ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ 5 ಕೊರೋನಾ ಪ್ರಕರಣ ಪತ್ತೆ

ಪುತ್ತೂರು: ಪುತ್ತೂರು ಮತ್ತು ಕಡಬ ಉಭಯ ತಾಲೂಕುಗಳಲ್ಲಿ ಜು.10ರಂದು 5 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಪೈಕಿ ಮೂವರು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಮತ್ತು ಇಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಡಬ ಕುಟ್ರುಪ್ಪಾಡಿಯ ತಾಯಿ, ಮಗಳಿಗೆ, ವಿದೇಶದಿಂದ ಆಗಮಿ ಮಂಗಳೂರಿನಲ್ಲೇ ಕ್ವಾರಂಟೈನ್‌ನಲ್ಲಿರುವ ಪರ್ಲಡ್ಕದ ನಿವಾಸಿಗೆ, ಚಿಕ್ಕಮುಡ್ನೂರು ಗ್ರಾಮದ ವೃದ್ದರೊಬ್ಬರಿಗೆ, ಕಾವು ಅಮ್ಚಿನಡ್ಕದ ಯುವಕರೊಬ್ಬರಿಗೆ ಕೊರೋನಾ ದೃಢಪಟ್ಟಿದೆ.

2 ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಕಡಬ ಕುಟ್ರುಪ್ಪಾಡಿ ನಿವಾಸಿಗೆ ಕೊರೋನಾ ದೃಢ ಪಟ್ಟಿತ್ತು. ಇದೀಗ ರೋಗಿಯ ಸುಮಾರು 36 ವರ್ಷದ ಪತ್ನಿ ಮತ್ತು 7 ವರ್ಷದ ಪುತ್ರಿಗೆ ಕೊರೋನಾ ದೃಢ ಪಟ್ಟಿದೆ. ವಿದೇಶದಿಂದ ಇಂಟರ್‌ನ್ಯಾಷನಲ್ ವಿಮಾನದಲ್ಲಿ ಬಂದು ಮಂಗಳೂರಿನಲ್ಲಿನಲ್ಲೇ ಕ್ವಾರಂಟೈನ್ ಆಗಿರುವ ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಯುವಕರೊಬ್ಬರಿಗೆ ಕೊರೋನಾ ದೃಢಪಟ್ಟಿದೆ ಇವರೆಲ್ಲಾ ಮಂಗಳೂರು ಕೊವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನಗರಸಭಾ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ 69 ವರ್ಷ ವಯಸ್ಸಿನ ವೃದ್ಧರೊಬ್ಬರಲ್ಲಿ ಕೊರೋನಾ ದೃಢಪಟ್ಟಿದೆ. ಕಾವು ಅಮ್ಚಿನಡ್ಕ ಕಾಲನಿಯ 26 ವರ್ಷ ವಯಸ್ಸಿನ ಯುವಕರೊಬ್ಬರಲ್ಲಿ ಕೊರೋನಾ ದೃಢ ಪಟ್ಟಿದೆ. ಕಾಲನಿಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ತಪಾಸಣೆ ನಡೆಸಿ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಜು.10ರಂದು ವರದಿಯಲ್ಲಿ ಯುವಕನಿಗೆ ಕೊರೋನಾ ಪಾಸಿಟಿವ್ ಬಂದಿದೆ ಇವರಿಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.