Breaking News

ಹಾಲು, ಎಣ್ಣೆ ಮತ್ತು ಧಾನ್ಯಗಳನ್ನು ಮಕ್ಕಳಿಗೆ ನೀಡುವಂತೆ ಸರಕಾರದ ಹೊಸ ಆದೇಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಾಲಾ ರಜಾ ದಿನಗಳ ಒಟ್ಟು 37 ದಿನಗಳ ಆಹಾರ ಪದಾರ್ಥಗಳನ್ನು ಅಯಾ ಶಾಲೆಯ ಮಕ್ಕಳಿಗೆ ವಿತರಣೆ ಮಾಡುವಂತೆ ಸರಕಾರ ಆದೇಶ ನೀಡಿದ್ದು ಆದೇಶದಂತೆ ಮಕ್ಕಳಿಗೆ ಹಾಲು, ಅಡುಗೆ ಎಣ್ಣೆ, ಧಾನ್ಯ ಮತ್ತು ಅಕ್ಕಿಯನ್ನು ಜು.9ರಂದು ವಿತರಣಾ ಕಾರ್ಯ ಆರಂಭವಾಗಲಿದೆ.

ಕಳೆದ ಹತ್ತು ದಿನಗಳ ಹಿಂದೆ ಅಕ್ಷರದಾಸೋಹ ಇಲಾಖೆಗೆ ಸರಕಾರ ಆದೇಶ ನೀಡಿ ಶಾಲೆಗಳಲ್ಲಿ ರಜಾದಿನದ ಕಾರಣದಿಂದ ಉಳಿಕೆಯಾಗಿರುವ ಹಾಲು ಮತ್ತು ಎಣ್ಣೆಯನ್ನು ಸಂಗ್ರಹಿಸಿ ಅದನ್ನು ಬರಪೀಡಿತ ಬಳ್ಳಾರಿ ಮತ್ತು ಕೋಲಾರ ಜಿಲ್ಲೆಗೆ ರವಾನಿಸುವಂತೆ ಸುತ್ತೋಲೆಯನ್ನು ಹೊರಡಿಸಿತ್ತು. ಸರಕಾರದ ಈ ಆದೇಶಕ್ಕೆ ಪೋಷಕರಿಂದ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಶಾಲೆಗಳಲ್ಲಿ ಉಳಿದಿರುವ ಅಹಾರ ಧಾನ್ಯಗಳನ್ನು ಆಯಾ ಶಾಲೆಯ ಮಕ್ಕಳಿಗೆ ನೀಡಬೇಕು ಎಂದು ಪೋಷಕರು ಆಗ್ರಹಿಸಿದ್ದರು.

ಹಳೆಯ ಆದೇಶ ರದ್ದು : ರಜೆಯ ಕಾರಣ ಶಾಲೆಗಳಲ್ಲಿ ಉಳಿದಿರುವ ಹಾಲು, ಎಣ್ಣೆ, ಅಕ್ಕಿ ಮತ್ತು ಧಾನ್ಯಗಳನ್ನು ಮರಳಿಸುವಂತೆ ಸರಕಾರ ನೀಡಿದ ಆದೇಶವನ್ನು ರದ್ದುಗೊಳಿಸಲಾಗಿದೆ. ಆಹಾರ ಧಾನ್ಯಗಳನ್ನು ಸರಕಾರ ನಿಗದಿಪಡಿಸಿದ ತೂಕದಲ್ಲೇ ವಿತರಣೆಯಾಗಬೇಕು. ಕೊರತೆ ಉಂಟಾದಲ್ಲಿ ಇಲಾಖೆಯಿಂದ ತರಿಸಿ ಮಕ್ಕಳಿಗೆ ವಿತರಣೆ ಮಾಡುವಂತೆಯೂ ಸರಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪೋಷಕರಲ್ಲಿ ಸಂತಸ : ಶಾಲೆಗಳಲ್ಲಿ ಉಳಿದಿರುವ ಆಹಾರ ಧಾನ್ಯಗಳನ್ನು ಅದೇ ಶಾಲೆಯ ಮಕ್ಕಳಿಗೆ ವಿತರಣೆ ಮಾಡುವಂತೆ ಸರಕಾರ ಆದೇಶ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ನಮ್ಮ ಜಿಲ್ಲೆಯ ಮಕ್ಕಳಿಗೂ ಪೌಷ್ಠಿಕಾಂಶ ಆಹಾರ ನೀಡಬೇಕಿದೆ. ನಮ್ಮ ಶಾಲೆಯ ಮಕ್ಕಳಿಗೆ ವಿತರಣೇ ಮಾಡಲೆಂದು ತಂದಿರುವ ಧಾನ್ಯಗಳನ್ನು ಶಾಲೆ ರಜೆ ಎಂಬ ಕಾರಣಕ್ಕೆ ಮರಳಿಸುವುದು ನ್ಯಾಯವಲ್ಲ. ಸರಕಾರದ ಹೊಸ ನಿರ್ಧಾರದಿಂದ ಎಲ್ಲಾ ಮಕ್ಕಳಿಗೂ ಆಹಾರ ದೊರೆತಂತಾಗಿದೆ ಎಂದು ಪೋಷಕರು ಅಬಿಪ್ರಾಯ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.