ಪುತ್ತೂರು: ಕೊರೋನಾ ಮಹಾಮಾರಿಯಿಂದ ವಿಶ್ವವೇ ತತ್ತರಿಸಿದ್ದು, ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಕ್ರಿಯೆಯನ್ನು ಧರ್ಮ ಭೇದ ಬಿಟ್ಟು ಅವರವರ ಸಂಪ್ರದಾಯದ ಬದ್ದವಾಗಿ ಶಾಸ್ತ್ರೋಕ್ತವಾಗಿ ಮಾಡಲು ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಮತ್ತು ನಗರದ ಕಾರ್ಯಕರ್ತರು ಮುಂದೆ ಬಂದಿದ್ದಾರೆ.
ಕೊರೋನಾ ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಗಳ ಅಂತ್ಯಕ್ರಿಯೆಗೆ ಅವರ ಕುಟುಂಬವೇ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣ ಆಗಿರುವ ಸಂದರ್ಭದಲ್ಲಿ ಹಿಂಜಾವೇ ತಂಡ ತಮ್ಮ ಜೀವದ ಹಂಗನ್ನು ತೊರೆದು ಮುಂದೆ ಬಂದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೊಳಪಟ್ಟಿದೆ. ಅಂತ್ಯಕ್ರಿಯೆ ನಡೆಸಲು ಮುಂದೆ ಬಂದಿರುವ ಕಾರ್ಯಕರ್ತರ ಪಟ್ಟಿಯನ್ನು ಪುತ್ತೂರು ತಹಶೀಲ್ದಾರ್ ಅವರಿಗೆ ನೀಡುವ ಮೂಲಕ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಡುವಂತೆ ಹಿಂಜಾವೆ ಮನವಿಯನ್ನೂ ಮಾಡಿದೆ. ಹಿಂದೂ ಜಾಗರಣಾ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರಕಟ್ಟೆ ಅವರು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ.
ಪುತ್ತೂರು ಗ್ರಾಮಾಂತರ ತಂಡ ಹೀಗಿದೆ: ಅಜಿತ್ ರೈ ಹೊಸಮನೆ, ಚಿನ್ಮಯ್ ಈಶ್ವರಮಂಗಲ, ಅಶೋಕ್ ತ್ಯಾಗರಾಜನಗರ, ರಾಜೇಶ್ ಪಂಚೋಡಿ, ಅವಿನಾಶ್ ಪುರುಷರಕಟ್ಟೆ, ಮನೋಜ್ ಉಪ್ಪಂಗಳ, ಪುಷ್ಪರಾಜ್ ಸವಣೂರು, ದಿನೇಶ್ ಪಂಜಿಗ, ಸ್ವಸ್ತಿಕ್ ಸರ್ವೆ, ಅಭಿ ಪುರುಷರಕಟ್ಟೆ, ಶಶಿಕಾಂತ್ ಕೋರ್ಟ್ರೋಡ್, ಹರೀಶ್ಚಂದ್ರ ಪಡುಮಲೆ, ರಾಜೇಶ್ ಬಂಟುಕಲ್ಲು, ಗೌರೀಶ್ ಈಶ್ವರಮಂಗಲ, ಸುನೀಲ್ ತ್ಯಾಗರಾಜನಗರ, ಜಯಂತ್ ಪೆರ್ಲಂಪಾಡಿ, ಪುಟ್ಟಣ್ಣ ಮರಿಕೆ, ದಿವ್ಯೇಶ್ ಮರಿಕೆ, ಪವಿತ್ರ ರೈ ಬಾಳಿಲ, ಸಂತೋಷ್ ಮೇರ್ಲ, ಅಶ್ವತ್ ವೀರಮಂಗಲ, ಹರೀಶ್ ಒಡ್ಯ, ಅನೀಲ್ ಕೌಡಿಚ್ಚಾರ್, ಶಿವ ಕೈಂದಾಡಿ, ಶ್ರೀಕಾಂತ್ ಬೆಳ್ಳಿಪ್ಪಾಡಿ, ಪ್ರಶಾಂತ್ ಆನಡ್ಕ, ಸುನೀಲ್ ಪೆರ್ಲಂಪಾಡಿ, ಸತೀಶ್ ಸುರುಳಿಮೂಲೆ, ಪ್ರಸನ್ನ ಪಡುಮಲೆ, ಸಚಿನ್ ಸವಣೂರು.
ಪುತ್ತೂರು ನಗರ ತಂಡ ಹೀಗಿದೆ: ಕೃಷ್ಣಪ್ರಸಾದ್ ರೈ, ಗಿತೇಶ್ ಮುನ್ನ, ರಾಕೇಶ್ ಓಜಾಲ, ರಾಜ್ ಕೋರ್ಟ್ರೋಡ್, ಪುಷ್ಪರಾಜ್ ದರ್ಬೆ, ಕಿರಣ್ ಬೆದ್ರಾಳ, ಮನೀಶ್ ಬನ್ನೂರು, ಕಾರ್ತಿಕ್ ಕೆಮ್ಮಾಯಿ, ನವೀನ್ ಕೊಡಿಪ್ಪಾಡಿ, ಯೋಗೀಶ್ ಸರ್ವೆ ಅವರನ್ನು ಒಳಗೊಂಡ ತಂಡ ಸಿದ್ಧಗೊಂಡಿದೆ.