನ್ಸಿಪಲ್ ಕೌನ್ಸಿಲ್ ಜಾಗೃತಿಗಾಗಿ ಹೊರಡಿಸಿದ ಕರಪತ್ರದ ಪ್ರತಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡುವಾಗ ಅಂದು ಕೂಡ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬುದು ಗೊತ್ತಾಗುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.