ಭೂಮಿಕಾ ಒಕ್ಕೂಟದಿಂದ ಮೇಲ್ವಿಚಾರಕಿ ಪಾವನಾರವರಿಗೆ ಬೀಳ್ಕೊಡುಗೆ | ನೂತನ ಮೇಲ್ವಿಚಾರಕಿ ಯೋಗೇಶ್ವರಿರವರಿಗೆ ಸ್ವಾಗತ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯದ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸಿ ನಿರ್ಗಮಿಸುತ್ತಿರುವ ಪಾವನಾರವರಿಗೆ ಭೂಮಿಕಾ ಒಕ್ಕೂಟದ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ಮತ್ತು ನೂತನ ಮೇಲ್ವಿಚಾರಕಿಯಾಗಿ ಆಗಮಿಸಿದ ಯೋಗೇಶ್ವರಿರವರನ್ನು ಸ್ವಾಗತಿಸುವ ಕಾರ್ಯಕ್ರಮ ಸಂಘದ ಸುವಿದಾ ಕಛೇರಿಯಲ್ಲಿ ನಡೆಯಿತು.


ಭೂಮಿಕಾ ಒಕ್ಕೂಟದ ಅಧ್ಯಕ್ಷ ದಿಲೀಪ್ ಕುಮಾರ್‌ರವರು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಾವನಾರವರು ನಮ್ಮ ಒಕ್ಕೂಟದ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದರು ಮಾತ್ರವಲ್ಲದೆ ಸಂಘದ ಸದಸ್ಯರ ಮೆಚ್ಚುಗೆಗೆ ಪಾತ್ರವಾಗಿದ್ದರು. ಪಾವನಾರವರ ಕರ್ತವ್ಯ ನಿಷ್ಠೆಗೆ ಆದಷ್ಟು ಬೇಗ ಉನ್ನತ ಹುದ್ದೆ ಲಭಿಸಲೆಂದು ಶ್ರೀ ಮಂಜುನಾಥ ಸ್ವಾಮಿ ದೇವರಲ್ಲಿ ಪ್ರಾರ್ಥಿಸೋಣ ಎಂದರು. ಪಾವನಾರವರು ಮುಂದಿನ ಒಂದು ವರ್ಷ ಪುತ್ತೂರು ವಲಯದಲ್ಲಿ ಮುಂದುವರೆಯಲಿದ್ದು ನಮ್ಮ ಒಕ್ಕೂಟವು ಕೆಮ್ಮಿಂಜೆ ವಲಯಕ್ಕೆ ಸೇರ್ಪಡೆಯಾಗಿದ್ದರಿಂದ ಪಾವನಾರವರು ಮತ್ತೊಂದು ವಲಯಕ್ಕೆ ಹೋಗಬೇಕಾಯಿತು. ಕೆಮ್ಮಿಂಜೆ ವಲಯಕ್ಕೆ ನೂತನ ಮೇಲ್ವಿಚಾರಕಿಯಾಗಿ ಆಗಮಿಸಿದ ಯೋಗೇಶ್ವರಿರವರ ಸೇವೆಗೆ ಒಕ್ಕೂಟವು ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಅಧ್ಯಕ್ಷ ದಿಲೀಪ್‌ರವರು ಹೇಳಿದರು.
ಒಕ್ಕೂಟದ ಸೇವಾ ಪ್ರತಿನಿಧಿ ಪುಷ್ಪಾ, ಕಾರ್ಯದರ್ಶಿ ಕಲ್ಪನಾ, ಕೋಶಾಧಿಕಾರಿ ಲೆನ್ನಿ ಪಾಸ್, ಒಕ್ಕೂಟದ ಮಾಜಿ ಅಧ್ಯಕ್ಷರಾದ ಗಣೇಶ್ ಆಚಾರ್ಯ, ಪ್ರತೀ ಸಂಘದ ಓರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.