Breaking News

ನಗರ ಸಭಾ ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬೂತ್ ಮಟ್ಟದ ಕಮಿಟಿ ರಚನೆ | ನಗರಸಭಾ ವಾರ್ಡ್ ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ತೀರ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನಲ್ಲಿಯೂ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಮಾಹಿತಿ ವಿನಿಮಯದ ಸಲುವಾಗಿ ನಗರಸಭಾ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಒಟ್ಟು 41 ಬೂತ್ ಮಟ್ಟದ ಕಮಿಟಿ ರಚಿಸಲು ಜು.9ರಂದು ನಡೆದ ನಗರಸಭೆ ವಾರ್ಡ್ ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.


ನಗರಸಭಾ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳಬಹುದಾದ ಕ್ರಮಗಳ ಚರ್ಚಿಸುವ ನಿಟ್ಟಿನಲ್ಲಿ ವಾರ್ಡ್ ಮಟ್ಟದ ಟಾಸ್ಕ್ ಪೋರ್ಸ್ ಮತ್ತು ಬೂತ್ ಮಟ್ಟದ ಸಮಿತಿಯ ಸಭೆಯು ಸಭೆಯು ತಹಶೀಲ್ದಾರ್ ರಮೇಶ ಬಾಬುರವರು ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆಸಲಾಗಿದೆ.
ನಗರ ಸಭೆಯ ಪ್ರತಿ ವಾರ್ಡ್‌ಗೆ ಸಂಬಂಧಿಸಿ ಸಮಿತಿ ರಚಿಸಿ, ಮಾಹಿತಿ ವಿನಿಮಯಕ್ಕೆ ವಾಟ್ಸಪ್ ಗ್ರೂಪ್ ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನಗರಸಭೆ ಸದಸ್ಯರ ನೇತೃತ್ವದಲ್ಲಿ ಆಶಾ ಕಾರ್ಯಕರ್ತರು, ನಗರಸಭೆ ಸಿಬಂದಿ, ಸ್ತ್ರೀ ಶಕ್ತಿ ಗ್ರೂಪ್ ಸದಸ್ಯರು, ೪೦ ಮನೆಗಳ ಮಾಹಿತಿ ಹೊಂದಿರುವ ಓರ್ವ ಸ್ವಯಂಸೇವಕರನ್ನು ಸೇರಿಸಲಾಗುವುದು. ಇಲ್ಲಿ ಪ್ರತಿ ವಾರ್ಡ್‌ನಲ್ಲಿ ಆರೋಗ್ಯ, ಸ್ವಚ್ಚತೆ ಸಮಸ್ಯೆ ಬಂದ ಸಂದರ್ಭ ಅದರ ಮಾಹಿತಿಯನ್ನು ಹಂಚಿಕೊಳ್ಳುವುದರ ಜತೆಗೆ ಬೂತ್, ವಾರ್ಡ್ ಕಮಿಟಿ ಮೂಲಕ ಆರೋಗ್ಯ ಸಿಬಂದಿಗಳ ಗಮನಕ್ಕೆ ತಂದು ಮುಂಜಾಗ್ರತಾ ಕ್ರಮ ವಹಿಸುವ ಉದ್ದೇಶ ಹೊಂದಲಾಗಿದೆ ಎಂದು ಪೌರಾಯುಕ್ತರು ಸಭೆಯ ಗಮನಕ್ಕೆ ತಂದರು.
ಯಾವುದೇ ವಾರ್ಡ್‌ಗಳಲ್ಲಿ ಡೆಂಗ್ಯೂ ಅಥವಾ ಇತರೆ ಸಾಂಕ್ರಾಮಿಕ ರೋಗ ಲಕ್ಷಣಗಳ ಕಂಡು ಬಂದಲ್ಲಿ ತತ್‌ಕ್ಷಣ ಅದನ್ನು ಗಮನಕ್ಕೆ ತರಲು ಈ ಸಮಿತಿ, ಗ್ರೂಪ್ ಸಹಕಾರಿ ಆಗಲಿದೆ. ವಾರ್ಡ್‌ನಲ್ಲಿ ಶುಚಿತ್ವದ ಕೊರತೆ ಅಥವಾ ರೋಗ ಹಬ್ಬಲು ಕಾರಣಕರ್ತವಾಗಿರುವ ಅಂಶಗಳಿದ್ದಲ್ಲಿ ಅದನ್ನು ಆಶಾ ಕಾರ್ಯಕರ್ತರು ಅಥವಾ ಸಮಿತಿ, ಗ್ರೂಪ್ ಸದಸ್ಯರು ನಗರಸಭೆ ಗಮನಕ್ಕೆ ತಂದು ತತ್‌ಕ್ಷಣ ಸರಿಪಡಿಸಲು ಅವಕಾಶ ಕಲ್ಪಿಸಲು ಇದು ಸಹಕಾರಿ ಆಗಲಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ತಾಲೂಕು ಆರೋಗ್ಯಧಿಕಾರಿ ಡಾ|ಆಶೋಕ್ ಕುಮಾರ್ ರೈಯವರು ನಗರದಲ್ಲಿನ ಕೊರೊನಾ ಪ್ರಕರಣಗಳ ಕುರಿತು ಮಾಹಿತಿ ನೀಡಿದರಲ್ಲದೆ ಸುರಕ್ಷತೆಯ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ತಹಶೀಲ್ದಾರ್ ರಮೇಶ ಬಾಬು ಮಾತನಾಡಿ, ಪ್ರತಿಯೊಬ್ಬರು ಜಾಗೃತ ಭಾವದಿಂದ ಸ್ಪಂದಿಸಿದಾಗ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವಿದೆ. ನಗರದಲ್ಲಿ ಜನದಟ್ಟನೆ ಹೆಚ್ಚಿರುವ ಕಾರಣ ಅಗತ್ಯ ಸುರಕ್ಷಾ ಕ್ರಮ ಪಾಲಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು. ಸಭೆಯಲ್ಲಿ ನಗರಸಭೆ ಸದಸ್ಯರು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.