ಅಡಿಕೆ ಕೃಷಿಯಿದ್ದರೂ ಆರ್‌ಟಿಸಿಯಲ್ಲಿ ರಬ್ಬರ್ ಬೆಳೆ ನಮೂದು | ನೆ.ಮುಡ್ನೂರು ಗ್ರಾಮಕರಣಿಕರಿಂದ ಲೋಪ-ಸೂಕ್ತ ಕ್ರಮಕ್ಕೆ ರೈತರಿಂದ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಡಿಕೆ ಕೃಷಿಯಿದ್ದರೂ ರೈತರ ಆರ್‌ಟಿಸಿಯಲ್ಲಿ ರಬ್ಬರ್ ಬೆಳೆ ಎಂದು ನಮೂದಿಸುವ ಮೂಲಕ ನೆಟ್ಟಣಿಗೆ ಮುಡ್ನೂರು ಗ್ರಾಮದ ಗ್ರಾಮಕರಣಿಕರು ಲೋಪವೆಸಗಿದ್ದು ಅವರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೃಷಿಕರು ಜು.9ರಂದು ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್‌ರವರಿಗೆ ಮನವಿ ಮಾಡಿದ್ದಾರೆ.


ಗ್ರಾಮಕರಣಿಕರು ಯಾವುದೋ ಖಾಸಗಿ ವ್ಯಕ್ತಿಗಳ ಮೂಲಕ ಬೆಳೆ ವಿಮೆ ಸರ್ವೆ ಮಾಡಿಸಿರುತ್ತಾರೆ. ಹೀಗಾಗಿ ಅವರು ಗ್ರಾಮದ ರೈತರು ಅಡಿಕೆ ಕೃಷಿ ಬೆಳೆಯುತ್ತಿದ್ದರೂ ಅವರ ಆರ್‌ಟಿಸಿ (ಪಹಣಿ ಪತ್ರಿಕೆ)ಯಲ್ಲಿ ರಬ್ಬರ್ ಬೆಲೆ ಎಂದು ನಮೂದಿಸಿರುತ್ತಾರೆ. ಕೇವಲ ಅಡಿಕೆ ಕೃಷಿ ಮಾಡುತ್ತಿದ್ದು ರಬ್ಬರ್ ಬೆಳೆಯೇ ಇಲ್ಲದೇ ಇರುವಂತಹ ಕೃಷಿಕರ ಆರ್‌ಟಿಸಿಯಲ್ಲೂ ರಬ್ಬರ್ ಬೆಳೆ ಎಂದು ಗ್ರಾಮಕರಣಿಕರು ನಮೂದಿಸಿರುತ್ತಾರೆ. ಗ್ರಾಮಕರಣಿಕರು ಸರಿಯಾಗಿ ಬೆಳೆ ವಿಮೆ ಪರಿಶೀಲನೆ ನಡೆಸದೇ ರೈತರಿಗೆ ಬೆಳೆ ವಿಮೆ ಮಾಡಿಸಿದ್ದರೂ ಅದರ ಪ್ರಯೋಜನ ದೊರೆಯುವುದಿಲ್ಲ. ಗ್ರಾಮದ ಗ್ರಾಮಕರಣಿಕರ ಲೋಪದಿಂದಾಗಿ ಗ್ರಾಮದ ಬಹುತೇಕ ರೈತರಿಗೆ ಲಕ್ಷಾಂತರ ರೂಪಾಯಿಗಳ ನಷ್ಟವುಂಟಾಗಿರುತ್ತದೆ. ಈ ನಿಟ್ಟಿನಲ್ಲಿ ಗ್ರಾಮಕರಣಿಕರ ವಿರುದ್ದ ಸೂಕ್ತ ಕ್ರಮಕೈಗೊಂಡು ರೈತರಿಗೆ ನಷ್ಟವಾದ ಮೊತ್ತವನ್ನು ಸರಕಾರ ಅಥವಾ ಲೋಪವೆಸಗಿದ ಅಧಿಕಾರಿಯಿಂದ ವಸೂಲಿ ಮಾಡಿಕೊಡುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ಎಪಿಎಂಸಿ ನಾಮ ನಿರ್ದೇಶಿತ ಸದಸ್ಯೆ ಮೋಹನಾಂಗಿ, ನ್ಯಾಯವಾದಿ ಚಿನ್ಮಯ್ ರೈ, ಕೃಷಿಕರಾದ ಶ್ರೀಕೃಷ್ಣ ಭಟ್ ಮುಂಡ್ಯ, ದಾಮೋದರ ಪಾಟಾಳಿ ಮುಂಡ್ಯ, ಚರಣ್‌ರಾಜ್ ಮಡ್ಯಲಮಜಲು, ಪ್ರಜ್ವಲ್ ಮಡ್ಯಲಮಜಲು, ಚಂದ್ರಹಾಸ್ ಚಿಮಿನಿಗುಡ್ಡೆ, ದೀಕ್ಷಿತ್ ಈಶ್ವರಮಂಗಲ ಮನವಿಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.