HomePage_Banner
HomePage_Banner
HomePage_Banner
HomePage_Banner

ಬಂಗಾರಪೇಟೆ ತಹಶೀಲ್ದಾರ್ ಹತ್ಯೆ ಅರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ | ಕಂದಾಯ ಇಲಾಖೆ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋಲಾರ ಜಿಲ್ಲೆಯ ಬಂಗಾರಪೇಟೆಯ ತಹಶೀಲ್ದಾರ್ ಚಂದ್ರಮೌಲೇಶ್ವರ ಅವರ ಹತ್ಯೆ ಖಂಡಿಸಿ ಪುತ್ತೂರು ಕಂದಾಯ ಇಲಾಖೆಯ ನೌಕರರು ಜು.10ರಂದು ಕಪ್ಪು ಪಟ್ಟಿ ಧಿರಿಸಿ ಒಂದು ದಿನದ ಪ್ರತಿಭಟನೆ ಹಮ್ಮಿಕೊಂಡಿದ್ದು, ಬೆಳಿಗ್ಗೆ ಮಿನಿ ವಿಧಾನ ಸೌಧದ ಮುಂದೆ ಎಲ್ಲಾ ನೌಕರರು ಮೌನ ಪ್ರತಿಭಟನೆ ಮತ್ತು ಸಂತಾಪ ಸೂಚನೆ ನಡೆಸಿದರು.

ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಮತ್ತು ತಹಶೀಲ್ದಾರ್ ರಮೇಶ್ ಬಾಬು ಟಿ ಅವರ ನೇತೃತ್ವದಲ್ಲಿ ನಡೆದ ಮೌನ ಪ್ರತಿಭಟನೆ ಮತ್ತು ಸಂತಾಪ ಸೂಚನೆ ನಡೆಯಿತು. ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಅವರು ಮಾತನಾಡಿ ಅಧಿಕಾರಿಗಳು ಕರ್ತವ್ಯಕ್ಕೆ ತೆರಳುವಾಗ ಜಾಗರುಕರಾಗಿ ಇರಬೇಕು. ಸರಕಾರಿ ಕೆಲಸ ದೇವರ ಕೆಲಸ ಎಂದು ಕರ್ತವ್ಯಕ್ಕೆ ಚ್ಯುತಿ ಭಾರದ ರೀತಿಯಲ್ಲಿ ಇರುವಂತಹ ಸಂದರ್ಭದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಭಯದ ವಾತಾವಣ ಉಂಟು ಮಾಡಿದೆ. ಯಾರಿಗೂ, ನೋವು ಕೊಡದಂತಹ ಅಧಿಕಾರಿಯ ಮೇಲೆ ಹಾಡುಗಲೇ ಹಲ್ಲೆ ನಡೆಸಿ ಕೊಲೆ ಮಾಡಿದವರ ವಿರುದ್ದ ಕ್ರಮಕ್ಕೆ ಅವರು ಆಗ್ರಹಿದರು. ಕಂದಾಯ ಇಲಾಖೆಯ ನೌಕರರು ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಉಪತಹಸೀಲ್ದಾರ್ ರಾಮಣ್ಣ ನಾಯ್ಕ್, ದಯಾನಂದ್, ಶಶಿಕಲಾ, ಸುಲೋಚನಾ, ಕಂದಾಯ ಇಲಾಖೆಯ ನಾಗೇಶ್, ಶರೀಫ್ ಸೇರಿದಂತೆ ಕಂದಾಯ ಇಲಾಖೆಯ ನೌಕರರು ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.