HomePage_Banner
HomePage_Banner
HomePage_Banner
HomePage_Banner

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ಸಮಸ್ಯೆಗಳಿವೆ | ಪುತ್ತೂರು ಹಾಸ್ಪಿಟಲ್ ಎಸೋಸಿಯೇಶನ್‌ನಿಂದ ಸಹಾಯಕ ಆಯುಕ್ತರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಒಳರೋಗಿಗಳಾಗಿ ಚಿಕಿತ್ಸೆ ನೀಡಲು ಪ್ರಾಯೋಗಿಕ ಸಮಸ್ಯೆಗಳಿರುವ ಕುರಿತು ಪುತ್ತೂರು ಹಾಸ್ಪಿಟಲ್ ಎಸೋಸಿಯೇಶನ್‌ನ ವತಿಯಿಂದ ಜು.9ರಂದು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್‌ರವರಿಗೆ ಮನವಿ ಮಾಡಿದರು.

ಕೋವಿಡ್ – 19 ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ನಾವು ಜೀವದ ಹಂಗು ತೊರೆದು ಶ್ರಮಿಸುತ್ತಿದ್ದೇವೆ. ಸರಕಾರದ ಆದೇಶದಂತೆ ಗ್ರಾಮಾಂತರ ಪ್ರದೇಶದ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿದೆ. ಆದರೆ ನಮ್ಮಲ್ಲಿ ಸಣ್ಣ ಪ್ರಮಾಣದ ಆಸ್ಪತ್ರೆಗಳಿದ್ದು ಒಂದೇ ಪ್ರವೇಶ ಧ್ವಾರವನ್ನು ಹೊಂದಿರುತ್ತದೆ. ಅಲ್ಲದೆ ಐಸಿಯು, ಎಕ್ಸರೇ ಹಾಗೂ ಲ್ಯಾಬೋರೇಟರಿ ಒಂದೊಂದೇ ಸೌಲಭ್ಯಗಳಿರುವುದು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷಾ ಸೌಲಭ್ಯಗಳಿಲ್ಲ. ಕೋವಿಡ್ ರೋಗಿಗಳನ್ನು ದಾಖಲಿಸಿದರೆ ಇತರ ರೋಗಿಗಳನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ನಮ್ಮಲ್ಲಿ ಸೌಲಭ್ಯಗಳಿಲ್ಲ. ಸೀಮಿತ ಸಂಖ್ಯೆಯ ವೈದ್ಯರುಗಳನ್ನು ಆಸ್ಪತ್ರೆಗಳು ಹೊಂದಿರುತ್ತದೆ. ನಮ್ಮಲ್ಲಿರುವ ವೈದ್ಯರುಗಳು ಬಹುತೇಕ ಹಿರಿಯ ನಾಗರಿಕರೇ ಆಗಿದ್ದು ದಿನದ 24 ಗಂಟೆಯೂ ಸೇವೆ ನೀಡುವುದು ಅಸಾಧ್ಯ. ಸೀಮಿತ ಸಂಖ್ಯೆಯ ವೈದ್ಯರುಗಳು ಹಾಗೂ ಸಿಬಂದಿಗಳನ್ನು ಒಳಗೊಂಡಿದ್ದು ಸರಕಾರದ ನಿಯಮದಂತೆ ವೈದ್ಯರುಗಳು ಒಂದು ವಾರ ಕೆಲಸ ಹಾಗೂ ಒಂದು ವಾರ ರಜೆ ಮಾದರಿಯಲ್ಲಿ ಕೆಲಸ ನಿರ್ವಹಿಸುವುದು ಅಸಾಧ್ಯ. ನಮ್ಮ ಆಸ್ಪತ್ರೆಗಳಲ್ಲಿ ಆವಶ್ಯಕತೆಗೆ ತಕ್ಕಂತೆ ದಾದಿಯರಿಗೆ ತರಬೇತಿ ನೀಡಲಾಗುತ್ತಿದೆ. ಅನುಭವೀ ದಾದಿಯರು ಸೀಮಿತವಾಗಿದ್ದಾರೆ. ಹೀಗಾಗಿ ಅವರೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ತಯಾರಿಲ್ಲ. ಅವರು ಕೆಲಸ ಬಿಡುವಂತಹ ಬಹುದೊಡ್ಡ ಸಮಸ್ಯೆಗಳು ನಮ್ಮ ಕಾಡುತ್ತದೆ. ಕೋವಿಡ್ ಒಂದು ರೋಗಿ ದಾಖಲಾದರೆ ಅದರ ಭಯದಿಂದ ಇತರ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಬರಲು ಹಿಂದೇಟು ಹಾಕುತ್ತಾರೆ. ಇದರಿಂದ ಆಸ್ಪತ್ರೆಯ ಸಿಬಂದಿ ವೇತನ ಪಾವತಿ ಹಾಗೂ ಆಸ್ಪತ್ರೆಯ ಇತರ ವೆಚ್ಚಗಳು ಸೇರಿ ನಿರ್ವಹಣೆ ಮಾಡುವುದು ಅಸಾಧ್ಯವಾಗಲಿದೆ.
