Breaking News

ಗೋಳಿಕಟ್ಟೆ: ಆವರಣ ಗೋಡೆ ಕುಸಿದು ಮೃತಪಟ್ಟ ಪ್ರಕರಣ | ಮಹಿಳಾ ಕುಟುಂಬಕ್ಕೆ ಶಾಸಕರಿಂದ ರೂ. 5ಲಕ್ಷ ಪರಿಹಾರ ಧನ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭಾ ವ್ಯಾಪ್ತಿಯ ಪರ್ಲಡ್ಕ ಗೋಳಿಕಟ್ಟೆ ಬೊಳ್ಳಾಣ ಎಂಬಲ್ಲಿ ಪಕ್ಕದ ಮನೆಯ ಆವರಣ ಗೋಡೆ ಕುಸಿದು ಮೃತಪಟ್ಟ ಗೃಹಿಣಿ ವಸಂತಿ ಯಾನೆ ಶೋಭಾ (49ವ) ಅವರ ಕುಟುಂಬಕ್ಕೆ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಕರ್ನಾಟಕ ಸರಕಾರದಿಂದ ಮಂಜೂರಾದ ರೂ. 5ಲಕ್ಷ ಮೊತ್ತವನ್ನು ಶಾಸಕ ಸಂಜೀವ ಮಠಂದೂರು ಅವರು ಜು.10ರಂದು ಮೃತ ಮಹಿಳೆಯ ಮನೆಗೆ ತೆರಳಿ ಪತಿ ಚಂದ್ರಶೇಖರ್‌ಗೆ ಹಸ್ತಾಂತರಿಸಿದರು.

ಜು.7ರಂದು ಆವರಣಗೋಡೆ ಗೋಡೆ ಕುಸಿದು ಮೃತಪಟ್ಟ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮೃತ ಮಹಿಳೆಯ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಪುತ್ತೂರು ಶಾಸಕರ ಪ್ರಸ್ತಾವನೆಯಂತೆ ರೂ. 5ಲಕ್ಷ ಪರಿಹಾರವನ್ನು ತ್ವರಿತವಾಗಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ್ದರು. ಘಟನೆ ನಡೆದ ಮೂರು ದಿನಗಳೊಳಗೆ ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ರಾಜ್ಯ ಸರಕಾರದ ಪರಿಹಾರ ಧನ ಕೈ ಸೇರಿದಂತಾಗಿದೆ. ಪರಿಹಾರ ಧನ ವಿತರಣೆ ಸಂದರ್ಭ ತಹಶೀಲ್ದಾರ್ ರಮೇಶ್ ಬಾಬು, ಸ್ಥಳೀಯ ನಗರಸಭಾ ಸದಸ್ಯೆ ದೀಕ್ಷಾ ಪೈ, ಕಂದಾಯ ನಿರೀಕ್ಷಕ ರವಿ ಕುಮಾರ್, ಬಿಜೆಪಿ ವಾರ್ಡ್ ಕಾರ್ಯದರ್ಶಿ ಸತೀಶ್ ಆಚಾರ್ಯ, ವಿಶ್ವನಾಥ್ ಕುಲಾಲ್ ಪರ್ಲಡ್ಕ, ಜೀವನ್ ಉಪಸ್ಥಿತರಿದ್ದರು.

ಪ್ರಾಕೃತಿಕ ವಿಕೋಪದಲ್ಲಿ ಜೀವ ಹಾನಿಯಾದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಕಾರದಿಂದ ರೂ. 5ಲಕ್ಷ ಪರಿಹಾರ ಧನ ನೀಡಲಾಗುತಿದ್ದು,  ರೂ. 5ಲಕ್ಷವನ್ನು ಗೋಳಿಕಟ್ಟೆಯಲ್ಲಿ ತಡೆಗೋಡೆ ಬಿದ್ದುಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಅದರ ಜೊತೆಯಲ್ಲಿ ಆವರಣಗೋಡೆ ಕುಸಿದು ಅವರ ಮನೆಗೆ ಹಾನಿಯಾದ ಮತ್ತು ದುರಂತಕ್ಕೆ ಕಾರಣವಾದ ತಡೆಗೋಡೆಯ ಕೆಲಸವನ್ನು ಮೇಲಿನ ಮನೆಯವರು ಕಟ್ಟಿ ಕೊಡುವ ಭರವಸೆ ವ್ಯಕ್ತ ಪಡಿಸಿದ್ದಾರೆ. ಅದರ ಜೊತೆಗೆಯಲ್ಲಿ ಮನೆಯ ದುರಸ್ಥಿಯ ಕುರಿತು ಭರವಸೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಏನಾದರೂ ಸಹಕಾರ ಬೇಕಾದಲ್ಲಿ ಅದನ್ನು ಕೊಡಲು ನಾವು ಸಿದ್ಧರಿದ್ದೇವೆ – ಸಂಜೀವ ಮಠಂದೂರು, ಶಾಸಕರು ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.