ಈ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಯನ್ನು ಈಗಾಗಲೇ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿದ್ದು ಅಲ್ಲಿಯೇ ಒಳರೋಗಿಗಳಾಗಿ ಚಿಕಿತ್ಸೆ ನೀಡಬೇಕು. ಇದಕ್ಕೆ ಖಾಸಗಿ ಆಸ್ಪತ್ರೆಯ ವೈದ್ಯರುಗಳು ಸಹಕರಿಸಲಿದ್ದೇವೆ. ನಮ್ಮ ಸೇವೆ ಹಿಂದಿನಂತೆ ಮುಂದುವರಿಸಲಾಗುವುದು. ವಿಶೇಷವಾಗಿ ಡೆಂಗ್ಯು ಜ್ವರ ಇನ್ನಿತರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ನೆಗೆಟಿವ್ ಬರುವಂತ ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲವು ಬೆಡ್‌ಗಳನ್ನು ಮೀಸಲಿಡುವುದಾಗಿ ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಗರ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-೧೯ ರೋಗಿಗಳಿಗೆ ಒಳ ರೋಗಿಗಳಾಗಿ ದಾಖಲಾತಿ ಮಾಡಿಕೊಂಡು ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಆದೇಶ ಮಾಡಿರುತ್ತಾರೆ. ಆದರೆ ಇದಕ್ಕೆ ಚಿಕಿತ್ಸೆ ನೀಡಬೇಕಾದರೆ ಪ್ರತ್ಯೇಕ ಐಶೋಲೇಶನ್, ಐಸಿಯು ಇರುವಂತ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ರೋಗಿಗಳನ್ನು ದಾಖಲಾತಿ ಮಾಡಿಕೊಂಡು ಚಿಕಿತ್ಸೆ ನೀಡಲು ಸಾಧ್ಯವಿದೆ. ಪುತ್ತೂರಿನಲ್ಲಿ ಸಿಂಗಲ್ ಸ್ಪೆಷಾಲಿಟಿ ಹಾಗೂ ಹಿರಿಯ ವೈದ್ಯರುಗಳಿರುವುದರಿಂದ ಕೋವಿಡ್ ರೋಗಿಗಳನ್ನು ಒಳರೋಗಿಗಳಾಗಿ ದಾಖಲು ಮಾಡುವುದು ಅಸಾಧ್ಯವಾಗುತ್ತಿದೆ. ಇತರ ರೋಗಿಗಳಿಗೆ ಹರಡದಂತೆ ಚಿಕಿತ್ಸೆ ನೀಡಬೇಕಾಗುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ದಾಖಲಾತಿ ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು ಅದಕ್ಕೆ ಪುತ್ತೂರಿನ ಆಸ್ಪತ್ರೆಗಳ ವೈದ್ಯರುಗಳ ಸಂಪೂರ್ಣ ಸಹಕಾರ ಇದೆ ಎಂದು ಪುತ್ತೂರು ಹಾಸ್ಪಿಟಲ್ ಎಸೋಸಿಯೇಶನ್‌ನ ಅಧ್ಯಕ್ಷ ಡಾ.ಶ್ರೀಪತಿ ರಾವ್ ತಿಳಿಸಿದ್ದಾರೆ.
ಎಸೋಸಿಯೇಶನ್‌ನ ಉಪಾಧ್ಯಕ್ಷ ಡಾ. ಭಾಸ್ಕರ್ ರಾವ್, ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಜೋಶಿ, ಕೋಶಾಧಿಕಾರಿ ಡಾ.ಅಶೋಕ್ ಪಡಿವಾಳ್, ಫಾ.ಪತ್ರಾವೋ ಆಸ್ಪತ್ರೆಯ ಡಾ. ಫ್ಲೋರಿನಾ, ಚೇತನ ಆಸ್ಪತ್ರೆಯ ಡಾ. ಜೆ.ಸಿ ಅಡಿಗ, ಸುಶ್ರುತಾ ಆಸ್ಪತ್ರೆಯ ಡಾ. ರವಿಪ್ರಕಾಶ್ ಹಾಗೂ ಆದರ್ಶ ಆಸ್ಪತ್ರೆಯ ಮ್ಯಾನೇಜರ್ ಇಂದು ಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.